ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಾಗಮಂಗಲ | ಚಿರತೆ ದಾಳಿಗೆ ನಾಲ್ಕು ಕುರಿಗಳ ಸಾವು

Published 8 ಜನವರಿ 2024, 14:45 IST
Last Updated 8 ಜನವರಿ 2024, 14:45 IST
ಅಕ್ಷರ ಗಾತ್ರ

ನಾಗಮಂಗಲ: ತಾಲ್ಲೂಕಿನ ಹರಳಕೆರೆ ಗ್ರಾಮದ ಸೀತಯ್ಯ ಎಂಬುವರ ಮಗ ಕುಮಾರ್ ಎಂಬ ರೈತನಿಗೆ ಸೇರಿದ ನಾಲ್ಕು ಕುರಿಗಳು ಚಿರತೆ ದಾಳಿಯಲ್ಲಿ ಸಾವನ್ನಪ್ಪಿವೆ. ಅಲ್ಲದೇ ಮೂರು ಕುರಿಗಳಿಗೆ ಗಂಭೀರವಾದ ಗಾಯಗಳಾಗಿವೆ. ಇದರಿಂದ ₹30 ಸಾವಿರ ನಷ್ಟ ಸಂಭವಿಸಿದೆ.

ಸೋಮವಾರ ಮಧ್ಯಾಹ್ನ ಗ್ರಾಮದ ಹೊರವಲಯಲ್ಲಿರುವ ತೆಂಗಿನತೋಟದಲ್ಲಿ 13 ಕುರಿಗಳನ್ನು ಮೇಯಿಸುತ್ತಿದ್ದಾಗ ಚಿರತೆಯು ಏಕಾಏಕಿ ನುಗ್ಗಿ ಕುರಿಗಳ ಮೇಲೆ ದಾಳಿ ನಡೆಸಿದೆ. 2 ಕುರಿಗಳ ಕುತ್ತಿಗೆಯನ್ನು ಸೀಳಿ, ಇನ್ನೆರಡು ಕುರಿಗಳಿಗೆ ಹೊಟ್ಟೆಯನ್ನು ಬಗೆದು ಸಾಯಿಸಿದೆ. ಚಿರತೆ ದಾಳಿಯ ಮಾಹಿತಿ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿ ಮಂಜುನಾಥ್ ನೇತೃತ್ವದ ಸಿಬ್ಬಂದಿ  ಭೇಟಿ ಪರಿಶೀಲನೆ ನಡೆಸಿ ಮರಣೋತ್ತರ ಪರೀಕ್ಷೆ ಮಾಡಿಸಿದ್ದಾರೆ.

ಹರಳಕೆರೆ, ಕರಡಹಳ್ಳಿ ಮತ್ತು ಕಲ್ಲಿನಾಥಪುರ ಗ್ರಾಮದ ವ್ಯಾಪ್ತಿ ಪ್ರದೇಶದಲ್ಲಿ ಚಿರತೆಗಳು ಮೇಲಿಂದ ಮೇಕೆ ದಾಳಿ ನಡೆಸುತ್ತಿದ್ದರೂ ಸಹ ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆಯನ್ನು ಸೆರೆ ಹಿಡಿಯುತ್ತಿಲ್ಲ. ಸೂಕ್ತ ಪರಿಹಾರದ ಜೊತೆಗೆ ಚಿರತೆಯನ್ನು ಸೆರೆಹಿಡಿಯಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

‘ಚಿರತೆಯ ದಾಳಿಯ ಕುರಿತು ಶೀಘ್ರದಲ್ಲಿಯೇ ಸೆರೆ ಹಿಡಿಯಲು ಅಗತ್ಯ ಕ್ರಮವಹಿಸಲಾಗುವುದು. ಕುರಿಗಳನ್ನು ಕಳೆದುಕೊಂಡಿರುವ ರೈತರಿಗೆ ಇಲಾಖೆ ವತಿಯಿಂದ ಸಿಗುವ ಪರಿಹಾರವನ್ನು ತುಪಿಸಲು ಕ್ರಮವಹಿಸಲಾಗುವುದು. ಚಿರತೆ ವಿಚಾರವಾಗಿ ರೈತರು ಆತಂಕ ಪಡುವ ಅಗತ್ಯವಿಲ್ಲ. ಆದರೂ ಸಹ ಜಾಗೃತೆ ವಹಿಸಬೇಕು’ ಎಂದು ಆರ್‌ಎಫ್‌ಒ ಮಂಜುನಾಥ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT