ಸಂತೇಬಾಚಹಳ್ಳಿ: ಇಲ್ಲಿನ ಬಿಲ್ಲೇನಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಗೋವುಗಳ ರಕ್ಷಕ ಕ್ಷೇತ್ರದ ಗವಿರಂಗನಾಥಸ್ವಾಮಿ ಬ್ರಹ್ಮ ರಥೋತ್ಸವ ಜ.16ರಂದು ನಡೆಯಲಿದ್ದು, ಸಿದ್ಧತೆಗಳು ಭರದಿಂದ ಸಾಗಿವೆ.

ವರ್ಷಕ್ಕೆ ಹುಂಡಿ ಕಾಣಿಕೆ, ವಾಣಿಜ್ಯ ಮಳಿಗೆಗಳ ಹರಾಜು, ಅಂಗಡಿ ಮುಂಗಟ್ಟುಗಳ ಹರಾಜು ಸೇರಿ ಮುಜರಾಯಿ ಇಲಾಖೆಗೆ ಲಕ್ಷಾಂತರ ರೂಪಾಯಿ ಆದಾಯ ನೀಡುವ ತಾಲ್ಲೂಕಿನ ಪ್ರಮುಖ ದೇವಾಲಯ ಇದಾಗಿದೆ.

ರಾಜ್ಯದ ವಿವಿಧ ಜಿಲ್ಲೆಗಳಿಂದ ಭಕ್ತರು ಪ್ರತಿನಿತ್ಯ ದೇವಾಲಯಕ್ಕೆ ಆಗಮಿಸುತ್ತಾರೆ. ಅರ್ಚಕ ಸಂಪತ್ ನೇತೃತ್ವದಲ್ಲಿ ಪೂಜೆ ಮತ್ತು ಧಾರ್ಮಿಕ ಕೈಂಕರ್ಯಗಳು ನಡೆಯುತ್ತವೆ. ಗೋವುಗಳ ರಕ್ಷಕ ಎಂದರೆ ಅದು ಗವಿರಂಗನಾಥ ದೇವಾಲಯ ಎಂದು ಹೆಸರುವಾಸಿಯಾಗಿದೆ. ಜಾನುವಾರುಗಳಿಗೆ ಆರೋಗ್ಯದಲ್ಲಿ ಏರುಪೇರಾದರೆ ಭಕ್ತರು ಹರಕೆ ಹೊತ್ತರೆ ಸಾಕು ರೋಗ ಹಾಗೂ ಬಾಧೆ ಮಾಯವಾಗುತ್ತದೆ ಎನ್ನುವುದು ಇಲ್ಲಿನ ಭಕ್ತರ ನಂಬಿಕೆ.

ಕೆ.ಆರ್. ಪೇಟೆ, ಕೆ.ಆರ್. ನಗರ, ನಾಗಮಂಗಲ, ಚನ್ನರಾಯಪಟ್ಟಣ, ಹಾಸನ, ರಾಮನಗರ, ಶ್ರೀರಂಗಪಟ್ಟಣ ಸೇರಿದಂತೆ ವಿವಿಧ ತಾಲ್ಲೂಕಿನ ರೈತರು ಜಾತ್ರೆಗೆ ಜಾನುವಾರು ಕರೆತಂದು ಎಡೆ ಇಟ್ಟು ವಿಶೇಷವಾಗಿ ಪೂಜೆ ಸಲ್ಲಿಸುವುದು ವಾಡಿಕೆಯಾಗಿದೆ.

ಮುಜರಾಯಿ ಇಲಾಖೆಯಿಂದ, ಸಣ್ಣ ನೀರಾವರಿ, ತೋಟಗಾರಿಕೆ, ಲೋಕೋಪಯೋಗಿ ಇಲಾಖೆಯ ಸೇರಿ ವಿವಿಧ ಇಲಾಖೆಯಿಂದ ವಿವಿಧ ಕಾಮಗಾರಿ ಮಾಡಲಾಗಿದೆ. ಭಕ್ತರಿಗೆ ಸ್ನಾನ ಮಾಡಲು ಅನುಕೂಲವಾಗುವಂತೆ ಇನ್ಸ್ಪೆಕ್ಟರ್ ಸುಮಾರಾಣಿ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಸಿದ್ಧತೆ ಮಾಡಿಕೊಳ್ಳಲಾಗಿದೆ. ತಾಲ್ಲೂಕು ಆಡಳಿತ ವತಿಯಿಂದ ಕಲ್ಯಾಣಿ, ಪಾರ್ಕ್ ನಿರ್ವಹಣೆ, ರಸ್ತೆ ಅಭಿವೃದ್ಧಿ, ಗ್ರಾಮ ಪಂಚಾಯಿತಿ ವತಿಯಿಂದ ಸ್ವಚ್ಛತೆ ಕಾಮಗಾರಿ ಪೂರ್ಣಗೊಳಿಸಲಾಗಿದೆ.

ತಹಶೀಲ್ದಾರ್ ಎಸ್.ಯು. ಅಶೋಕ್, ಕಾರ್ಯನಿರ್ವಾಹಕ ಅಧಿಕಾರಿ ಸುಷ್ಮಾ, ಅಬಕಾರಿ ಇನ್ಸ್ಪೆಕ್ಟರ್ ದೀಪಕ್ ಕುಮಾರ್, ಅರಣ್ಯ ಅಧಿಕಾರಿ ಅನಿತಾ, ಉಪ ತಹಶೀಲ್ದಾರ್ ಗೌರಮ್ಮ, ಗ್ರಾಮ ಲೆಕ್ಕಾಧಿಕಾರಿ ರಘು ರಾಜಶೆಟ್ಟಿ, ಪಿ.ಡಿ.ಒ ನವೀನ್, ತಾ.ಪಂ. ಮಾಜಿ ಸದಸ್ಯ ಮೋಹನ್, ಬಿಲ್ಲೇನಹಳ್ಳಿ ಊಟಿ ವೆಂಕಟೇಶ್, ಹರೀಶ್, ವೆಂಕಟೇಶ್, ಜಗದೀಶ್ ಸೇರಿದಂತೆ ಯುವಕರು ಹಾಗೂ ಮುಖಂಡರು ಇದ್ದರು.

ರಥೋತ್ಸವಕ್ಕೆ ವಿವಿಧ ಜಿಲ್ಲೆಗಳಿಂದ ಭಕ್ತರು ಆಗಮಿಸುತ್ತಾರೆ. ಗ್ರಾಮದ ಯುವಕರು ಮುಖಂಡರು ತಾಲ್ಲೂಕು ಆಡಳಿತದ ಜೊತೆ ಕೈಜೋಡಿಸಿ ಶ್ರಮಿಸುತ್ತಿದ್ದಾರೆ
ಬಿ.ಆರ್. ನಂಜಪ್ಪ ಗ್ರಾ.ಪಂ.ಸದಸ್ಯ ಬಿಲ್ಲೇನಹಳ್ಳಿ

ಗವಿರಂಗನಾಥ ರಥೋತ್ಸವ ಜ.16ರಂದು ನಡೆಯಲಿದ್ದು ಪೊಲೀಸ್ ಭದ್ರತೆ ಸ್ವಚ್ಛತೆ ಅಭಿವೃದ್ಧಿ ಸಾರಿಗೆ ವ್ಯವಸ್ಥೆ ಜಾನುವಾರು ಚಿಕಿತ್ಸೆ ಸೇರಿದಂತೆ ಎಲ್ಲ ವ್ಯವಸ್ಥೆ ಮಾಡಲಾಗಿದೆ
ಎಚ್.ಟಿ.ಮಂಜು ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.