ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಂಗಪಟ್ಟಣ: ಅಬ್ಬೆದುಬ್ವಾ ಚರ್ಚ್‌ನಲ್ಲಿ ‘ಶಿಲುಬೆ ಹಾದಿ’ ಆಚರಣೆ

Published 29 ಮಾರ್ಚ್ 2024, 14:16 IST
Last Updated 29 ಮಾರ್ಚ್ 2024, 14:16 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಗಂಜಾಂನ ಅಬ್ಬೆದುಬ್ವಾ ಚರ್ಚ್‌ ಆವರಣದಲ್ಲಿ, ಗುಡ್‌ ಫ್ರೈಡೇ ನಿಮಿತ್ತ ಶುಕ್ರವಾರ ‘ಯೇಸು ಕ್ರಿಸ್ತನ ಶಿಲುಬೆಯ ಹಾದಿ’ ಆಚರಣೆ ನಡೆಯಿತು.

ಯೇಸು ಕ್ರಿಸ್ತನು ಶಿಲಬೆಯನ್ನು ಹೊತ್ತು ಸಾಗುವುದು ಮತ್ತು  ಶಿಲುಬೆಗೆ ಏರಿಸುವ ಪ್ರಂಗವನ್ನು ನೆರೆದಿದ್ದವರ ಎದುರು ಪ್ರಸ್ತುಪಡಿಸಲಾಯಿತು. ಶಿಲುಬೆಯ ಹಾದಿಯ ಒಂದೊಂದು ಹಂತದಲ್ಲೂ ಯೇಸು ಕ್ರಿಸ್ತನ ಮಹಿಮೆಯನ್ನು ಸಾರುವ ಹಾಡುಗಳನ್ನು ಹಾಡಲಾಯಿತು. ಜಾನ್ಸನ್‌ ಮತ್ತು ರಜತ್‌ ಶಿಲುಬೆಯನ್ನು ಹೊತ್ತು ಸಾಗಿದರು. ವೆರೊನಿಕಾ ಎಂಬ ಮಹಿಳೆ ಕ್ರಿಸ್ತನ ಮುಖವನ್ನು ವಸ್ತ್ರದಿಂದ ಒರೆಸಿದ್ದು ಮತ್ತು ಕ್ರಿಸ್ತನ ಮುಖಮುದ್ರೆ ಅದರಲ್ಲಿ ಅಚ್ಚಾದ ಪ್ರಸಂಗ ಗಮನ ಸೆಳೆಯಿತು. ಮುಳ್ಳಿನ ಕಿರೀಟ ಧರಿಸಿ ಶಿಲುಬೆ ಹೊತ್ತು ಸಾಗಿದ ಕಲಾವಿದರು ಗಮನ ಸೆಳೆದರು.

ಚರ್ಚ್‌ನ ಫಾ. ಸಗಾಯ್‌ ಪುಷ್ಪರಾಜ್‌ ನೇತೃತ್ವದಲ್ಲಿ ಶಿಲುಬೆಯ ಹಾದಿ ಆಚರಣೆ ನಡೆಯಿತು. ಬಳಿಕ ಚರ್ಚ್‌ನ ಸಭಾಂಗಣದಲ್ಲಿ ಸಾಮೂಹಿಕ ಪ್ರಾರ್ಥನೆ ಮತ್ತು ಬೈಬಲ್‌ ವಾಕ್ಯಗಳ ಪಠನಗಳು ಜರುಗಿದವು. ಜೀವನ ಜ್ಯೋತಿ ಸಂಸ್ಥೆಯ ಫಾ.ಸೆಬಾಸ್ಟಿನ್‌, ಫಾ.ರಾಯ್‌, ಬ್ರ.ಪೌಲ್‌, ಆಂಟನಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT