ಶ್ರೀರಂಗಪಟ್ಟಣ: ತಾಲ್ಲೂಕಿನ ಪಾಲಹಳ್ಳಿಯ ರೌಡಿಶೀಟರ್ ಹರೀಶ್ ಅಲಿಯಾಸ್ ಕಳ್ಳುಪಚ್ಚಿ ಹರೀಶ್ ಕೊಲೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಪಟ್ಟಣದ ಗೋಸೇಗೌಡರ ಬೀದಿಯ ಸತ್ಯನಾರಾಯಣ ಅಲಿಯಾಸ್ ಆರ್‌ಎಕ್ಸ್, ಅಂಚೆಕೇರಿ ಬೀದಿಯ ಭರತ್‌ಕುಮಾರ್ ಅಲಿಯಾಸ್ ಬಂಡೆ ಭರತ, ಗಂಜಾಂನ ಆರ್ಕಾಟ್ ಬೀದಿಯ ರಕ್ಷಿತ್ ಅಲಿಯಾಸ್ ಕುಂಟ, ಇಬ್ರಾಹಿಂ ಪಾಷ, ಮೈಸೂರು ತಾಲ್ಲೂಕು ಸಿದ್ದಲಿಂಗಪುರದ ದರ್ಶನ್, ಇದೇ ಗ್ರಾಮದ ಧರ್ಮರತ್ನಾಕರ ಅಲಿಯಾಸ್ ಮಾಲಿಂಗ ಅವರನ್ನು ಮಂಡ್ಯ ತಾಲ್ಲೂಕು ಗಾಣದಾಳು ಗ್ರಾಮದ ಬಳಿ ನ.1ರಂದು ಬಂಧಿಸಲಾಗಿದೆ.

ನ.2ರಂದು ನ್ಯಾಯಾಲಯದ ಮುಂದೆ ಹಾಜರುಪಡಿಸಿ ವಿಚಾರಣೆಗಾಗಿ ಪೊಲೀಸರು ವಶಕ್ಕೆ ಪಡೆದಿದ್ದರು.

ಆರೋಪಿಗಳು ಮತ್ತು ಹತ್ಯೆಯಾದ ಹರೀಶ್ ನಡುವೆ ಒಂದು ತಿಂಗಳ ಹಿಂದೆ ಗಲಾಟೆ ನಡೆದಿತ್ತು. ಆ ದ್ವೇಷದ ಹಿನ್ನೆಲೆಯಲ್ಲಿ ಅ.22ರಂದು ಮಾರಕಾಸ್ತ್ರಗಳಿಂದ ಕೊಚ್ಚಿ ಹರೀಶನನ್ನು ಹತ್ಯೆ ಮಾಡಿದ್ದರು. ಕೃತ್ಯಕ್ಕೆ ಬಳಸಿದ್ದ ಓಮ್ನಿ ಕಾರು, ಒಂದು ಬೈಕ್, ಲಾಂಗ್‌ಗಳು ಹಾಗೂ ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳ ಪೈಕಿ ಸತ್ಯನಾರಾಯಣ, ರಕ್ಷಿತ್, ದರ್ಶನ್, ಭರತ್‌ಕುಮಾರ್ ಈ ಹಿಂದೆ ಎರಡು ಕೊಲೆ ಯತ್ನ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಎಸ್ಪಿ ಕೆ. ಪರಶುರಾಂ ಮತ್ತು ಡಿವೈಎಸ್ಪಿ ಅರುಣ್‌ನಾಗೇಗೌಡ ಅವರ ಮಾರ್ಗದರ್ಶನದಲ್ಲಿ ಸಿಪಿಐ ಡಿ. ಯೋಗೇಶ್, ಎಸ್‌ಐಗಳಾದ ಕೆ.ಎನ್. ಗಿರೀಶ್, ನವೀನ್‌ಗೌಡ, ಎಸ್.ಬಿ. ಶಿವಮಂಜು, ಸಿಬ್ಬಂದಿಗಳಾದ ನಾರಾಯಣ, ವಿಜಯಕುಮಾರ್, ಶ್ರೀನಿವಾಸಮೂರ್ತಿ, ಅರುಣಕುಮಾರ್, ರವೀಶ್, ಆನಂದ್ ಇತರರನ್ನು ಒಳಗೊಂಡ ತಂಡ ಆರೋಪಿಗಳನ್ನು ಬಂಧಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.