ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಶಾಂತಿ ಮೂಡಿಸುತ್ತಿರುವ ಎಚ್‌ಡಿಕೆ: ಎನ್‌.ಚಲುವರಾಯಸ್ವಾಮಿ

Published 30 ಜನವರಿ 2024, 15:44 IST
Last Updated 30 ಜನವರಿ 2024, 15:44 IST
ಅಕ್ಷರ ಗಾತ್ರ

ಮಂಡ್ಯ: ‘ಕೇಸರಿ ಶಾಲು ಧರಿಸಿದ ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿಯವರು ಕೆರಗೋಡು ಘಟನೆಯನ್ನು ಮುಂದಿಟ್ಟಕೊಂಡು ಜಿಲ್ಲೆಯಲ್ಲಿ ಅಶಾಂತಿ ಮೂಡಿಸಲು ಯತ್ನಿಸುತ್ತಿದ್ದಾರೆ, ನೆಮ್ಮದಿ ಕೆಡಿಸುತ್ತಿದ್ದಾರೆ’ ಎಂದು ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಮಂಗಳವಾರ ಆರೋಪಿಸಿದರು.

‘2018ರ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಏಳೂ ಕ್ಷೇತ್ರದಲ್ಲಿ ಜೆಡಿಎಸ್‌ ಗೆದ್ದಿತ್ತು. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲು ಜಿಲ್ಲೆಯ ಕೊಡುಗೆ ದೊಡ್ಡದು. ಆಗ ಜಿಲ್ಲೆಗೆ ಯಾವುದೇ ಶಾಶ್ವತ ಯೋಜನೆ ನೀಡದೆ, ಈಗ ಬಂದು ಏಕೆ ಅಶಾಂತಿ ಸೃಷ್ಟಿಸಬೇಕು’ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.

‘ಮಾಜಿ ಪ್ರಧಾನಿ ಮಗನೆಂದರೆ ಸಾಧಾರಣ ವ್ಯಕ್ತಿಯಲ್ಲ. ಅಂಥವರು ಜಿಲ್ಲೆಗೆ ಬಂದು ಕೋಮು ಪ್ರಚೋದನೆ ಮಾಡುವುದು ಸರಿಯಲ್ಲ. ನಿಮ್ಮ ಕುಟುಂಬದ ಹಿತಾಸಕ್ತಿಗಾಗಿ ಜಯಪ್ರಕಾಶ ನಾರಾಯಣರ ಹೋರಾಟಕ್ಕೆ ತಿಲಾಂಜಲಿ ಇಟ್ಟಿದ್ದೀರಿ. ಹಸಿರು ಟವೆಲ್‌ ಬಿಟ್ಟು ಕೇಸರಿ ಶಾಲು ಧರಿಸಿ ರಾಷ್ಟ್ರಧ್ವಜದ ವಿರುದ್ಧ ನಿಂತಿದ್ದೀರಿ. ಯಾವ ಉದ್ದೇಶಕ್ಕಾಗಿ ಹೋರಾಡುತ್ತಿದ್ದೀರೆಂದು  ಸ್ಪಷ್ಟಪಡಿಸಬೇಕು’ ಎಂದು ಒತ್ತಾಯಿಸಿದರು.

‘ದೇಶದಲ್ಲಿ ಇಂದಿರಾಗಾಂಧಿ ಸೇರಿ ಅನೇಕರು ಸೋತಿದ್ದಾರೆ, ಸೋತಾಗ ತಾಳ್ಮೆಯಿಂದ ಇರಬೇಕು. ವಿರೋಧ ಪಕ್ಷವಾಗಿ ಸಲಹೆ– ಸೂಚನೆ ಕೊಡಬೇಕು. ರಾಜಕೀಯ ಶಕ್ತಿಗಾಗಿ ಬಿಜೆಪಿ ಸೇರಿ ಜಾತ್ಯತೀತ ವಾದಕ್ಕೆ ಅಂತ್ಯ ಹಾಡಿದ್ದೀರಿ. ಸಿಂಗಪುರದಲ್ಲಿ ಕುಳಿತು ಬಿಜೆಪಿ ವಿರುದ್ಧ ಏನೇನೆಲ್ಲಾ ಮಾತನಾಡಿದ್ದೀರಿ ಎಂಬುದು ಗೊತ್ತಿದೆ’ ಎಂದರು.

‘ಹೊರಜಿಲ್ಲೆಗಳಿಂದ ಮಂಡ್ಯಕ್ಕೆ ಕಿಡಿಗೇಡಿಗಳು ಬಂದಿದ್ದು ಗೊಂದಲ ಸೃಷ್ಟಿಸುತ್ತಿದ್ದಾರೆ. ನೂತನ್‌ ಎಂಬ ವ್ಯಕ್ತಿ ಚಿಕ್ಕಮಗಳೂರಿನಿಂದ ಬಂದು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಅಲ್ಲಿನ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ಅವರ ಮೇಲೆ ಪೊಲೀಸರು ಕಣ್ಣಿಟ್ಟಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT