ಭಾರತೀನಗರ: ‘ನಾನು ರಾಜಕಾರಣ ಮಾಡಲು ಬಂದಿಲ್ಲ. ಇದು ರಾಜಕಾರಣ ಮಾಡುವ ಸಮಯವು ಅಲ್ಲ’ ಎಂದು ವಿಧಾನ ಪರಿಷತ್ ಸದಸ್ಯ ಮಧು.ಜಿ. ಮಾದೇಗೌಡ ತಿಳಿಸಿದರು.
ಅಣ್ಣೂರು ಗ್ರಾಮದಲ್ಲಿ ಮಾರಮ್ಮ ಸೇವಾ ಸಮಿತಿಯಿಂದ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮಲ್ಲಿ ಮಾತನಾಡಿದರು.
‘ನಾನು ಜನರ ಸೇವೆ ಮಾಡಲು ಬಂದಿದ್ದೇನೆ. ನಮ್ಮ ತಂದೆ ಜಿ.ಮಾದೇಗೌಡರು ರಾಜಕಾರಣ ಮಾಡುವುದನ್ನು ಕಲಿಸಿಕೊಟ್ಟಿದ್ದಾರೆ. ನನಗೆ ಯಾರೇ ಮೋಸ ಮಾಡಿದರೂ ತಡೆದುಕೊಳ್ಳುವ ಶಕ್ತಿಯಿದೆ. ಯಾವುದೇ ಸಂದರ್ಭ ಬಂದರೂ ನನ್ನ ಬಳಿಗೆ ನೇರ ಬಂದು ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ. ಅಣ್ಣೂರು ಗ್ರಾಮ ನನಗೆ ನಮ್ಮ ಗ್ರಾಮವಿದ್ದಂತೆ’ ಎಂದರು.
‘ಈ ಗ್ರಾಮದ ಎ.ಟಿ.ಬಲ್ಲೇಗೌಡ ಅವರು ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ತಮ್ಮ ವೈಯುಕ್ತಿಕ ಯೋಚನೆಗಳನ್ನು ಬಿಟ್ಟು ಸಮಾಜಕ್ಕೆ ಉಪಯೋಗಿಯಾದ ಕೆಲಸ ಮಾಡಿದ್ದಾರೆ. ಜೊತೆಗೆ ನಮ್ಮ ಭಾರತಿ ವಿದ್ಯಾಸಂಸ್ಥೆಗೆ ಬಲ್ಲೇಗೌಡ, ಹೊಂಬಯ್ಯ ಅವರ ಕೊಡುಗೆ ಇದೆ. ನಮ್ಮಿಂದಲೇ ಜಿಲ್ಲಾಪಂಚಾಯಿತಿ ಸದಸ್ಯರಾದ ಕೆಲವರು ತಮ್ಮ ವೈಯುಕ್ತಿಕವಾಗಿ ಅನುದಾನವನ್ನು ಬಳಸಿಕೊಂಡಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಗ್ರಾಮ ದೇವತೆ ಮಾರಮ್ಮ ದೇವಸ್ಥಾನದ ಅಭಿವೃದ್ದಿಗೆ ₹5 ಲಕ್ಷ ಅನುದಾನ ನೀಡಿದ್ದೆ. ದೇವಸ್ಥಾನ ತುಂಬಾ ಅಚ್ಚುಕಟ್ಟಾಗಿ ಬರುತ್ತಿರುವುದರಿಂದ ಮತ್ತೆ ₹5 ಲಕ್ಷ ನೀಡುತ್ತೇನೆ’ ಎಂದು ಭರವಸೆ ನೀಡಿದರು.
ಮುಖಂಡ ಎ.ಟಿ.ಬಲ್ಲೇಗೌಡ ಮಾತನಾಡಿದರು.
ಶಾಸಕ ಮಧುಜಿಮಾದೇಗೌಡ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಅಭಿಮಾನಿಗಳು ಜೈಕಾರ ಹಾಕಿ, ಪಟಾಕಿ ಸಿಡಿ ಸಂಭ್ರಮಿಸಿದರು. ನಂತರ ಅಭಿಮಾನಿಗಳು ವೇದಿಕೆಗೆ ಕರೆತಂದು ಬೃಹತ್ ಗಾತ್ರದ ಹಾರ ಹಾಕಿ ನೆನಪಿನ ಕಾಣಿಕೆ ನೀಡಿ ಪೇಟ ತೋಡಿಸಿ ಅದ್ದೂರಿಯಾಗಿ ಅಭಿನಂದಿಸಿದರು.
ಮುಖಂಡರಾದ ಎ.ಸಿ.ಸತೀಶ್, ಅಣ್ಣೂರು ನವೀನ್, ಸಿದ್ದರಾಮೇಗೌಡ, ಶ್ರೀಮಾರಮ್ಮ ಸೇವಾಸಮಿತಿಯ ಅಧ್ಯಕ್ಷ ಪುಟ್ಟೇಗೌಡರ ಸಿದ್ದರಾಮೇಗೌಡ, ಪರಿಸರ ಜಾಗೃತಿ ವೇದಿಕೆಯ ತಾಲ್ಲೂಕು ಅಧ್ಯಕ್ಷ ಅಣ್ಣೂರು ಸತೀಶ್, ಆರ್.ಸಿದ್ದಪ್ಪ, ದೇವರಾಜು ಹೊಂಡಾ ಸಿದ್ದೇಗೌಡ, ರಾಜಣ್ಣ, ಪ್ರಸನ್ನ, ರಾಮು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.