ಶುಕ್ರವಾರ, ಮಾರ್ಚ್ 24, 2023
23 °C

ನಾಗಮಂಗಲ: ‘ಟೀಕೆ ನಿರ್ಲಕ್ಷಿಸಿ ಮುನ್ನಡೆಯಿರಿ’:ಅಂಬುಜಾಕ್ಷನ್ ನಾಯರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಾಗಮಂಗಲ: ‘ನಾವು ಗುರಿ ಸಾಧಿಸ‌ಲು ಹೊರಟಾಗ ನಮ್ಮನ್ನು ಬೆಂಬಲಿಸಿ ಬೆನ್ನು ತಟ್ಟುವ ಜನರಿಗಿಂತ ಟೀಕಿಸುವ ಜನರೇ ಹೆಚ್ಚಿರುತ್ತಾರೆ. ಟೀಕೆಗಳನ್ನು ನಿರ್ಲಕ್ಷಿಸಿ ಮುನ್ನಡೆದರೆ ಮಾತ್ರ ಸಾಧನೆ ಮಾಡಲು ಸಾಧ್ಯವಾಗುತ್ತದೆ’ ಎಂದು ಸಾಧ್ಯ ಎಂದು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ನ ವಿತರಣಾ ಮುಖ್ಯಸ್ಥ ಅಂಬುಜಾಕ್ಷನ್ ನಾಯರ್ ಹೇಳಿದರು.

ಪಟ್ಟಣದ ಆದಿಚುಂಚನಗಿರಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ವೃತ್ತಿ ಮಾರ್ಗದರ್ಶನ, ಉದ್ಯೋಗ ಮಾಹಿತಿ ಕೋಶ, ಐಕ್ಯುಎಸಿ ವಿಭಾಗ, ಟಿಸಿಎಸ್, ಸಿಎಸ್ಆರ್ ಯೂತ್ ಎಂಪ್ಲಾಯ್‌ಮೆಂಟ್‌ ಘಟಕ ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ಸಂಸ್ಕೃತಿಯು ನೈಜ ಸಂಸ್ಕೃತಿಯಾಗಿದ್ದು, ಮನಸ್ಸುಗಳ ಮತ್ತು ಸಮಾಜದ ನಡುವೆ, ನಂಬಿಕೆ ನಿರ್ಮಾಣವಾಗಬೇಕು. ಉದ್ಯೋಗ ವನ್ನು ಅರಸಿ ಹೊರಟಾಗ ಜಗತ್ತಿನ ಆಗು ಹೋಗುಗಳ ಬಗ್ಗೆ ತಿಳಿದುಕೊಳ್ಳಬೇಕು. ತಂತ್ರಜ್ಞಾನವನ್ನು ಶೈಕ್ಷಣಿಕವಾಗಿ ಬಳಸಿಕೊಳ್ಳಬೇಕು ಎಂದರು.

ಅವಕಾಶಗಳು, ತರಬೇತಿ, ಸಮಾಜ ಸೇವೆ ಲಕುರಿತು ಅವರು ವಿವರಿಸಿದರು.

ಶೃಂಗೇರಿ, ಚಿಕ್ಕಬಳ್ಳಾಪುರ, ಮೈಸೂರು, ಬೆಂಗಳೂರು, ಚಿಕ್ಕಮಗಳೂರು, ಹಾಸನದ ಕಾಲೇಜುಗಳ ಪ್ರಾಂಶುಪಾಲರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಎಸ್.ರವೀಂದ್ರ ಮಾತನಾಡಿ, ಜೀವನದಲ್ಲಿ ಗುರಿ ಸಾಧನೆಗೆ ಕೌಶಲ್ಯ ಅಗತ್ಯವಾಗಿದೆ. ಕೌಶಲವೇ ಜೀವನದ ಸಾರತಿಯಾಗಿರುತ್ತದೆ. ಸ್ಪರ್ಧಾತ್ಮಕ ಯುಗಕ್ಕೆ ಯುವ ಪೀಳಿಗೆಯನ್ನು ಸಜ್ಜುಗೊಳಿಸಬೇಕು ಎಂದು ಅವರು ಸಲಹೆ ನೀಡಿದರು.

ಕಾಲೇಜಿನ ಗವರ್ನಿಂಗ್ ಕೌನ್ಸಿಲ್ ಸದಸ್ಯ ಎಚ್.ಟಿ.ಕೃಷ್ಟೇಗೌಡ, ವಿವೇಕ್ ಜವಲಗಿ, ವೃತ್ತಿ ಮಾರ್ಗದರ್ಶನ ಮತ್ತು ಉದ್ಯೋಗ ಮಾಹಿತಿ ಕೋಶ ವಿಭಾಗದ ಡಾ.ಎಂ.ರವಿಕುಮಾರ್, ಎಂ.ಗುಣವತಿ, ಕೆ.ಬಿ.ಚಂದ್ರಕಲಾ, ಶರತ್ ಬಾಬು, ಎನ್.ಆರ್.ವೇದವತಿ, ಆರ್.ಮೋಹನ್ ಕುಮಾರ್, ಇಂದುಶ್ರೀ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು