ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯಲ್ಲಿ ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆ ಜಾರಿ

ಭಾರತೀ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ ಅಧ್ಯಕ್ಷ ಮಧು.ಜಿ.ಮಾದೇಗೌಡ
Published 21 ಸೆಪ್ಟೆಂಬರ್ 2023, 11:04 IST
Last Updated 21 ಸೆಪ್ಟೆಂಬರ್ 2023, 11:04 IST
ಅಕ್ಷರ ಗಾತ್ರ

ಭಾರತೀನಗರ: ‘ಭಾರತೀ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯಲ್ಲಿ ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆ ಮತ್ತು ಆಧುನಿಕ ತಂತ್ರಜ್ಞಾನ ಬಳಸಿ ಉತ್ತಮ ಸೇವೆ ನೀಡಲಾಗುತ್ತಿದೆ’ ಎಂದು ಭಾರತೀ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಅಧ್ಯಕ್ಷ ಹಾಗೂ ಶಾಸಕ ಮಧು.ಜಿ.ಮಾದೇಗೌಡ ತಿಳಿಸಿದರು.

ಪಟ್ಟಣದಲ್ಲಿ ನಡೆದ ಸೊಸೈಟಿಯ ಸರ್ವಸದಸ್ಯರ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘2010ರಲ್ಲಿ 534 ಸದಸ್ಯರಿಂದ ₹10.68 ಲಕ್ಷದಿಂದ ಪ್ರಾರಂಭವಾದ ಸಂಘ ಇಂದು 1205 ಸದಸ್ಯರನ್ನು ಹೊಂದಿದೆ. ಈಗ ಸಂಘವು ₹32 ಕೋಟಿ ವ್ಯವಹಾರದಲ್ಲಿ ತೊಡಗಿದ್ದು 2022-23ನೇ ಸಾಲಿನಲ್ಲಿ ₹57.90 ಲಕ್ಷ ನಿವ್ವಳ ಲಾಭ ಗಳಿಸಿದೆ. ಈ ಲಾಭಾಂಶದಿಂದ ಷೇರುದಾರರಿಗೆ ಶೇ25ಡೆವಿಡೆಂಟ್ ನೀಡಲಾಗುವುದು’ ಎಂದರು.

‘ಲೆಕ್ಕಪತ್ರವನ್ನು ಗಣಕೀಕರಣಗೊಳಿಸಿ ಸಾಫ್ಟ್‌‌‌ವೇರ್ ಅಳವಡಿಸಲಾಗಿದೆ. ಭಾರತೀ ಗೃಹ ನಿರ್ಮಾಣ ಸಹಕಾರ ಸಂಘ ₹67 ಸಾವಿರ ಲಾಭಗಳಿಸಿ ಅಭಿವೃದ್ದಿಯತ್ತ ದಾಪುಗಾಲು ಇಡುತ್ತಿದೆ. ಸದಸ್ಯರಿಗೆ ಮಂಡ್ಯದಲ್ಲಿ ಜಮೀನು ಪಡೆದು ನಿವೇಶನ ಕಲ್ಪಿಸುವ ಆಲೋಚನೆ ಮಾಡಲಾಗಿದೆ’ ಎಂದರು.

‘ಭಾರತೀ ವಿವಿದೋದ್ದೇಶ ಸಹಕಾರ ಸಂಘ 302 ಸದಸ್ಯರಿಂದ ₹6.04 ಲಕ್ಷ ಬಂಡವಾಳ ಹೂಡಿಕೆ ಮಾಡಿ ಈಗ ₹3 ಕೋಟಿ ವ್ಯವಹಾರ ನಡೆಯುತ್ತಿದ್ದು 2022-23ನೇ ಸಾಲಿನಲ್ಲಿ ಸಂಘವು ₹2.98 ಲಕ್ಷ ನಿವ್ವಳ ಲಾಭಗಳಿಸಿದೆ. ಇದರಿಂದ ಸಂಘದ ಸದಸ್ಯರಿಗೆ ₹700 ಮೌಲ್ಯದ ಉಡುಗೊರೆ ನೀಡಲಾಗುತ್ತಿದೆ’ ಎಂದರು.

ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಸ್.ನಾಗರಾಜು ವಾರ್ಷಿಕ ವರದಿ ಮಂಡಿಸಿದರು.
ಭಾರತೀ ಕಾಲೇಜಿನ ಸಿಇಓ ಆಶಯ್ ಮಧು, ಸಂಘದ ಉಪಾಧ್ಯಕ್ಷ ಬಿ.ಎಂ.ನಂಜೇಗೌಡ, ನಿರ್ದೇಶಕರಾದ ಸಿದ್ದೇಗೌಡ, ಚಂದೂಪುರ ಪಾಪಣ್ಣ, ಎಸ್.ಜಯರಾಮು, ಜಿ.ಕೃಷ್ಣ, ಡಾ.ಸುರೇಶ್, ಶಿವಸ್ವಾಮಿ, ಡಾ.ತಮಿಜ್ಮಣಿ, ಪಿ.ನಾಗಮಾದಯ್ಯ, ಎಚ್.ಪಿ.ಪ್ರತಿಮಾ, ನೌಕರರಾದ ಪ್ರಮೋದ್, ಅನಿತಾ, ಸಿದ್ದರಾಜು, ಸುಚಿತ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT