ಭಾನುವಾರ, ಮೇ 9, 2021
26 °C

ಕಳಪೆ ಬೆಲ್ಲ: ಪ್ರಕರಣ ದಾಖಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ನಗರದ ಎಪಿಎಂಸಿ ಬೆಲ್ಲದ ಮಾರುಕಟ್ಟೆಯಲ್ಲಿ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು ಸಂಗ್ರಹಿಸಿದ್ದ ಬೆಲ್ಲದ ಮಾದರಿಯ ಫಲಿತಾಂಶ ಬುಧವಾರ ಪ್ರಕಟಗೊಂಡಿದೆ.

ಎಪಿಎಂಸಿಯಲ್ಲಿ ಸಂಗ್ರಹಿಸಲಾಗಿದ್ದ ಒಟ್ಟು ಐದು ಮಾದರಿಯಲ್ಲಿ ಮೂರು ಬೆಲ್ಲದ ಮಾದರಿ ಕಳಪೆ ಎಂಬ ವರದಿ ಬಂದಿದ್ದು ಬೆಲ್ಲ ಮಾರಾಟ ಮಾಡುತ್ತಿದ್ದ ವರ್ತಕರ ವಿರುದ್ಧ ಆಹಾರ ಸುರಕ್ಷತಾ ಕಾಯ್ದೆ ಕಲಂ 51ರ ಅಡಿ ಪ್ರಕರಣ ದಾಖಲು ಮಾಡಲಾಗುವುದು ಎಂದು ಪ್ರಾಧಿಕಾರದ ಅಂಕಿತ ಅಧಿಕಾರಿ ಬೆಟ್ಟಸ್ವಾಮಿ ತಿಳಿಸಿದ್ದಾರೆ.

ಉಳಿದ ಎರಡು ಮಾದರಿಗಳು ರಾಸಾಯನಿಕ ಮಿತಿಯಲ್ಲಿದೆ. ತಾಲ್ಲೂಕಿನ ಪಣಕನಹಳ್ಳಿ ಆಲೆಮನೆಯಲ್ಲಿ ದೊರೆತ ಬೆಲ್ಲದಲ್ಲಿ ರಾಸಾಯನಿಕ ಅಂಶ ಮಿತಿಯಲ್ಲಿದೆ. ಎಪಿಎಂಸಿಯಲ್ಲಿರುವ ಕಂಡುಬಂದಿರುವ ಕಳಪೆ ಬೆಲ್ಲವನ್ನು ಮಾರಾಟ ಮಾಡುವಂತಿಲ್ಲ. ಅಗರ್‌ಬತ್ತಿ ಹಾಗೂ ಇನ್ನಿತರ ಉತ್ಪನ್ನ ತಯಾರಿಕೆಗೆ ಬಳಸಬೇಕು ಎಂದು ಸೂಚಿಸಲಾಗಿದೆ. ಜಪ್ತಿ ಮಾಡಿದ್ದ ಬೆಲ್ಲವನ್ನು ತೆರವುಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು