ಮಂಡ್ಯ: ಕರ್ನಾಟಕ ಪುಸ್ತಕ ಪ್ರಾಧಿಕಾರ ನೀಡುವ ವಿವಿಧ ವಾರ್ಷಿಕ ಪ್ರಶಸ್ತಿಗಳಲ್ಲಿ ಮಂಡ್ಯ ಜಿಲ್ಲೆಗೆ ಎರಡು ಪ್ರಶಸ್ತಿಗಳು ದೊರೆತಿವೆ. ಡಾ.ಜಿ.ಪಿ. ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿಗೆ ಜಿಲ್ಲೆಯ ಸಾಂಸ್ಕೃತಿಕ ರಾಯಭಾರಿ, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಹಾಗೂ ಪುಸ್ತಕ ಮುದ್ರಣ ಸೊಗಸು ಬಹುಮಾನಕ್ಕೆ ಮಂಡ್ಯದ ಅವಿನಾಶ್ ಗ್ರಾಫಿಕ್ಸ್ ಆಯ್ಕೆಯಾಗಿದೆ.

2022ನೇ ಸಾಲಿನ ಪ್ರಶಸ್ತಿಗೆ ಪ್ರೊ.ಬಿ. ಜಯಪ್ರಕಾಶಗೌಡ ಅವರನ್ನು ಹಾಗೂ 2024ನೇ ಸಾಲಿನ ಪ್ರಶಸ್ತಿಗೆ ಅವಿನಾಶ್ ಗ್ರಾಫಿಕ್ಸ್ ಪರಿಗಣಿಸಲಾಗಿದೆ. ರಾಜರತ್ನಂ ಪ್ರಶಸ್ತಿಯು ₹50 ಸಾವಿರ ನಗದು ಮತ್ತು ಪುಸ್ತಕ ಮುದ್ರಣ ಸೊಗಸು ಬಹುಮಾನವು ₹5 ಸಾವಿರ ನಗದು ಒಳಗೊಂಡಿದೆ.

ಕರ್ನಾಟಕ ಸಂಘದ ಇಂದಿನ ಬೆಳವಣಿಗೆಗೆ ಜೆಪಿ ಅವರೇ ಪ್ರಮುಖ ಕಾರಣರಾಗಿದ್ದಾರೆ. ಗೆಳೆಯರ ಬಳಗ, ಜನದನಿ ಟ್ರಸ್ಟ್ ಸ್ಥಾಪನೆಯಲ್ಲಿ ಕೂಡ ಪ್ರಮುಖ ಪಾತ್ರ ವಹಿಸಿದ್ದಾರೆ. ಮೂಡಲಪಾಯ ಯಕ್ಷಗಾನ ಕಲೆಯ ಪುನರುತ್ಥಾನಕ್ಕೆ ಶ್ರಮಿಸುತ್ತಿದ್ದಾರೆ. ಕರ್ನಾಟಕ ಸಂಘದ ಮೂಲಕ ನಾಟಕ ತಂಡಗಳನ್ನು ಕಟ್ಟಿ ಹತ್ತಾರು ನಾಟಕಗಳ ಪ್ರದರ್ಶನ ಮತ್ತು ರಂಗ ಪ್ರಯೋಗಗಳನ್ನು ಮಾಡಿದ್ದಾರೆ.

ಇನ್ನು ಅವಿನಾಶ್ ಗ್ರಾಫಿಕ್ ಸಂಸ್ಥೆಯು ಜಿಲ್ಲೆಯ ಪುಸ್ತಕಗಳ ಮುದ್ರಣ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದೆ. ಈವರೆಗೆ ನೂರಾರು ಪುಸ್ತಕಗಳನ್ನು ಮುದ್ರಣ ಮಾಡಿದ್ದಾರೆ.

‘ನಮ್ಮ ಮುದ್ರಣ ಸೊಗಸನ್ನು ಸರ್ಕಾರ ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ನಮಗೆ ಪ್ರೇರಣೆ ನೀಡಿದಂತಾಗಿದೆ. ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡರ ಮಾರ್ಗದರ್ಶನವು ನಮ್ಮನ್ನು ಪ್ರಶಸ್ತಿಯ ಹತ್ತಿರಕ್ಕೆ ಕೊಂಡೊಯ್ದಿದಿದೆ. ಇದಕ್ಕೆ ಕಾರಣರಾದ ಜಿಲ್ಲೆಯ ಎಲ್ಲ ಸಾಹಿತಿಗಳಿಗೆ ಧನ್ಯವಾದ ಸಲ್ಲಿಸುತ್ತೇನೆ’ ಎಂದು ಅವಿನಾಶ್ ಗ್ರಾಫಿಕ್ಸ್ ಮಾಲೀಕರಾದ ಎನ್.ನಾಗರಾಜ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.