ಶುಕ್ರವಾರ, 1 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

115 ಅಡಿ ದಾಟಿದ ಕೆಆರ್‌ಎಸ್‌ ಜಲಾಶಯ

Last Updated 6 ಜುಲೈ 2022, 13:35 IST
ಅಕ್ಷರ ಗಾತ್ರ

ಮಂಡ್ಯ: ಕೊಡಗು ಜಿಲ್ಲೆ ಸೇರಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಕಾರಣ ಕೆಆರ್‌ಎಸ್‌ ಜಾಲಾಶಯದ ಒಳಹರಿವು 30 ಸಾವಿರ ಕ್ಯುಸೆಕ್‌ ದಾಟಿದೆ. ಬುಧವಾರ ಸಂಜೆ ವೇಳೆಗೆ ಜಲಾಶಯದ ನೀರಿನ ಮಟ್ಟ 115.70 ಅಡಿಗೆ ತಲುಪಿದೆ.

ಕಳೆದ ಮೂರು ದಿನಗಳಿಂದೀಚೆಗೆ ಜಲಾಶಯಕ್ಕೆ 7 ಅಡಿಯಷ್ಟು ನೀರು ಹರಿದು ಬಂದಿದೆ. ಜುಲೈ 3ರಂದು ಜಲಾಶಯದ ನೀರಿನ ಮಟ್ಟ 108.80 ಅಡಿ ಇತ್ತು, 8,769 ಕ್ಯುಸೆಕ್‌ ಒಳಹರಿವು, 1,218 ಕ್ಯುಸೆಕ್‌ ಹೊರಹರಿವು ಇತ್ತು. ಬುಧವಾರ ನೀರಿನ ಮಟ್ಟ 115 ಅಡಿ ದಾಟಿದ್ದು 30,923 ಕ್ಯುಸೆಕ್‌ ಒಳಹರಿವು, 3,575 ಹೊರಹರಿವು ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT