ಶನಿವಾರ, ಜುಲೈ 24, 2021
27 °C

ಮಡಿಕೇರಿ ಆಕಾಶವಾಣಿ ಬಳಿ ಮಣ್ಣು ಕುಸಿತ: ಅಪಾಯದಿಂದ ಪಾರಾದ 7 ಕಾರ್ಮಿಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ನಗರದ ಆಕಾಶವಾಣಿ ಬಳಿ ಮಣ್ಣು ಕುಸಿದಿದ್ದು 7 ಮಂದಿ ಕಾರ್ಮಿಕರು ಅಪಾಯದಿಂದ ಪಾರಾಗಿದ್ದಾರೆ. 

ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಮಣ್ಣು ತೇವಗೊಂಡು ಮಂಗಳವಾರ ದಿಢೀರ್‌ ಕುಸಿದಿದೆ.

2018ರಲ್ಲೂ ಇದೇ ಸ್ಥಳದಲ್ಲಿ ಗುಡ್ಡ ಕುಸಿದಿತ್ತು. ಆಕಾಶವಾಣಿ ಟವರ್‌ಗೆ ಹಾನಿಯಾಗದಂತೆ ಮಣ್ಣು ಕುಸಿದಿದ್ದ ಸ್ಥಳದಲ್ಲಿ ಕಾರ್ಮಿಕರು ತಡೆಗೋಡೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ವೇಳೆ ಈ ಘಟನೆ ನಡೆದಿದೆ. 

ಮಣ್ಣು ಕುಸಿಯುತ್ತಿದ್ದನ್ನು ಕಂಡ ಕಾರ್ಮಿಕರು ರಸ್ತೆಗೆ ಓಡಿಬಂದ ಪರಿಣಾಮ ದುರಂತ ತಪ್ಪಿದೆ. ಅಪಾಯದ ಅರಿವಿದ್ದರೂ ತಡೆಗೋಡೆ ನಿರ್ಮಾಣ ಕಾಮಗಾರಿ ವಿಳಂಬ ಮಾಡಿದ್ದೇ ಅನಾಹುತಕ್ಕೆ ಕಾರಣವಾಗಿದೆ. 

ಸ್ಥಳಕ್ಕೆ ನನಗರಸಭೆ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು