ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಕೃಷ್ಣ ಸಂದೇಶ ಪಾಲಿಸಲು ಸಲಹೆ: ಗೌರಂಗದಾಸ್

Last Updated 2 ಸೆಪ್ಟೆಂಬರ್ 2018, 13:11 IST
ಅಕ್ಷರ ಗಾತ್ರ

ಮಂಡ್ಯ: ‘ಶ್ರೀಕೃಷ್ಣನು ರಾಮ, ನರಸಿಂಹ, ವರಾಹ ಅವತಾರ ಪಡೆದಿದ್ದರೂ ಕೃಷ್ಣನ ಅವತಾರವೇ ಸಂಪೂರ್ಣವಾದುದು. ಶ್ರೀಕೃಷ್ಣ ಎಲ್ಲರನ್ನೂ ಸರಿ ಸಮಾನವಾಗಿ ಪ್ರೀತಿಯಿಂದ ಕಾಣುವ ಸಂದೇಶವನ್ನು ವಿಶ್ವಕ್ಕೆ ಸಾರಿದ್ದಾರೆ’ ಎಂದು ಗೌರಂಗದಾಸ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭಾನುವಾರ ನಡೆದ ಶ್ರೀಕೃಷ್ಣ ಜನ್ಮಾಷ್ಟಮಿಯಲ್ಲಿ ಅವರು ಉಪನ್ಯಾಸ ನೀಡಿದರು.

‘ಪ್ರಪಂಚ ಗೆದ್ದರೂ ಮನಸ್ಸಿಗೆ ನೆಮ್ಮದಿ, ಸುಖ ಸಂತೋಷ ಇಲ್ಲದ ಮೇಲೆ ಜೀವನಕ್ಕೆ ಅರ್ಥವಿರುವುದಿಲ್ಲ. ನಿಜವಾದ ಸಂತೋಷ ಸುಖ ನೆಮ್ಮದಿ ಕಾಣಬೇಕಾದರೆ ಭಗವಂತನನ್ನು ಅರಿಯಬೇಕು. ಅವನಲ್ಲಿ ಶರಣಾಗಬೇಕು. ಶ್ರೀಕೃಷ್ಣನ ಸಂದೇಶ ಪಾಲನೆ ಮಾಡಬೇಕು’ ಎಂದು ಹೇಳಿದರು.

ಅಪರ ಜಿಲ್ಲಾಧಿಕಾರಿ ಬಿ.ಪಿ.ವಿಜಯ್ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಖಜಾನೆ ಉಪ ನಿರ್ದೇಶಕ ರಾಜೇಗೌಡ, ಮಂಡ್ಯ ಉಪವಿಭಾಗಾಧಿಕಾರಿ ಎಂ.ಆರ್‌.ರಾಜೇಶ್, ತಹಶೀಲ್ದಾರ್ ನಾಗೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಶಾಂತಮ್ಮ ಇದ್ದರು.

ವಿವಿಧೆಡೆ ಕೃಷ್ಣ ಜನ್ಮಾಷ್ಟಮಿ: ಪೂರ್ಣ ವಿಕಾಸ ಸೇವಾ ಟ್ರಸ್ಟ್‌, ಧರ್ಮ ಜಾಗರಣ ಸಮನ್ವಯ ಸಮಿತಿ, ಭಜರಂಗಸೇನೆ ವತಿಯಿಂದ ನಗರದ ಗಾಂಧಿಭವನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಮಾಡಲಾಯಿತು. ಮಕ್ಕಳು ಕೃಷ್ಣನ ವೇಷ ತೊಟ್ಟು ಗಮನ ಸೆಳೆದರು. ಭಾವಸಾರ ಕ್ಷತ್ರಿಯ ಸಮಾಜ, ಭಾವಸಾರ ಕ್ಷತ್ರಿಯ ವಿದ್ಯಾಭಿವೃದ್ಧಿ ಸಮಿತಿ ವತಿಯಿಂದ ನಗರದ ವಿಠಲ ಸಮುದಾಯ ಭವನದಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು. ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಣೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT