ಬುಧವಾರ, ಮಾರ್ಚ್ 3, 2021
30 °C
ಮದ್ದೂರು: ಪಿಎಲ್‌ಡಿ ಬ್ಯಾಂಕ್ ವಾರ್ಷಿಕ ಸಭೆ, ಗದ್ದಲ

ಮದ್ದೂರು: ಆಡಳಿತ ಮಂಡಳಿಗೆ ತರಾಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮದ್ದೂರು: ಪಟ್ಟಣದ ಸಿದ್ಧಾರೂಢ ಕಲ್ಯಾಣ ಮಂಟಪದ ಆವರಣದಲ್ಲಿ ನಡೆದ ಪಿಎಲ್‌ಡಿ ಬ್ಯಾಂಕ್‌ನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಷೇರುದಾರರು ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡರು.

ಸಭೆ ಆರಂಭಗೊಳ್ಳುತ್ತಿದ್ದಂತೆ ಷೇರುದಾರರಾದ ಹನುಮೇಗೌಡ, ಕುದರಗುಂಡಿ ನಾಗರಾಜು ಎದ್ದು ನಿಂತು, ‘ಕೇವಲ ಹೆಸರಿಗೆ ಮಾತ್ರ ವರ್ಷಕೊಮ್ಮೆ ಸಭೆ ಕರೆಯುತ್ತೀರಿ. ಸಾಲ ಸೇರಿದಂತೆ ಯಾವುದೇ ವಿಚಾರದ ಸೂಚನಾ ಪತ್ರಗಳು ಷೇರುದಾರರ ಗಮನಕ್ಕೆ ತಲುಪುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬ್ಯಾಂಕ್‌ನಿಂದ ಷೇರುದಾರರಿಗೆ ಸರಿಯಾಗಿ ಸಾಲ ಸೌಲಭ್ಯಗಳು ದೊರಕುತ್ತಿಲ್ಲ. ಅಧ್ಯಕ್ಷರು ಸೇರಿದಂತೆ ಕೆಲವರಿಗೆ ಮಾತ್ರ ಸಾಲ ನೀಡಲಾಗುತ್ತಿದೆ. ಕೆಲವೊಮ್ಮೆ ಸಾಲ ದೊರಕಿದರೂ ಬ್ಯಾಂಕ್‌ ಅಧಿಕಾರಿಗಳಿಗೆ ಲಂಚ ನೀಡಬೇಕಾಗುತ್ತದೆ ಎಂದು ಹೇಳಿದರು.

ಕೆಲವು ಸಾಲಗಳಿಂದ ಬ್ಯಾಂಕ್ ನಷ್ಟದಲ್ಲಿದ್ದು, ಇದಕ್ಕೆ ಅಡಳಿತ ಮಂಡಳಿ, ಅಧಿಕಾರಿಗಳ ಬೇಜವಾಬ್ದಾರಿ ಕಾರಣ ಎಂದರು.

ಅಧ್ಯಕ್ಷತೆಯನ್ನು ಪಿ.ಎಲ್.ಡಿ ಬ್ಯಾಂಕ್ ಅದ್ಯಕ್ಷ ಸಿದ್ದಮರೀಗೌಡ ವಹಿಸಿದ್ದರು.

ಉಪಾಧ್ಯಕ್ಷ ಸಿದ್ದಧರಾಮು, ನಿರ್ದೇಶಕರಾದ ನ.ಲಿ.ಕೃಷ್ಣ, ಸಿದ್ದೇಗೌಡ, ಈರೇಗೌಡ, ಕೆಂಪೇಗೌಡ, ಮುತ್ತುರಾಜು ಹಾಗೂ ಬ್ಯಾಂಕಿನ ಪ್ರಭಾರ ವ್ಯವಸ್ಥಾಪಕ ಶಿವಕುಮಾರ್ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು