ಬೆಳಕವಾಡಿ: ಸಮೀಪದ ಹೊಸಹಳ್ಳಿ ಗ್ರಾಮದ ಮಹದೇವಮ್ಮದೇವಿ ಮತ್ತು ಚಿಕ್ಕಮ್ಮದೇವಿ ದೇವಸ್ಥಾನದ ಜೀರ್ಣೋದ್ಧಾರ, ಸಂಪ್ರೋಕ್ಷಣೆ ಮಹೋತ್ಸವ ಅಂಗವಾಗ ದೇವರಮೂರ್ತಿ, ಮಾರಮ್ಮ ಸತ್ತಿಗೆ, ಹಾಗೂ ಬಸಪ್ಪ ಮೆರವಣಿಗೆ ನಡೆಯಿತು.
ಗ್ರಾಮದ ಸಿದ್ದಮಲ್ಲೇಶ್ವರ ಪಟ್ಟದ ಮಠದ ಬಳಿ ನಿರ್ಮಿಸಿರುವ ಮಹದೇವಮ್ಮದೇವಿ ಮತ್ತು ಚಿಕ್ಕಮ್ಮದೇವಿ ದೇವಸ್ಥಾನದ ಸಂಪ್ರೋಕ್ಷಣೆ ಅಂಗವಾಗಿ ಸೋಮವಾರ ಗಣಪತಿ ಪೂಜೆ, ಗಂಗಾ ಪೂಜೆ, ಹಾಲರವಿ ಪೂಜೆ, ಧ್ವಜಾರೋಹಣ, ಕಳಾಸರಾಧನೆ, ಪಂಚಗವ್ಯ, ವಾಸ್ತುಹೋಮ, ಗಣಹೋಮ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ದುರ್ಗಾ ಸೂಕ್ತ ಹೋಮ, ನಿರ್ವಾಣ, ಚಂಡಿಕಾ ಮೂಲಮಂತ್ರ ಹೋಮ, ಅಷ್ಟಲಕ್ಷ್ಮೀ ಹೋಮ ನಂತರ ಪೂಜಾ ವಿಗ್ರಹ ಪ್ರತಿಷ್ಠಾಪನೆ ನಡೆಯಿತು.
ಮಂಗಳವಾರ ಕಳಶಾರಾಧನೆ, ಪ್ರಾಣ ಪ್ರತಿಷ್ಠಾಪನ ಹೋಮ, ಶ್ರೀ ಸೂಕ್ತ ಅಷ್ಠಲಕ್ಷ್ಮೀ, ಪುರುಷ ಸೂಕ್ತ ಹೋಮ, ಪೂರ್ಣಾಹುತಿ, ಕಳಶಗ್ರಾಮೋತ್ಸವ, ಕುಂಭಾಭಿಷೇಕ, ಪಂಚಾಮೃತ ಅಭಿಷೇಕ, ನಯೋನ್ಮಿಲಹ ಪೂಜೆ, ಅಲಂಕಾರ ನಂತರ ಮಹಾಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು.
ಗ್ರಾಮದ ಹೊರವಲಯದ ಮಹದೇಶ್ವರ ದೇವಸ್ಥಾನದ ಬಳಿ ಕೊಳದಿಂದ ಮಹದೇವಮ್ಮದೇವಿ, ಚಿಕ್ಕಮ್ಮದೇವಿ, ಮಾರಮ್ಮನ ಸತ್ತಿಗೆ, ವಾಸುವಳ್ಳಿ, ಚಂದಹಳ್ಳಿ, ಹೊಸಹಳ್ಳಿ ಬಸಪ್ಪಗಳನ್ನು ಹೂವು, ಹೊಂಬಾಳೆಗಳಿಂದ ಅಲಂಕರಿಸಿ ಗಂಗಾ ಪೂಜೆ ಸಲ್ಲಿಸಿ ನಂತರ 108 ಕಳಸ ಹೊತ್ತ ಮಹಿಳೆಯರು ಮೆರವಣಿಗೆ ಮೂಲಕ ಮಂಗಳವಾದ್ಯದೊಂದಿಗೆ ದೇವಸ್ಥಾನಕ್ಕೆ ತರಲಾಯಿತು.
ಬೆಂಗಳೂರಿನ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾಮಠದ ಕಾರ್ಯದರ್ಶಿ ಸೌಮ್ಯನಾಥ ಸ್ವಾಮೀಜಿ ಆರ್ಶೀವಾಚನ ನೀಡಿದರು. ಭಕ್ತರು ಪೂಜೆ ಸಲ್ಲಿಸಿ ದರ್ಶನ ಪಡೆದರು. ನಂತರ ಅನ್ನಸಂತರ್ಪಣೆ ನಡೆಯಿತು.
ಅರ್ಚಕ ಬೆಂಗಳೂರಿನ ರಂಗನಾಥ್ ಭಟ್ ಅವರ ತಂಡ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ಹೊಸಹಳ್ಳಿ ಸಿದ್ದಮಲ್ಲೇಶ್ವರ ಪಟ್ಟದ ಮಠಾಧ್ಯಕ್ಷ ಓಂಕಾರೇಶ್ವರಸ್ವಾಮಿ, ನಂಜುಂಡಸ್ವಾಮಿ, ಕೆಪಿಸಿಸಿ ಸದಸ್ಯ ಪುಟ್ಟಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜೆ.ದೇವರಾಜು, ನಾಡಗೌಡ ನಾಗರಾಜಣ್ಣ, ಪಾಪಣ್ಣ, ಲೋಕೇಶ್, ಪರಮೇಶ್, ಶಂಕರಯ್ಯ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.