ಮಳವಳ್ಳಿ: ಸಾಮಾಜಿಕ, ಆರ್ಥಿಕ ರಾಜಕೀಯ ಕ್ಷೇತ್ರಗಳ ಸುಧಾರಣೆಯ ಜೊತೆಗೆ ಕೃಷಿ ರಂಗದ ಅಭಿವೃದ್ಧಿಗೆ ಅವಿರತವಾಗಿ ಶ್ರಮಿಸಿದ ಮಹಾ ಚೇತನ ನಾಲ್ವಡಿ ಕೃಷ್ಣರಾಜ ಒಡೆಯರ್ ಎಂದು ಗ್ರಾಮಾಂತರ ಸಿಪಿಐ ಎಂ.ಜಗದೀಶ್ ಬಣ್ಣಿಸಿದರು.
ಪಟ್ಟಣದ ಕನ್ನಡ ಭವನದಲ್ಲಿ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದ ವತಿಯಿಂದ ಹಮ್ಮಿಕೊಂಡಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜಯಂತಿಯಲ್ಲಿ ಅವರು ಮಾತನಾಡಿದರು.
ಅವರ ಕಾಲದಲ್ಲಿ ಬಹುತೇಕ ರಾಜರು ಮೋಜು ಮಸ್ತಿ ಮಾಡುತ್ತಾ ರಾಜ ವೈಭೋಗದ ಜೀವನ ನಡೆಸುತ್ತಿದ್ದರೆ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮಾತ್ರ ಪ್ರಜೆಗಳ ಹಿತಕ್ಕಾಗಿ ಸದಾ ಚಿಂತನೆ ನಡೆಸಿ, ತಮ್ಮ ದೂರ ದೃಷ್ಟಿಯ ಮೂಲಕ ರಾಜ್ಯವನ್ನು ಅಭಿವೃದ್ಧಿ ಪಡಿಸಿದ್ದಾರೆ. ಏಷ್ಯಾ ಖಂಡದಲ್ಲೇ ಜಲ ವಿದ್ಯುತ್ ನನ್ನು ನಮ್ಮ ತಾಲ್ಲೂಕಿನ ಶಿಂಷಾಪುರದಲ್ಲಿ 1902 ರಲ್ಲಿ ಪ್ರಾರಂಭಿಸಿ ಹೊಸ ತಂತ್ರಜ್ಞಾನಕ್ಕೆ ನಾಂದಿ ಹಾಡಿದರು ಎಂದು ಹೇಳಿದರು.
ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಚೇತನ್ ಕುಮಾರ್, ಪುರಸಭೆ ಮಾಜಿ ಅಧ್ಯಕ್ಷರಾದ ದೊಡ್ಡಯ್ಯ, ಗಂಗರಾಜೇ ಅರಸು, ಮುಖಂಡರಾದ ಎನ್.ಎಲ್.ಭರತ್ ರಾಜ್, ಮ.ಸಿ.ನಾರಾಯಣ, ಪುಟ್ಟಸ್ವಾಮಿ, ಚುಂಚಣ್ಣ, ಮಾದೇಗೌಡ, ಮಹಾಲಿಂಗಯ್ಯ, ಹರ್ಷ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.