ಮಂಡ್ಯ: ತಾಲ್ಲೂಕಿನ ಹೊಸಬೂದನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಬಾರಿ ಮುಖ್ಯ ಶಿಕ್ಷಕಿ ಜಿ.ಎಂ.ಲಕ್ಷ್ಮಮ್ಮ ಅವರು ಶಾಲೆಯ ಅಭಿವೃದ್ಧಿಗೆಂದು ₹50 ಸಾವಿರ ದೇಣಿಗೆ ನೀಡಿದ್ದಾರೆ.

ಮದ್ದೂರು ತಾಲ್ಲೂಕಿನ ನಿಲುವಾಗಿಲು ಕೋಡಹಳ್ಳಿ ಗ್ರಾಮದವರಾಗಿರುವ ಲಕ್ಷ್ಮಮ್ಮ ಅವರು, ಹಳೇಬೂದನೂರು ಗ್ರಾಮಕ್ಕೆ 1989 ನವೆಂಬರ್ 27 ರಲ್ಲಿ ಸಹ ಶಿಕ್ಷಕಿಯಾಗಿ ನೇಮಕಗೊಳ್ಳುತ್ತಾರೆ, ನಂತರ 2006 ರಲ್ಲಿ ಹೊಸಬೂದನೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ವರ್ಗಾವಣೆಗೊಂಡು ಕೆಲಸ ನಿರ್ವಹಿಸುತ್ತಿದ್ದಾರೆ.

ಶಾಲೆ ಎಂದರೆ ಇಷ್ಟ: ಸದ್ಯಕ್ಕೆ ಪ್ರಬಾರಿ ಮುಖ್ಯ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿರುವ ನನಗೆ ಸರ್ಕಾರಿ ಶಾಲೆ ಮೇಲೆ ಹೆಚ್ಚು ಪ್ರೀತಿ ಇದೆ. ಹೊಸಬೂದನೂರು ಗ್ರಾಮದವರು ಹಾಗೂ ಹಳೆಯ ವಿದ್ಯಾರ್ಥಿ ಸಂಘದವರು ತಮ್ಮ ಸ್ವಂತ ಖರ್ಚಿನಲ್ಲಿ ಶಾಲಾ ಆವರಣದಲ್ಲಿ ಒಂದು ರಂಗ ಮಂದಿರ, ಹೊಸ ಕೊಠಡಿಗಳನ್ನು ನಿರ್ಮಿಸುತ್ತಿದ್ದಾರೆ. ಇದೆಲ್ಲವನ್ನೂ ನೋಡಿದ ನನಗೆ ಸಂತೋಷವಾಗಿ ನನ್ನ ಕಡೆಯಿಂದ ಈ ಚಿಕ್ಕ ಧನ ಸಹಾಯ ಮಾಡಿದ್ದೇನೆಂದು ಜಿ.ಎಂ.ಲಕ್ಷ್ಮಮ್ಮ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.