ಮಂಗಳವಾರ, 10 ಮಾರ್ಚ್ 2026
×
ADVERTISEMENT

ಮಂಡ್ಯ: ದಶಕದ ನಂತರ ‘ಮೈಷುಗರ್‌’ ಸಭೆ: ಷೇರುದಾರರನ್ನೇ ತಡೆದ ಕಾರ್ಖಾನೆ ಸಿಬ್ಬಂದಿ

Published : 19 ಫೆಬ್ರುವರಿ 2026, 5:32 IST
Last Updated : 19 ಫೆಬ್ರುವರಿ 2026, 5:32 IST
ADVERTISEMENT
ಫಾಲೋ ಮಾಡಿ
Comments
ಸಿ.ಡಿ.ಗಂಗಾಧರ್
ಸಿ.ಡಿ.ಗಂಗಾಧರ್
ನೀವು ಸರ್ಕಾರದ ಷೇರುದಾರರೇ ಸಾಕು ಎನ್ನುವುದಾದರೆ ನಮ್ಮನ್ನೇಕೆ ಸಭೆಗೆ ಆಹ್ವಾನಿಸುತ್ತೀರಾ? ಷೇರುದಾರರ ಹೆಸರುಗಳನ್ನು ದಾಖಲೆ ಸಮೇತ ಇಟ್ಟುಕೊಳ್ಳಬೇಕು
ಕೆ.ಬೋರಯ್ಯ ರೈತ ಮುಖಂಡ
ಷೇರುದಾರರಿಗೆ ಸಭೆಯ ವಿಚಾರವೇ ತಿಳಿದಿಲ್ಲ. ಇವರು ಕಾರ್ಖಾನೆ ಉಳಿಸುವುದಕ್ಕೆ ಬಂದಿಲ್ಲ. ಬೇಜವಾಬ್ದಾರಿ ತನದಿಂದ ವರ್ತಿಸುವ ಆಡಳಿತ ವರ್ಗ ರೈತರ ಹಿತಾಸಕ್ತಿ ಕಾಪಾಡುತ್ತಿಲ್ಲ
ಇಂಡುವಾಳು ಚಂದ್ರಶೇಖರ್‌ ಜಿಲ್ಲಾ ಘಟಕದ ಅಧ್ಯಕ್ಷ ರೈತ ಸಂಘ
ಪೊಲೀಸ್‌– ರೈತರ ನಡುವೆ ಮಾತಿನ ಚಕಮಕಿ
ವಾರ್ಷಿಕ ಸಭೆ ಆರಂಭವಾಗುತ್ತಿದ್ದಂತೆ ರೈತರು ಹಾಗೂ ಷೇರುದಾರರನ್ನು ಸಭೆಗೆ ಒಳಗೆ ಬಿಡಲು ಕಾರ್ಖಾನೆ ಸಿಬ್ಬಂದಿಯು ಬಾಗಿಲಲ್ಲೇ ತಡೆದರು. ಇದಕ್ಕೆ ಪೊಲೀಸರು ಸಾಥ್‌ ನೀಡಿದರು. ಇದರಿಂದ ಕುಪಿತಗೊಂಡ ರೈತರು ಷೇರುದಾರರು ಆಡಳಿತ ಮಂಡಳಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಸಿಬ್ಬಂದಿ ಮತ್ತು ಪೊಲೀಸರನ್ನೇ ತಳ್ಳಿಕೊಂಡು ಒಳನುಗ್ಗಿದರು. ನಂತರ ಪರಿಸ್ಥಿತಿ ಅರಿತ ಅಧ್ಯಕ್ಷ ಸಿ.ಡಿ.ಗಂಗಾಧರ್‌ ಅವರು ರೈತರು ಹಾಗೂ ಷೇರುದಾರರನ್ನು ಒಳಗೆ ಬಿಡಿ ಎಂದು ಪೊಲೀಸರಿಗೆ ತಿಳಿಸಿದರು.
ಸರ್ಕಾರದಿಂದ ₹10 ಕೋಟಿ ಅನುದಾನ
ಮೈಷುಗರ್‌ ಅಧ್ಯಕ್ಷ ಸಿ.ಡಿ. ಗಂಗಾಧರ್‌ ಅವರು ‘2025–26ನೇ ಸಾಲಿನಲ್ಲಿ ಕಾರ್ಖಾನೆಗೆ ಸರ್ಕಾರ ₹10 ಕೋಟಿ ಅನುದಾನ ನೀಡಿದೆ. ಅದರಲ್ಲಿ ಕಾರ್ಖಾನೆಯ ಹತ್ತು ವರ್ಷಗಳ ಕಾರ್ಮಿಕರ ಬಾಕಿ ವೇತನ ದುರಸ್ತಿಗಾಗಿ ₹8.78 ಕೋಟಿ ಖರ್ಚು ಮಾಡಲಾಗಿದೆ. 1.19 ಮೆಟ್ರಿಕ್ ಟನ್ ಕಬ್ಬು ನುರಿಸಿ 77570 ಕ್ವಿಂಟಲ್ ಸಕ್ಕರೆ 6700 ಮೆಟ್ರಿಕ್ ಟನ್ ಕಾಕಂಬಿ ಹಾಗೂ 3150 ಮೆಟ್ರಿಕ್ ಟನ್ ಪ್ರಸ್‌ಮಡ್ಡಿ ಉತ್ಪಾದಿಸಲಾಗಿದೆ. ಎಲ್ಲ ಉತ್ಪನ್ನಗಳ ಮಾರಾಟದಿಂದ ಬಂದ ಹಣದಿಂದ ರೈತರಿಗೆ ₹39.23 ಕೋಟಿ ಹಣ ಪಾವತಿಸಲಾಗಿದೆ’ ಎಂದರು. ಮುಂದಿನ 2026-27ನೇ ಸಾಲಿನಲ್ಲಿ 5.80 ಲಕ್ಷ ಟನ್ ಕಬ್ಬು ಅರೆಯಲು ರೈತರಿಂದ ಒಪ್ಪಿಗೆ ಪಡೆಯಲಾಗಿದೆ. ಈ ಹಿಂದೆ ನೀಡಿದ್ದ ಗುರಿಯನ್ನು ಮುಟ್ಟಲು ಸಾಧ್ಯವಾಗಲಿಲ್ಲ. ಆ ತಪ್ಪನ್ನು ಸರಿಪಡಿಸಿಕೊಳ್ಳುತ್ತೇವೆ ಎಂದು ಸಭೆಯಲ್ಲಿ ಕ್ಷಮೆ ಕೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT