ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ | ಸಿಬಿಎಸ್ಇ ಪರೀಕ್ಷೆ: ಗೀತಾಂಜಲಿ ಶಾಲೆಗೆ ಶೇ. 95 ಫಲಿತಾಂಶ

Published 14 ಮೇ 2024, 15:21 IST
Last Updated 14 ಮೇ 2024, 15:21 IST
ಅಕ್ಷರ ಗಾತ್ರ

ಮಂಡ್ಯ: ಎಸ್‌ಎಸ್‌ಎಲ್‌ಸಿ ತರಗತಿಯ ಸಿಬಿಎಸ್ಇ ಫಲಿತಾಂಶ ಪ್ರಕಟಗೊಂಡಿದ್ದು, ನಗರದ ಎಸ್.ಬಿ.ಎಜುಕೇಷನ್ ಟ್ರಸ್ಟ್‌ನ ಸಹಯೋಗದಲ್ಲಿ ನಡೆಯುತ್ತಿರುವ ಗೀತಾಂಜಲಿ ಇಂಟರ್ ನ್ಯಾಷನಲ್ ಸ್ಕೂಲ್‌ಗೆ ಶೇ 95 ರಷ್ಟು ಫಲಿತಾಂಶ ಬಂದಿದ್ದು, ಶಾಲೆಗೆ ವಿದ್ಯಾರ್ಥಿನಿ ದೀಪುಶ್ರೀ ಶೇ 96 ಅಂಕದೊಂದಿಗೆ ಟಾಪರ್‌ ಆಗಿ ಹೊರಹೊಮ್ಮಿದ್ದಾರೆ.

ಎಚ್.ಐ.ಭುವನ (ಶೇ.93.4), ಎಂ.ಪುಣ್ಯ (ಶೇ.86.4) ಹಾಗೂ ವೈ.ನಿಸರ್ಗ ಶೇ.84 ಅಂಕ ಪಡೆಯುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದು, ಗೀತಾಂಜಲಿ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ಮೊದಲ ಬಾರಿಗೆ ಆರಂಭವಾದ ಸಿಬಿಎಸ್ಇ ಮೊದಲ ಬ್ಯಾಚ್ ನಲ್ಲೇ ಶೇ.95 ರಷ್ಟು ಫಲಿತಾಂಶ ಬಂದಿರುವುದು ವಿಶೇಷವಾಗಿದೆ.

ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಪ್ರೊ.ಬಿ.ಶಿವಲಿಂಗಯ್ಯ, ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ, ಪ್ರಾಂಶುಪಾಲರಾದ ಎಚ್.ಸರೋಜ, ಉಪ ಪ್ರಾಂಶುಪಾಲರಾದ ಮಾರ್ಟೀನ್ ಸಿ.ಶಾಜಿ, ಮುಖ್ಯ ಶಿಕ್ಷಕ ವಿ.ಡಿ.ರಾಜಣ್ಣ ಅಭಿನಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT