ಮಂಡ್ಯ: ಕಳೆದ ಮೂರು ದಿನಗಳಿಂದ ಜಿಟಿಜಿಟಿ ಮಳೆ ಸುರಿಯುತ್ತಿರುವ ಕಾರಣ ಮಾರುಕಟ್ಟೆಗೆ ಸೊಪ್ಪಿನ ಆವಕ ಕುಗ್ಗಿದೆ. ಹೀಗಾಗಿ ಬೆಲೆಯಲ್ಲಿ ಏರಿಕೆ ಕಂಡಿದ್ದು ಗ್ರಾಹಕರ ಜೇಬಿಗೆ ಭಾರವಾಗಿದೆ.

ಕೊತ್ತಂಬರಿ ಸೊಪ್ಪಿನ ಬೆಲೆ ಕಟ್ಟಿಗೆ ₹ 15ಕ್ಕೆ ಏರಿಕೆಯಾಗಿದೆ. ಕಳೆದ ವಾರ ₹ 5ಕ್ಕೆ ಮಾರಾಟವಾಗುತ್ತಿತ್ತು. ಮಳೆಯ ಕಾರಣದಿಂದ ರೈತರು ಸೊಪ್ಪು ಕೊಯ್ಲು ಮಾಡಿ ಮಾರುಕಟ್ಟೆಗೆ ತಂದಿಲ್ಲ. ಹೀಗಾಗಿ ಬೆಲೆಯಲ್ಲಿ ಏರಿಕೆಯಾಗಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ. ಮೆಂತೆ ಸೊಪ್ಪಿನ ಬೆಲೆ ಕೂಡ ₹ 20, ಸಬ್ಬಸಿಗೆ ₹ 15ಕ್ಕೆ ಏರಿಕೆಯಾಗಿದೆ. ಕಟ್ಟು ದಂಟು ₹ 7, ಕರಿಬೇವು, ಪಾಲಕ್ ₹5 ರಂತೆ ಮಾರಾಟವಾಗುತ್ತಿವೆ.

ಕಳೆದೊಂದು ತಿಂಗಳಿಂದ ಏರುಗತಿಯಲ್ಲಿ ಸಾಗುತ್ತಿದ್ದ ಟೊಮೆಟೊ ಬೆಲೆ ಈ ವಾರ ಇಳಿಕೆಯಾಗಿದೆ. ₹ 40 ದಾಟಿದ್ದ ಟೊಮೆಟೊ ಈಗ ₹ 10ಕ್ಕೆ ಮಾರಾಟವಾಗುತ್ತಿದೆ. ಈರುಳ್ಳಿ ಬೆಲೆ ಕೂಡ ಇಳಿಕೆಯಾಗಿದ್ದು ₹ 100ಕ್ಕೆ 7 ಕೆ.ಜಿ ದೊರೆಯುತ್ತಿದೆ. ರೈತರು ನೇರವಾಗಿ ಆಟೊಗಳಲ್ಲಿ ಈರುಳ್ಳಿ ಮಾರುತ್ತಿದ್ದು ₹ 100ಕ್ಕೆ 8 ಕೆ.ಜಿ ಮಾರಾಟ ಮಾಡುತ್ತಿದ್ದಾರೆ.

ಬೆಳ್ಳುಳ್ಳಿ ₹80–100, ಆಲೂಗೆಡ್ಡೆ ₹30, ಸೌತೇಕಾಯಿ ₹10ಕ್ಕೆ 2, 3, ನಿಂಬೆಹಣ್ಣು ₹10ಕ್ಕೆ 5, 6, ಶುಂಠಿ ₹60, ಮೂಲಂಗಿ ₹10, ಚೌಳಿಕಾಯಿ, ಹಸಿರುಮೆಣಸಿನಕಾಯಿ ₹40, ಬದನೇಕಾಯಿ ₹20, ಕ್ಯಾರೆಟ್ ₹40, ಬೀನ್ಸ್ ₹40, ನುಗ್ಗೇಕಾಯಿ ₹60, ಗೆಡ್ಡೆಕೋಸು ₹30, ದಪ್ಪ ಮೆಣಸಿನಕಾಯಿ ₹40, ಭಜಿ ಮೆಣಸಿನಕಾಯಿ ₹70, ಎಲೆಕೋಸು ₹20, ಹೂಕೋಸು ಒಂದಕ್ಕೆ ₹30, ಬೂದುಗುಂಬಳ ₹30, ಹಾಗಲಕಾಯಿ ₹40 ರಂತೆ ಬಿಕರಿಯಾಗುತ್ತಿವೆ.

ಇಳಿಕೆ ಕಂಡ ಹೂವಿನ ಬೆಲೆ: ವರಲಕ್ಷ್ಮಿ ಹಬ್ಬದಲ್ಲಿ ₹200ರ ಗಡಿ ತಲುಪಿದ್ದ ಮಾರು ಮಲ್ಲಿಗೆ ಹೂವಿನ ಬೆಲೆ ಈ ವಾರ ಇಳಿಕೆ ಕಂಡಿದೆ. ಹಬ್ಬದ ಮೂರು ದಿನದ ನಂತರವೂ ಸೇವಂತಿಗೆ ಹೂವು ಮಾರಿಗೆ ₹80 ರಂತೆ ಮಾರಾಟ ಮಾಡಲಾಗುತ್ತಿದೆ. ಹಬ್ಬದಲ್ಲಿ ₹200 ಇದ್ದ ಮಾರು ಮಲ್ಲಿಗೆ ಸೋಮವಾರ ₹60ಕ್ಕೆ ಇಳಿದಿತ್ತು. ₹80 ಇದ್ದ ಕಾಕಡ ₹30, ಮರಳೆ, ಕಾಕಡ, ಗಣಗಲೆ ₹30, ಕನಕಾಂಬರ ₹100 ರಂತೆ ಮಾರಲಾಗುತ್ತಿತ್ತು. ಬಿಡಿ ಸೇವಂತಿಗೆ ಹೂವು ಸೋಮವಾರ ಕೆ.ಜಿ.ಗೆ ₹120–150 ಆಗಿತ್ತು. ಕೆ.ಜಿ. ಮಲ್ಲಿಗೆ ₹420, ಮರಳೆ ₹200, ಕಾಕಡ ₹180ರಂತೆ ಮಾರಾಟವಾಗುತ್ತಿದ್ದವು.

ಏಲಕ್ಕಿ ಬಾಳೆಹಣ್ಣಿನ ಬೆಲೆ ಇಳಿಕೆ

ವರಲಕ್ಷ್ಮಿ ಹಬ್ಬದಲ್ಲಿ ಏಲಕ್ಕಿ ಬಾಳೆಹಣ್ಣಿನ ಬೆಲೆ ಗಗನಕ್ಕೇರಿತ್ತು. ಕೆ.ಜಿಗೆ ₹ 80ರಂತೆ ಮಾರಾಟ ಮಾಡಲಾಗುತ್ತಿತ್ತು. ಆದರೆ ಈ ವಾರ ಬಾಳೆಹಣ್ಣಿನ ಬೆಲೆ ₹ 40–50ಕ್ಕೆ ಇಳಿಕೆಯಾಗಿದೆ. ಇತರ ಹಣ್ಣುಗಳ ಬೆಲೆಯಲ್ಲೂ ಕೊಂಚ ಇಳಿಕೆ ಕಂಡುಬಂದಿದೆ.

ದಕೆ.ಜಿ. ₹100 ಇದ್ದ ಮರಸೇಬು ₹80, ಸೇಬು ₹220ಕ್ಕೇರಿದ್ದ ಸೇಬು ₹ 200ಕ್ಕೆ ಇಳಿದಿದೆ. ಬೀಜರಹಿತ ದ್ರಾಕ್ಷಿ ₹140, ಬೀಜಸಹಿತ ದ್ರಾಕ್ಷಿ ₹100, ಕರ್ಬೂಜ ₹30, ಸಪೋಟ ₹80, ಮೂಸಂಬಿ ₹80, ದಾಳಿಂಬೆ ₹100, ಅನಾನಸ್ ಒಂದಕ್ಕೆ ₹30, ಕಿತ್ತಳೆ ₹120, ಪಚ್ಚಬಾಳೆ ₹20 ರಂತೆ ಮಾರಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.