ಮದ್ದೂರು: ಬೋರಾಪುರ ಗ್ರಾಮದಲ್ಲಿ ಕೃಷಿ ಇಲಾಖೆ ಮಂಗಳವಾರ ಹಮ್ಮಿಕೊಂಡಿದ್ದ ಯಂತ್ರದ ಮೂಲಕ ಭತ್ತದ ಸಸಿ ನಾಟಿ ಹಾಗೂ ಬೇಸಾಯ ಪ್ರಾತ್ಯಕ್ಷಿಕೆಗೆ ಶಾಸಕ ಉದಯ್ ಯಾಂತ್ರಿಕ ನಾಟಿ ಮಾಡಿ ಚಾಲನೆ ನೀಡಿದರು.
ಅವರು ಮಾತನಾಡಿ, ರೈತರು ಆಧುನಿಕ ಕೃಷಿ ಪದ್ಧತಿಯನ್ನು ಅನುಸರಿಸಿ ಆರ್ಥಿಕ ಪ್ರಗತಿ ಸಾಧಿಸಬಹುದು. ವೈಜ್ಞಾನಿಕ ವಿಧಾನದಲ್ಲಿ ಕೃಷಿ ಬಗ್ಗೆ ಇಲಾಖೆಯಿಂದ ಮಾಹಿತಿ ಪಡೆದುಕೊಳ್ಳಬೇಕು. ಸಮಯ ಉಳಿಕೆ, ಖರ್ಚುನ್ನು ಕಡಿಮೆ ಮಾಡಿ ಆದಾಯ ಹೆಚ್ಚಿಸಬಹುದು ಕೃಷಿ ಕೆಲಸಗಾರರ ಕೊರತೆಯಲ್ಲೂ ಇದು ರೈತರಿಗೆ ಅನುಕೂಲವಾಗಲಿದೆ. ಯಂತ್ರಗಳು ರಿಯಾಯ್ತಿ ದರದಲ್ಲಿ ದೊರಕುತ್ತಿವೆ ಎಂದರು.
ಕೃಷಿ ಇಲಾಖೆಯ ಉಪ ನಿರ್ದೇಶಕ ಮುನೇಗೌಡ, ಸಹಾಯಕ ಕೃಷಿ ಅಧಿಕಾರಿ ಪ್ರತಿಭಾ, ಕೃಷಿ ತಾಂತ್ರಿಕ ಅಧಿಕಾರಿಗಳಾದ ರೂಪಶ್ರೀ, ಗವಾಸ್ಕರ್, ಮುಖಂಡ ಬಸವರಾಜು ಭಾಗವಹಿಸಿದ್ದರು.
ಮದ್ದೂರು ತಾಲ್ಲೂಕಿನ ಬೋರಾಪುರದಲ್ಲಿ ಕೃಷಿ ಇಲಾಖೆ ಮಂಗಳವಾರ ಹಮ್ಮಿಕೊಂಡಿದ್ದ ಯಂತ್ರ ಬಳಸಿ ಭತ್ತದ ಸಸಿ ನಾಟಿ ಪ್ರಾತ್ಯಕ್ಷಿಕೆಯಲ್ಲಿ ಶಾಸಕ ಉದಯ್ ಯಂತ್ರ ಚಾಲಯಿಸಿ ನಾಟಿ ಮಾಡಿ ಚಾಲನೆ ನೀಡಿದರು. ಕೃಷಿ ಇಲಾಖೆ ಉಪ ನಿರ್ದೇಶಕ ಮುನೇಗೌಡ ಸಹಾಯಕ ಕೃಷಿ ಅಧಿಕಾರಿ ಪ್ರತಿಭಾ ಕೃಷಿ ತಾಂತ್ರಿಕ ಅಧಿಕಾರಿಗಳಾದ ರೂಪಶ್ರೀ ಗವಾಸ್ಕರ್ ಮುಖಂಡ ಬಸವರಾಜು ಭಾಗವಹಿಸಿದ್ದರು. ಕೃಷಿ ಇಲಾಖೆಯ ವತಿಯಿಂದ ಮಂಗಳವಾರ ಮದ್ದೂರು ತಾಲ್ಲೂಕಿನ ಬೋರಾಪುರ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಯಾ oತ್ರಿಕ ಭಿತ್ತನೆ ಬತ್ತದ ನಾಟಿ ಹಾಗೂ ಬೇಸಾಯದ ವಿಷಯದ ಬಗ್ಗೆ ಪ್ರಾತ್ಯಕ್ಷಿತೆ ಕಾರ್ಯಕ್ರಮದಲ್ಲಿ ಸ್ವತಃ ಶಾಸಕ ಉದಯ್ ರವರು ಯಂತ್ರದ ಮೂಲಕ ನಾಟಿ ಮಾಡುವುದರ ಮೂಲಕ ಚಾಲನೆ ನೀಡಿದರು ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಉಪ ನಿರ್ದೇಶಕರಾದ ಮುನೇಗೌಡ ಸಹಾಯಕ ಕೃಷಿ ಅಧಿಕಾರಿ ಪ್ರತಿಭಾ ಕೃಷಿ ತಾಂತ್ರಿಕ ಅಧಿಕಾರಿಗಳಾದ ರೂಪ ಶ್ರೀ ಗವಾಸ್ಕರ್ ಮುಖಂಡರಾದ ಬಸವರಾಜು ಸೇರಿದಂತೆ ಹಲವರು ಹಾಜರಿದ್ದರು.