ಮಂಡ್ಯ: ಮೈಷುಗರ್ ಶಾಲೆ ಗುತ್ತಿಗೆ ನೀಡುವುದಕ್ಕೆ ವಿರೋಧ ವ್ಯಕ್ತವಾಗಿರುವುದರಿಂದ ಸದ್ಯಕ್ಕೆ ಗುತ್ತಿಗೆ ಪ್ರಕ್ರಿಯೆ ಇಲ್ಲ ಎಂದು ಶಾಸಕ ಪಿ.ರವಿಕುಮಾರ್ ಭರವಸೆ ನೀಡಿದರು.

ನಗರದ ಪ್ರವಾಸಿ ಮಂದಿರದಲ್ಲಿ ಮೈಷುಗರ್ ಶಾಲೆ ವಿಷಯವಾಗಿ ಶನಿವಾರ ಕರೆದಿದ್ದ ಪ್ರಗತಿಪರ ಮುಖಂಡರ ಸಭೆಯ ನಂತರ ಸುದ್ದಿಗಾರೊಂದಿಗೆ ಅವರು ಮಾತನಾಡಿದರು.

ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆಯಂತೆ ಗುತ್ತಿಗೆ ಪ್ರಕ್ರಿಯೆಯನ್ನು ರದ್ದುಪಡಿಸುವಂತೆ ಕಾರ್ಖಾನೆ ಅಧ್ಯಕ್ಷರಿಗೆ ಸೂಚಿಸಲಾಗುವುದು. ಶಾಲೆಯ ಅಭಿವೃದ್ಧಿ ದೃಷ್ಟಿಯಿಂದ ಖಾಸಗಿಯವರಿಗೆ ಗುತ್ತಿಗೆ ನೀಡಲು ಅಧ್ಯಕ್ಷರು ನಿರ್ಧರಿಸಿ ಪ್ರಕ್ರಿಯೆ ಅರಂಭಿಸಿದ್ದರು. ಆನಂತರದಲ್ಲಿ ತೀವ್ರ ವಿರೋಧ ವ್ಯಕ್ತವಾಯಿತು. ಎಲ್ಲ ಮುಖಂಡರ ಸಭೆ ಕರೆದು ಅಭಿಪ್ರಾಯ ಸಂಗ್ರಹಿಸಲಾಗಿದೆ. ಬಹುತೇಕರು ಶಾಲೆಯನ್ನು ಗುತ್ತಿಗೆ ನೀಡುವುದಕ್ಕೆ ವಿರುದ್ಧ ಇರುವುದು ಕಂಡುಬಂದಿರುವ ಕಾರಣ ಗುತ್ತಿಗೆ ಪ್ರಕ್ರಿಯೆಯನ್ನು ಇಲ್ಲಿಗೇ ಕೈಬಿಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ಕಾರ್ಖಾನೆ ಆಸ್ತಿಯನ್ನು ಸುಮ್ಮನೆ ಖಾಲಿ ಬಿಡುವುದರಿಂದ ಪ್ರಯೋಜನವಿಲ್ಲ. ಪಾರಂಪರಿಕ ಎಂಬ ಹೆಸರಿನಲ್ಲಿ ಪಾಳು ಬಿಡುವುದೂ ಸರಿಯಲ್ಲ. ಆದಾಯ ಸೃಷ್ಟಿಸಿಕೊಳ್ಳಬೇಕಾದರೆ ಖಾಸಗಿಯವರ ಜೊತೆ ಕೈಜೋಡಿಸುವುದು ಇಂದಿನ ವಾಸ್ತವ ಸಂಗತಿ. ಬೆಂಗಳೂರಿನಲ್ಲಿರುವ ಕಾರ್ಖಾನೆ ಜಾಗದಲ್ಲಿ ಬಹುಮಹಡಿ ವಾಣಿಜ್ಯ ಸಂಕೀರ್ಣ ನಿರ್ಮಿಸಿ ಆದಾಯ ಬರುವಂತೆ ಮಾಡಬಹುದು ಎಂದರು.

ಮಂಡ್ಯದಲ್ಲಿ ಎಂ.ಸಿ.ರಸ್ತೆ ಆಸುಪಾಸಿನಲ್ಲಿರುವ ಕಾರ್ಖಾನೆ ಜಾಗದಲ್ಲಿ ಮಾಲ್ ನಿರ್ಮಿಸಿ ಆದಾಯ ಮೂಲ ಸೃಷ್ಟಿಸಿಕೊಳ್ಳುವುದಕ್ಕೆ ಅವಕಾಶಗಳಿವೆ. ಈ ಬೆಳವಣಿಗೆ ಕಾಣಬೇಕಾದರೆ ಖಾಸಗಿಯವರೊಂದಿಗೆ ಶೇ 50:50 ಅನುಪಾತದಲ್ಲಿ ಕೈಜೋಡಿಸುವುದು ಅನಿವಾರ್ಯ. ಪಾಳುಬಿದ್ದಿರುವ ಮೈಷುಗರ್ ಈಜು ಕೇಂದ್ರವನ್ನು ಖಾಸಗಿಯವರ ನಿರ್ವಹಣೆಗೆ ನೀಡುವಾಗಲೂ ವಿರೋಧ ವ್ಯಕ್ತವಾಗಿದ್ದರಿಂದ ನಾನೂ ಸುಮ್ಮನಾದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಭೆಯಲ್ಲಿ ಮೈಷುಗರ್ ಮಾಜಿ ಅಧ್ಯಕ್ಷರಾದ ಸಿದ್ದರಾಮೇಗೌಡ, ಬಿ.ಸಿ.ಶಿವಾನಂದ, ರೈತ ಮುಖಂಡರಾದ ಕೆ.ಬೋರಯ್ಯ, ಸುನಂದಾ ಜಯರಾಂ, ಇಂಡುವಾಳು ಚಂದ್ರಶೇಖರ್, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಕೀಲಾರ ಕೃಷ್ಣ, ಕಬ್ಬು ಬೆಳೆಗಾರರ ಒಕ್ಕೂಟದ ಸಾತನೂರು ವೇಣುಗೋಪಾಲ್, ನಗರಸಭೆ ಸದಸ್ಯರಾದ ಎಚ್.ಎಸ್.ಮಂಜು, ಕುಮಾರ, ಪೂರ್ಣಿಮಾ, ಮುಖಂಡರಾದ ಶಿವನಂಜು, ಜಿ.ಎ.ರಮೇಶ್, ಹನಕೆರೆ ಶಶಿಕುಮಾರ್, ಗಿರೀಶ ಇತರರಿದ್ದರು.

ಅಭಿವೃದ್ಧಿಗಾಗಿ ಯಾರ ಬಳಿ ಹೋಗಲು ಸಿದ್ಧ

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಶಾಲೆಗೆ ₹25 ಕೋಟಿ ಅನುದಾನ ನೀಡುವ ಭರವಸೆ ನೀಡಿದ್ದಾರೆ. ಸಿಎಸ್ಆರ್ ಫಂಡ್ನ ವ್ಯಾಪ್ತಿ ಅವರಿಗೆ ದೊಡ್ಡದಾಗಿರುವುದರಿಂದ ಹೆಚ್ಚು ಹಣವನ್ನು ದೊರಕಿಸಿಕೊಡುವ ಸಾಮರ್ಥ್ಯ ಅವರಿಗಿದೆ. ಅಭಿವೃದ್ಧಿ ವಿಚಾರದಲ್ಲಿ ನಾನು ಯಾರ ಬಳಿ ಹೋಗುವುದಕ್ಕೂ ಸಿದ್ಧನಿರುವೆ ಎಂದು ಶಾಸಕ ಪಿ.ರವಿಕುಮಾರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.