ನಾಗಮಂಗಲ: 12 ವರ್ಷಕೊಮ್ಮೆ ಜರುಗುತ್ತಿದ್ದ ಹುಚ್ಚಪ್ಪಸ್ವಾಮಿಯ ಹದಿನಾಲ್ಕು ಕೂಟದ ದೇವರ ಜಾತ್ರಾ ಮಹೋತ್ಸವವು ಹಲವು ಕಾರಣಗಳಿಂದ ನಿಂತು ಹೋಗಿತ್ತು. ಮುಖಂಡರು, ಗ್ರಾಮಸ್ಥರು ಮತ್ತು ದೇವಾಲಯ ಸಮಿತಿಯ ಪ್ರೇರಣೆಯಿಂದ 39 ವರ್ಷಗಳ ನಂತರ ಜಾತ್ರೆಗೆ ಸಿದ್ಧತೆ ನಡೆದಿದ್ದು, ಏ.21, 22 ಮತ್ತು 23ರವರೆಗೆ ವಿಜೃಂಭಣೆಯಿಂದ ಜರುಗಲಿದೆ.

ನೂತನ ದೇವಾಲಯ ನಿರ್ಮಿಸಿದ ನಂತರ ಜಾತ್ರೆ ಆಯೋಜನೆ ಮಾಡಬೇಕು ಎಂದು ಗ್ರಾಮಸ್ಥರು ತೀರ್ಮಾನಿಸಿದ್ದರು. ನಾಡಿನ ವಿವಿಧ ಭಾಗಗಳಿಂದ ಬರುವ ಭಕ್ತರಿಗೆ ಅಗತ್ಯ ಸೌಲಭ್ಯ ಕಲ್ಪಿಸಿ ನಿರ್ವಹಣೆ ಮಾಡುವುದು ಕ್ಲಿಷ್ಟಕರವಾಗಿದ್ದ ಹಿನ್ನೆಲೆಯಲ್ಲಿ 39 ವರ್ಷಗಳಿಂದ ಜಾತ್ರೆ ನಡೆದಿರಲಿಲ್ಲ.

ಗ್ರಾಮಸ್ಥರು ಮತ್ತು ಸಾರ್ವಜನಿಕರ ಸಹಾಯದಿಂದ ಕೋಟಿ ವೆಚ್ಚದಲ್ಲಿ ದೇವಾಲಯ ನಿರ್ಮಾಣವಾಗಿದ್ದು, ಜಾತ್ರೆಗೆ ಪ್ರೇರಣೆಯಾಗಿದೆ. ಸುಮಾರು 60-70 ಸಾವಿರ ಜನ ಸೇರುವ ನಿರೀಕ್ಷೆಯಿದೆ. ಹುಚ್ಚಪ್ಪಸ್ವಾಮಿ ಸ್ವಾಮಿಯ ನೂತನ ದೇವಾಲಯ ಪ್ರಸ್ತುತ ನಿರ್ಮಾಣವಾಗಿದ್ದರೂ ಮೊದಲು ಇದ್ದ ಮೂಲ ಗುಡಿಯು 600 ವರ್ಷಗಳ ಇತಿಹಾಸ ಹೊಂದಿದೆ.

ಬೆಳ್ಳಿಯ ವಸ್ತುಗಳ ಅರ್ಪಣೆ:

ಹುಚ್ಚಪ್ಪಸ್ವಾಮಿಯಲ್ಲಿ ಹರಕೆ ಹೊತ್ತು ಇಷ್ಟಾರ್ಥ ಸಿದ್ಧಿಸಿದರೆ ಶಿವರಾತ್ರಿ, ದೀಪಾವಳಿ ಸಂದರ್ಭಗಳಲ್ಲಿ ಭಕ್ತರು ಬಂದು ಪೂಜೆ ಸಲ್ಲಿಸಿ ಬೆಳ್ಳಿಯ ಕೈಕಡಗ, ಕಾಲು ಕಡಗ, ಬೆಳ್ಳಿಯ ಚೈನು ಸೇರಿದಂತೆ ಅವರ ಶಕ್ತಿಯಾನುಸಾರ ಹರಕೆಯನ್ನು ಅರ್ಪಿಸುವುದು ವಿಶೇಷವಾಗಿದೆ.

ಹುಚ್ಚಪ್ಪಸ್ವಾಮಿಯು ಪುರಾತನ ಕಾಲದಿಂದಲೂ ಊರುಗಳಲ್ಲಿ ರೋಗರುಜಿನ, ಸಾಂಕ್ರಾಮಿಕ ಕಾಯಿಲೆ ಕಾಟ ಹೆಚ್ಚಾದ ಸಂದರ್ಭದಲ್ಲಿ ಊರೂರುಗಳಿಗೆ ಹೋಗಿ ಮಾರಿಗಳ ಕಾಟದಿಂದ ಜನರನ್ನು ರಕ್ಷಣೆ ಮಾಡುತ್ತಿದ್ದರು. ಇದರಿಂದ ಸಂಪನ್ನರಾದ ಬೀರೇಶ್ವರಸ್ವಾಮಿಯು ಹುಚ್ಚಪ್ಪಸ್ವಾಮಿಗೆ ಮಂತ್ರಿ ಪದವಿಯನ್ನು ನೀಡಿದ್ದರು. ಅಂದಿನಿಂದಲೂ ಹುಚ್ಚಪ್ಪಸ್ವಾಮಿಯು ಭಕ್ತರ ಸಂಕಷ್ಟಗಳನ್ನು ನಿವಾರಿಸುತ್ತಾ ಬಂದಿದ್ದಾನೆ ಎಂಬ ದೃಢನಂಬಿಕೆ ಭಕ್ತರಲ್ಲಿದೆ.

ಜಾತ್ರೆಯ ಅಂಗವಾಗಿ ಮೊದಲನೇ ದಿನ ಏ.21ರಂದು ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಬರುವ ಹದಿನಾಲ್ಕು ಕೂಟದ ದೇವರುಗಳ ಸ್ವಾಗತ ಸೇರಿದಂತೆ ಮೆರವಣಿಗೆ, ಬಾಯಿಬೀಗ, ನಂದಿಧ್ವಜ ಕುಣಿತ, ಹಲಗೆ ಕುಣಿತ, ಸಿಡಿಮದ್ದು ಪ್ರದರ್ಶನ, ಹೂವು ಹೊಂಬಾಳೆ ಧಾರಣೆ, ಕೊಂಡೋತ್ಸವ, ರಾಶಿ ಪೂಜೆಗಳು ಜರುಗುತ್ತದೆ.

22ರಂದು ಮುಖ್ಯಮಂತ್ರಿ ಆಗಮನ

ಏ.22ರಂದು ಅಭಿಷೇಕ ಮಹಾಮಂಗಳಾರತಿ ಮುಡಿಸೇವೆ ಅನ್ನಸಂತಾರ್ಪಣೆ ಗಂಗಾಸ್ನಾನ ಕಾರ್ಯಕ್ರಮಗಳು ಜರುಗಲಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವರು ಗಣ್ಯರು ಭಾಗವಹಿಸಲಿದ್ದಾರೆ. ಅಂತಿಮ ದಿನವಾದ ಏ.23ರಂದು ಬನ್ನಿ ಮಂಟಪ ಪೂಜೆ ಹಣ್ಣುತುಪ್ಪಸೇವೆ ಶಿವಪೂಜೆ ಪಾನಕಸೇವೆ ಎದುರಾರತಿ ಮೆರವಣಿಗೆ ಮತ್ತು ಅನ್ನಸಂತಾರ್ಪಣೆ ಕಾರ್ಯಕ್ರಮಗಳು ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಜರುಗುತ್ತವೆ. ‘ಗ್ರಾಮದಲ್ಲಿ 40 ವರ್ಷದ ಹಿಂದೆ ಸ್ವಾಮಿಯ ಹಬ್ಬದ ಆಚರಣೆಯ ನಿಯಮ ಮೀರಿ ನಡೆದಿದ್ದ ಸುಮಾರು 50-60 ಜನ ತಕ್ಷಣವೇ ವಾಂತಿಬೇಧಿ ಕಾಣಿಸಿಕೊಂಡು ಬಳಲಿ ನಂತರ ಸ್ವಾಮಿಯಲ್ಲಿ ತಪ್ಪೊಪ್ಪಿಗೆಕೊಂಡು ಪ್ರಾರ್ಥನ ಸಲ್ಲಿಸಿ ತೀರ್ಥ ಪ್ರೋಕ್ಷಣೆ ಮಾಡಿದ ನಂತರ ಗುಣಮುಖರಾದ ಉದಾಹರಣೆಗಳಿವೆ’ ಎಂದು ಊರಿನ ಯಜಮಾನ ಎಚ್.ಮಂಜು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.