ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿತ್ಯ ಸಚಿವ’ ನಾಟಕ ಪ್ರದರ್ಶನ, ಕೃತಿ ಬಿಡುಗಡೆ 21ಕ್ಕೆ

Published 18 ಏಪ್ರಿಲ್ 2024, 17:08 IST
Last Updated 18 ಏಪ್ರಿಲ್ 2024, 17:08 IST
ಅಕ್ಷರ ಗಾತ್ರ

ಮಂಡ್ಯ: ಕರ್ನಾಟಕ ಸಂಘದ ವತಿಯಿಂದ ಜನದಲಿ ಕಲಾವಿದರು ಅಭಿನಯಿಸಿರುವ ‘ನಿತ್ಯ ಸಚಿವ’ ನಾಟಕ ಪ್ರದರ್ಶನ ಹಾಗೂ ಕೃತಿ ಬಿಡುಗಡೆ ಸಮಾರಂಭವು ಏ.21 ಸಂಜೆ 5 ಗಂಟೆಗೆ ನಗರದ ವಿವೇಕಾನಂದ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ ಹೇಳಿದರು.

‘ ದಿ.ದೇವರಾಜ ಅರಸು, ರೈತ ನಾಯಕ ನಂಜುಂಡಸ್ವಾಮಿ ಅವರ ಬದುಕು ಕುರಿತ ನಾಟಕಗಳು ಈಗಾಗಲೇ ಪ್ರದರ್ಶನಗೊಂಡಿವೆ. ಕೆ.ವಿ.ಶಂಕರಗೌಡರ ಜೀವನಗಾಥೆಗೂ ರಂಗರೂಪ ನೀಡಲಾಗಿದ್ದು ಜನರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ. ನಾಟಕಕ್ಕೆ ಕೃತಿ ರೂಪವನ್ನೂ ನೀಡಲಾಗಿದ್ದು ಹೆಚ್ಚುವರಿ ಜಿಲ್ಲಾಧಿಕಾರಿ ಎಲ್‌.ಎಲ್‌.ನಾಗರಾಜು ಕೃತಿ ಬಿಡುಗಡೆ ಮಾಡುವರು’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಪ್ರೊ.ರಾಜಪ್ಪ ದಳವಾಯಿ ನಾಟಕ ರಚಿಸಿದ್ದು ರಚಿಸಿದ್ದು, ಪ್ರಮೋದ್ ಶಿಗ್ಗಾಂವ್ ನಿರ್ದೇಶನ ಮಾಡಿದ್ದಾರೆ. ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಪುರುಷೋತ್ತಮಾನಂದ ಸ್ವಾಮೀಜಿ ಅವರು ಸಾನ್ನಿಧ್ಯ ವಹಿಸುವರು. ಕಲಾವಿದರು ಮತ್ತು ತಂತ್ರಜ್ಞರಿಗೆ ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯ್‌ ಆನಂದ ಅವರು ಗೌರವ ಸಮರ್ಪಣೆ ಮಾಡುವರು’ ಎಂದರು.

ಸಂಘದ ರಾಮಲಿಂಗಯ್ಯ, ಪ್ರೊ.ಶಂಕರೇಗೌಡ, ಚಂದಗಾಲು ಲೋಕೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT