ಪಾಂಡವಪುರ: ತಾಲ್ಲೂಕಿನ ಕಟ್ಟೇರಿ ಗ್ರಾಮದ ಬಳಿ ಮಂಗಳವಾರ ನಾಲೆಯ ನೀರಿನ ಸೆಳೆತಕ್ಕೆ ಸಿಲುಕಿ ಎತ್ತಿನ ಗಾಡಿ ಕೊಚ್ಚಿ ಹೋಗಿದ್ದು, ಒಂದು ಎತ್ತು ಮೃತಪಟ್ಟಿದೆ.
ಅರಳಕುಪ್ಪೆ ಗ್ರಾಮದ ಮೂರ್ತಿ ಅವರ ಪುತ್ರ ಪ್ರಸನ್ನ ಅವರು ಎತ್ತುಗಳು ಹಾಗೂ ಗಾಡಿಯನ್ನು ತೊಳೆಯುವಾಗ ನೀರಿನ ಸೆಳೆತಕ್ಕೆ ಸಿಲುಕಿ ಗಾಡಿ ಕೊಚ್ಚಿ ಹೋಗುತ್ತಿದ್ದಾಗ ಒಂದು ಎತ್ತಿನ ಕೊರಳಿಗೆ ಕಟ್ಟಿದ್ದ ಹಗ್ಗವನ್ನು ಬಿಚ್ಚಿದ್ದಾರೆ. ಇದರಿಂದ ಆ ಎತ್ತು ಈಜಿ ದಡ ಸೇರಿದೆ. ಮತ್ತೊಂದು ಎತ್ತು ದಡದ ಸೇರದೆ ನೀರಿನಲ್ಲಿ ಮುಳುಗಿ ಮೃತಪಟ್ಟಿತು. ಗ್ರಾಮಸ್ಥರು ಎತ್ತು ಮತ್ತು ಗಾಡಿಯನ್ನು ದಡಕ್ಕೆ ತಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.