ಸೋಮವಾರ, ಆಗಸ್ಟ್ 15, 2022
27 °C

ಪಾಂಡವಪುರ: ಹುಲಿ ಗೊಂಬೆಗಳು ಸೃಷ್ಟಿಸಿದ ಅವಾಂತರ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಾಂಡವಪುರ: ತಾಲ್ಲೂಕಿನ ಪುರಾಣ ಪ್ರಸಿದ್ಧ ತೊಣ್ಣೂರು ಕೆರೆಯಲ್ಲಿ ತೇಲುತ್ತಿದ್ದ ಹುಲಿ ಗೊಂಬೆಗಳ ಮೇಲ್ಪದರ ಬುಧವಾರ ಕೆಲಕಾಲ ಆತಂಕ ಸೃಷ್ಟಿಸಿದ್ದವು. ನಿಜವಾದ ಹುಲಿ ಸತ್ತು ಕೆರೆಯಲ್ಲಿ ತೇಲುತ್ತಿವೆ ಎಂದು ಕೆಲವರು ಸಾಮಾಜಿಕ ಜಾಲ ತಾಣಗಳಲ್ಲಿ ಸುದ್ದಿ ಹರಿಬಿಟ್ಟಿರುವುದು ಅವಾಂತರಕ್ಕೆ ಕಾರಣವಾಯಿತು.

ಗ್ರಾಮಗಳಲ್ಲಿ ನಡೆಯುವ ಮಹದೇಶ್ವರಸ್ವಾಮಿ ಜಾತ್ರೆ, ಹುಲಿವಾಹನೋತ್ಸವ ಸಂದರ್ಭದಲ್ಲಿ ಹುಲಿವೇಷದ ಪರಿಕರ, ಹುಲಿ ಗೊಂಬೆಗಳನ್ನು ಬಹಳ ದಿನಗಳ ಹಿಂದೆಯೇ ತೊಣ್ಣೂರು ಕೆರೆಗೆ ಬಿಡಲಾಗಿತ್ತು. ಮಳೆಯಾಗಿ ಕೆರೆಗೆ ಹೊಸ ನೀರು ಹರಿದು ಬಂದ ಪರಿಣಾಮ ಬುಧವಾರ ಗೊಂಬೆಗಳು, ಹುಲಿ ಚರ್ಮದಂತಿರುವ ಮೇಲ್ಪದರ ಮೇಲೆ ಬಂದು ತೇಲುತ್ತಿದ್ದವು.

ಕೆಲವರು ಇವುಗಳ ಛಾಯಾಚಿತ್ರ, ವಿಡಿಯೊ ತೆಗೆದು ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಹುಲಿ ಕೊಂದು ಕೆರೆಗೆ ಎಸೆದಿದ್ದಾರೆ ಎಂಬೆಲ್ಲ ಚರ್ಚೆಗಳು ನಡೆದವು. ಈ ವಿಚಾರ ಅರಣ್ಯ ಇಲಾಖೆಗೂ ತಲುಪಿದ ನಂತರ ಅವರು ಸ್ಪಷ್ಟನೆ ನೀಡಿದರು.

‘ಇವು ಮರ, ಪ್ಲಾಸ್ಟಿಕ್‌ನಿಂದ ಮಾಡಿದ ಹುಲಿಯ ಗೊಂಬೆಗಳು, ನಿಜವಾದ ಹುಲಿಗಳಲ್ಲ. ಸುಳ್ಳು ಸುದ್ದಿ ಹರಡಿಸಿ ಆತಂಕ ಸೃಷ್ಟಿಸಿದವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ’ ಎಂದು ಆರ್‌ಎಫ್‌ಒ ಪುಟ್ಟಸ್ವಾಮಿ ತಿಳಿಸಿದರು.


ಪುರಾಣ ಪ್ರಸಿದ್ಧ ತೊಣ್ಣೂರು ಕೆರೆಯಲ್ಲಿ ತೇಲುತ್ತಿದ್ದ ಹುಲಿ ಗೊಂಬೆಗಳ ಮೇಲ್ಪದರ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು