ಪಾಂಡವಪುರ: ಜಾನಪದ ಕಲಾವಿದರ ಮಾಸಾಶನವನ್ನು ₹2ಸಾವಿರಗಳಿಂದ ₹5ಸಾವಿರಗಳಿಗೆ ಹೆಚ್ಚಿಸಬೇಕು ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಹಾಗೂ ಭಾರತ ಸರ್ಕಾರದ ಪರಿಷತ್ ಐಸಿಸಿಆರ್ ಸದಸ್ಯ ಎಸ್.ಬಾಲಾಜಿ ಸರ್ಕಾರವನ್ನು ಒತ್ತಾಯಿಸಿದರು.

ತಾಲ್ಲೂಕಿನ ಲಕ್ಷ್ಮೀಸಾಗರ ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಶನಿವಾರ ನಡೆದ ಕನ್ನಡ ಜಾನಪದ ಪರಿಷತ್, ಪಾಂಡವಪುರ ತಾಲ್ಲೂಕು ಘಟಕವನ್ನು ಡೊಳ್ಳು ಬಾರಿಸುವ ಮೂಲಕ ಉದ್ಫಾಟಿಸಿ ಅವರು ಮಾತನಾಡಿದರು.

ಮಾಸಾಶನ ಪಡೆಯಲು ವಯೋಮಿತಿಯನ್ನು 45ಕ್ಕೆ ಇಳಿಸಬೇಕು ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಶೇ 2ರಷ್ಟು ಅನುದಾನವನ್ನು ಜಾನಪದ ಕಲಾವಿದರಿಗೆ ಮೀಸಲಿರಿಸಬೇಕು ಎಂದು ಆಗ್ರಹಿಸಿದರು.

‘ಜಾನಪದವು ಯಾವುದೇ ಜಾತಿ, ಧರ್ಮಕ್ಕೆ ಸೀಮಿತವಾಗಿಲ್ಲ. ಜಾನಪದ ಮಾನವೀಯ ಮೌಲ್ಯಗಳನ್ನು ಹಾಗೂ ಜೀವನದ ಪಾಠವನ್ನು ಕಲಿಸುತ್ತದೆ. ಇಂದಿನ ಆಧುನಿಕ ಭರಾಟೆಯಲ್ಲಿ ಹಾಗೂ ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆಯಲ್ಲಿ ಜಾನಪದ ಕಲೆ ನಶಿಸಿದಂತೆ ಕಂಡರೂ, ಅದು ನಶಿಸುವುದಿಲ್ಲ. ಬದಲಿಗೆ ಕಾಲಕ್ರಮಣದಲ್ಲಿ ಪರಿವರ್ತನೆಗೊಳ್ಳುತ್ತದೆ’ಎಂದರು.

ಅಧ್ಯಕ್ಷತೆ ವಹಿಸಿದ್ದ ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟದಕ ಅಧ್ಯಕ್ಷ ವಿಜಯ ಕೊಪ್ಪ ಮಾತನಾಡಿ, ‘ಮಂಡ್ಯ ಜಿಲ್ಲೆಯಲ್ಲಿ ಜನಪದ ಕಲೆ ಮತ್ತು ಕಲಾವಿದರ ಸಂರಕ್ಷಣೆಗಾಗಿ ಕನ್ನಡ ಜಾನಪದ ಪರಿಷತ್ ಮಂಡ್ಯ ಜಿಲ್ಲಾ ಘಟಕ ಶ್ರಮಿಸುತ್ತಿದೆ. ಮುಂದಿನ ದಿನಗಳಲ್ಲಿ ಪ್ರತಿ ಹೋಬಳಿ ಹಾಗೂ ಗ್ರಾಮದಲ್ಲೂ ಘಟಕ ಮಾಡಲಾಗುವುದು’ ಎಂದು ತಿಳಿಸಿದರು.

ಕನ್ನಡ ಜಾನಪದ ಪರಿಷತ್ ರಾಮನಗರ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಸಿ.ಕಾಂತಪ್ಪ ಮಾತನಾಡಿ, ‘ಜಾನಪದ ಪರಿಷತ್ತಿನ ದಶಮಾನೋತ್ಸವ ಸಂದರ್ಭದಲ್ಲಿ ಪಾಂಡವಪುರ ತಾಲ್ಲೂಕು ಘಟಕದ ಉದ್ಫಾಟನೆಯಾಗಿರುವುದು ವಿಶೇಷ. ಮುಂದಿನ ದಿನಗಳಲ್ಲಿ ರಾಮನಗರ ಮತ್ತು ಮಂಡ್ಯ ಜಿಲ್ಲೆ ಘಟಕಗಳಿಂದ ಜಂಟಿ ಸಮ್ಮೇಳನ ಏರ್ಪಡಿಸಲಾಗುವುದು’ ಎಂದರು.

ಇದೇ ವೇಳೆ ಕನ್ನಡ ಜಾನಪದ ಪರಿಷತ್ತಿನ ಪಾಂಡವಪುರ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ಎಲ್.ಸಿ.ಚಂದ್ರು ಅವರಿಗೆ ಧ್ವಜ ಹಾಗೂ ಪದಪತ್ರ ನೀಡಲಾಯಿತು. ಜಾನಪದ ಕಲಾವಿದರಾದ ಕೆರೆತೊಣ್ಣೂರಿನ ಸ್ವಾಮಿಗೌಡ ಮತ್ತು ಆಕಾಶ್ ತಂಡದವರಿಂದ ಸೋಬಾನೆ ಪದ ಹಾಗೂ ಜಾನಪದಗಳನ್ನು ಹಾಡಿಸಲಾಯಿತು.

ಕಾರ್ಯಕ್ರಮದಲ್ಲಿ ಅಂತರರಾಷ್ಟ್ರೀಯ ಜಾನಪದ ಕಲಾವಿದ ಹೆಗ್ಗಡಹಳ್ಳಿ ಸೋಬಾನೆ ಕೃಷ್ಣೇಗೌಡ, ಗ್ರಾ.ಪಂ.ಮಾಜಿ ಅಧ್ಯಕ್ಷ ಎಲ್.ಬಿ.ಕೆಂಪೇಗೌಡ, ಪ್ರಧಾನ ಕಾರ್ಯದರ್ಶಿ ಆರ್.ಶಿವಣ್ಣಗೌಡ, ಜಂಟಿ ಕಾರ್ಯದರ್ಶಿ ಅಖಿಲೇಶ್, ಖಜಾಂಚಿ ಬೇವಿನಕುಪ್ಪೆ ಭಾರತಿಕುಮಾರ್, ಸಹ ಸಂಚಾಲಕಿ ಎಚ್.ಸಿ.ದಾಕ್ಷಾಯಿಣಿ, ಸದಸ್ಯರಾದ ಪುಟ್ಟಸ್ವಾಮಿಗೌಡ, ಶಶಿಧರ್, ಪರಿಷತ್ತಿನ ಪತ್ರಿಕಾ ಕಾರ್ಯದರ್ಶಿ ಎನ್.ಕೃಷ್ಣೇಗೌಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.