ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸ್ಯೆ ಬಿಂಬಿಸುವ ಕವಿತೆ ಅಗತ್ಯ; ಸಲಹೆ

Last Updated 11 ಅಕ್ಟೋಬರ್ 2021, 2:12 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ‘ಕವಿತೆ ವಾಸ್ತವ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವಂತಿರಬೇಕು; ಅವುಗಳಿಗೆ ಪರಿಹಾರವನ್ನೂ ಸೂಚಿಸಬೇಕು’ ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ.ಇಲಿಯಾಸ್‌ ಅಹಮದ್‌ ಹೇಳಿದರು.

ಪಟ್ಟಣದಲ್ಲಿ ನಡೆಯತ್ತಿರುವ ದಸರಾ ಉತ್ಸವದಲ್ಲಿ ಭಾನುವಾರ ನಡೆದ ಕವಿಗೋಷ್ಠಿಯನ್ನು ಉದ್ಘಾಟಿಸಿ
ಅವರು ಮಾತನಾಡಿದರು.

‘ಗಟ್ಟಿ ಕವಿತೆಗಳು ಒಡಮೂಡಬೇ ಕಾದರೆ ಕವಿಗಳಲ್ಲಿ ಅನುಭವ ದಟ್ಟವಾಗಿ ರಬೇಕು. ಅನುಭವದ ಘಟನೆಗಳು, ಕಂಡ ದೃಶ್ಯಗಳು ಕವಿತೆಯಾಗಿ ರೂಪು ಪಡೆದರೆ ಅದು ಹೆಚ್ಚು ಅರ್ಥವತ್ತಾಗಿ ರುತ್ತದೆ. ಕಂಠೀರವ ನರಸರಾಜ, ಚಿಕ್ಕದೇವರಾಜ ಒಡೆಯರ್‌ ಅವರ ರಾಜಾಶ್ರಯದಲ್ಲಿ ನಡೆಯುತ್ತಿದ್ದ ಸಾಹಿತ್ಯ ಗೋಷ್ಠಿಗಳು ಜನ ಮಾನಸದಲ್ಲಿ ಇನ್ನೂ ಉಳಿದಿವೆ. ಅಂಥ ಶ್ರೀಮಂತ ದಿನಗಳು ಮತ್ತೆ ಬರಲಿ’ ಎಂದು ಆಶಿಸಿದರು.

ಡಾ.ಪ್ರದೀಪಕುಮಾರ್‌ ಹೆಬ್ರಿ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ದ್ದರು. ಗಾಂಧಿವಾದಿ ಡಾ.ಬಿ.ಸುಜಯಕುಮಾರ್‌, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಪಾಲಹಳ್ಳಿ ಎಂ.ಸುರೇಂದ್ರ, ಎಂ.ಬಿ. ಕುಮಾರ್‌, ಪುರುಷೋತ್ತಮ ಚಿಕ್ಕಪಾಳ್ಯ, ಎಚ್‌.ಟಿ.ರಾಜಶೇಖರ್‌, ಡಿ.ಎಂ.ರವಿ, ಸಿ.ಸ್ವಾಮಿಗೌಡ ಇದ್ದರು.

ರೈತರ ಬವಣೆ ಬಿಂಬಿಸಿದ ಕವಿ: ಕವಿಗೋಷ್ಠಿಯಲ್ಲಿ ವಾಚಿಸಿದ ತಮ್ಮ ‘ಇಕ್ಷು ದೋಷ’ ಕವಿತೆಯಲ್ಲಿ ರೈತರ ಬವಣೆಯನ್ನು ಬಿಂಬಿಸಿದರು. ಕಬ್ಬು ಬೆಳೆಗಾರರು ಅನುಭವಿಸುತ್ತಿರುವ ಪಾಡುಗಳನ್ನು ಕಣ್ಣಿಗೆ ಕಟ್ಟುವಂತೆ ಬಣ್ಣಿಸಿದರು. ಅನಾರ್ಕಲಿ ಸಲೀಂ ತಮ್ಮ ‘ಹೊಸ ಬದುಕು’ ಕವಿತೆಯಲ್ಲಿ ಕೋವಿಡ್ ತಂದೊಡ್ಡಿರುವ ಸವಾಲುಗಳನ್ನು ವಿವರಿಸಿದರು. ಕವಿ ರೋಷನ್‌
ಚೋಪ್ರಾ ‘ಅಪ್ಪ ನನ್ನೊಮ್ಮೆ ಕ್ಷಮಿಸು’ ಕವಿತೆ ವಾಚಿಸಿದರು.

ಹಿರಿಯ ಕವಿ ಸಾವೆರ ಸ್ವಾಮಿ ತಮ್ಮ ‘ಕತ್ತಲಾಗುವ ಮುನ್ನ ಕವಿತೆ’ಯಲ್ಲಿ ತಳ ಸಮುದಾಯದ ಜನರ ನೋವುಗಳನ್ನು ಬಿಚ್ಚಿಟ್ಟರು. ಗಾನಾಸುಮಾ ಪಟ್ಟ ಸೋಮನಹಳ್ಳಿ ‘ದರ್ಪ ದೌಲತ್ತಿನ ಊರಿನಲ್ಲಿ...’ ಕವಿತೆಯಲ್ಲಿ ಮನುಷ್ಯನ ಸಾವು ಪ್ರಾಣಿಗಳ ಸಾವಿಗಿಂತಲೂ ಕಡೆಯಾಗಿದೆ ಎಂದರು. ಬಲ್ಲೇನಹಳ್ಳಿ ಮಂಜುನಾಥ್‌ ಅವರ ‘ಗೆರೆ ದಾಟಲಾಗದು’ ಹಾಗೂ ಕೊತ್ತತ್ತಿ ರಾಜು ಅವರ ‘ನಿಂತು ಹೋದ ಗಡಿಯಾರ’, ಎನ್‌.ಮಂಜುನಾಥ್‌ ಅವರ ‘ಸರಸ್ವತಮ್ಮನ್‌ ಮನೆಗೀಗ ಬೀಗ ಬಿದ್ದೈತಿ’ ಕವಿತೆಗಳು ಗಮನ ಸೆಳೆದವು.

ಜಕ್ಕನಹಳ್ಳಿ ಮಂಜುನಾಥ್‌, ಕೊ.ನಾ.ಪುರುಷೋತ್ತಮ ಮಹಮದ್‌ ಅಜರುದ್ದೀನ್‌, ಆಶಾ ಹನಿಯಂಬಾಡಿ, ಭವಾನಿ ಲೋಕೇಶ್‌, ನಾ.ರೈತ, ಮಜ್ಜಿಗೆಪುರ ಕೆ.ಶಿವರಾಂ, ಕೊ.ನಾ.ಪುರುಷೋತ್ತಮ, ಪೊಲೀಸ್‌ ಲೋಕೇಶ್‌, ದೊ.ಚಿ.ಗೌಡ, ಮಧುಸೂದನ ಮದ್ದೂರು, ದಾಸ್‌ಪ್ರಕಾಶ್‌ ಬಲ್ಲೇನಹಳ್ಳಿ ಕವಿತೆ ವಾಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT