ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕಾರಣ; ಮೌಲ್ಯ ಉಳಿಸಿಕೊಳ್ಳುವುದು ಕಷ್ಟ

ಬಿ.ಎಚ್‌.ಮಂಗೇಗೌಡ ಶಿಕ್ಷಣ, ಶಿಕ್ಷಕ, ಕೃಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ
Last Updated 4 ಅಕ್ಟೋಬರ್ 2021, 5:19 IST
ಅಕ್ಷರ ಗಾತ್ರ

ಮಂಡ್ಯ: ಸಮಾಜದಲ್ಲಿರುವ ಕಟ್ಟಕಡೆಯ ವ್ಯಕ್ತಿಯನ್ನು ಮುಖ್ಯವಾಹಿನಿಗೆ ತರು ವುದೂ ಸೇರಿದಂತೆ ಅವರಿಗೆ ಅಧಿಕಾರ ಮತ್ತು ಅವಕಾಶಗಳನ್ನು ಹಂಚುವುದು ಸಂವಿಧಾನದ ಆಶಯವಾಗಿದೆ. ಈ ಕಾರಣಕ್ಕಾಗಿಯೇ ಮೀಸಲಾತಿ ತರಲಾ ಗಿದೆ ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ನಗರದ ಕರ್ನಾಟಕ ಸಂಘದ ಆವರಣದಲ್ಲಿ ಭಾನುವಾರ ಆಯೋ ಜಿಸಿದ್ದ ಬಿ.ಎಚ್‌.ಮಂಗೇಗೌಡ ಶಿಕ್ಷಣ, ಶಿಕ್ಷಕ ಹಾಗೂ ಕೃಷಿಕ ಪ್ರಶಸ್ತಿ ಪ್ರದಾನ, ಅಕ್ಷರದಾತ ಬಿ.ಎಚ್.ಮಂಗೇಗೌಡ ಶತಮಾನೋತ್ಸವ ಸಂಸ್ಮರಣಾ ಗ್ರಂಥ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಮೀಸಲಾತಿ ತಂದಿರುವುದನ್ನು ಎಲ್ಲರೂ ಸ್ವಾಗತಿಸಿ ಸಂವಿಧಾನ ಆಶಯದಂತೆ ಕೆಲಸ ಮಾಡಬೇಕಿದೆ. ಕರ್ನಾಟಕದಲ್ಲಿ 6,020 ಗ್ರಾಮ ಪಂಚಾಯಿತಿಗಳಿವೆ. 99 ಸಾವಿರ ಸದಸ್ಯರಿದ್ದಾರೆ, ಇದರಲ್ಲಿ 50 ಸಾವಿರಕ್ಕೂ ಹೆಚ್ಚು ಮಹಿಳೆಯರಿದ್ದಾರೆ. 25 ಸಾವಿರಕ್ಕೂ ಅಧಿಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿದ್ದಾರೆ. ಇವೆಲ್ಲವನ್ನೂ ನಿಭಾಯಿಸಿಕೊಂಡು ಸುಂದರವಾದ ಆಡಳಿತ ನೋಡುವುದೇ ಸಾಮಾಜಿಕ ನ್ಯಾಯದ ಪರಿಕಲ್ಪನೆ ಎಂದು ಅವರು ಅಭಿಪ್ರಾಯ ಪಟ್ಟರು.

ಮಂಗೇಗೌಡರು ಆ ಕಾಲದಲ್ಲಿ ಗ್ರಾಮ ಪಂಚಾಯಿತಿ ಚೇರ್ಮನ್‌ ಆಗಿ ಕೆಲಸ ಮಾಡಿದ್ದರು. ವ್ಯವಸ್ಥೆಯ ನಡುವೆ ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗಿ ಯಶಕಂಡಿದ್ದರು. ಬದುಕಿನದ್ದುಕ್ಕೂ ಕೃಷಿಯೊಂದಿಗೆ ಶಿಕ್ಷಣಕ್ಕೂ ಮಹತ್ವ ನೀಡಿದ್ದರು. ಅವರನ್ನ ಸುದೀರ್ಘಕಾಲ ನೆನಪಿಟ್ಟುಕೊಂಡು ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ. ಬಲಾಢ್ಯರ ಕಾಲದಲ್ಲಿ ಪದ್ಮಶ್ರೀ ಪ್ರಶಸ್ತಿ ಸೇರಿದಂತೆ ಇತರ ಮೌಲ್ಯಯುತ ಪ್ರಶಸ್ತಿಗಳು ಉಳ್ಳವರ ಪಾಲಾಗುತ್ತಿತ್ತು. ಇದನ್ನು ಹೋಗಲಾಡಿಸಿ ಸಾಮಾನ್ಯರ ಸಾಧನೆ ಗುರುತಿಸಿದ ಪ್ರಧಾನಿ ನರೇಂದ್ರಮೋದಿ ಅವರನ್ನು ರಾಜಕೀಯ ಬದಿಗಿಟ್ಟು ಗೌರವಿಸುತ್ತೇನೆ ಎಂದರು.

ರಾಜಕಾರಣದಲ್ಲಿ ಮೌಲ್ಯಗಳನ್ನು ಉಳಿಸಿಕೊಳ್ಳುವುದು ಕಷ್ಟ. ಹಿಂದೆ ರಾಜಕೀಯಕ್ಕೆ ಮೌಲ್ಯ ಇತ್ತು. ಪ್ರಜಾಪ್ರಭುತ್ವದ ಬೇರು ಗಟ್ಟಿಯಾಗಲು ಸಂಘಟನಾತ್ಮಕ ಕೆಲಸಗಳನ್ನು ಮಾಡಬೇಕಿದೆ. ರಾಜಕಾರಣ ಎಂಬುದು ಸುಲಭವೂ ಹೌದು, ಕಠಿಣವೂ ಹೌದು. ಗಾಂಧಿವಾದಿ ಮಂಗೇಗೌಡರಂಥ ವಿಚಾ ರಶೀಲರನ್ನು ನೆನಪು ಮಾಡಿಕೊಳ್ಳುವ ಅನಿವಾರ್ಯತೆ ಇದೆ ಎಂದು ತಿಳಿಸಿದರು.

ಶಾಸಕ ಡಿ.ಸಿ.ತಮ್ಮಣ್ಣ ಮಾತನಾಡಿ, ಹಳೇಮೈಸೂರು ಭಾಗದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು ನೀಡಿದ ಶಿಕ್ಷಣ ಸಂಸ್ಥೆಗಳನ್ನು ಬಿಟ್ಟರೆ ಖಾಸಗಿಯಾಗಿ ಹಳ್ಳಿಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ತತೆರೆದ ಮಹನೀಯರಲ್ಲಿ ಕನಕಪುರದ ಕರಿಯಪ್ಪ ಅವರು ಹಾಗೂ ಬೆಕ್ಕಳೆಲೆ ಮಂಗೇಗೌಡರು. ಮಕ್ಕಳಿಗೆ ಊಟ ಹಾಕಿ ವಿದ್ಯಾದಾನ ಮಾಡಿದ ಕೀರ್ತಿ ಅವರಿಗೆ ಸಲ್ಲಬೇಕು ಎಂದು ಅವರು ಸ್ಮರಿಸಿದರು.

ಪದ್ಮಶ್ರೀ ಪುರಸ್ಕೃತ ಮಂಗಳೂರಿನ ಹರೇಕಳ ಹಾಜಬ್ಬ (ಶಿಕ್ಷಣ), ಚನ್ನಪಟ್ಟಣದ ನಿವೃತ್ತ ಶಿಕ್ಷಕ ಕೆ.ಪುಟ್ಟರಾಮಯ್ಯ (ಶಿಕ್ಷಕ), ಪ್ರಗತಿಪರ ಕೃಷಿಕ ನಾಗಮಂಗಲದ ಬೊಮ್ಮೇನಹಳ್ಳಿ ಬಿ.ಶಿವರಾಮು ಅವರಿಗೆ ಕೃಷಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಶಾಸಕ ಎಂ.ಶ್ರೀನಿವಾಸ್, ವಿಧಾನ ಪರಿಷತ್‌ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ, ಕಾರ್ಯದರ್ಶಿ ಲೋಕೇಶ್‌ ಚಂದಗಾಲು, ಉಪಾಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT