ಗುರುವಾರ , ಫೆಬ್ರವರಿ 25, 2021
31 °C

ವಸತಿ ಯೋಜನೆಯಲ್ಲಿ ತೊಡಕುಂಟು– ಆರ್‌ಡಿಪಿಆರ್‌ ಕಾರ್ಯದರ್ಶಿ ಎಲ್‌.ಕೆ. ಅತೀಕ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀರಂಗಪಟ್ಟಣ: ವಸತಿ ಯೋಜನೆ ಅನುದಾನ ಬಿಡುಗಡೆ ವಿಷಯದಲ್ಲಿ ತೊಡಕಿರುವುದು ನಿಜ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ (ಆರ್‌ಡಿಪಿಆರ್‌) ಕಾರ್ಯದರ್ಶಿ ಎಲ್‌.ಕೆ. ಅತೀಕ್‌ ಹೇಳಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಗ್ರಾ.ಪಂ. ಸದಸ್ಯರಿಗೆ ಏರ್ಪಡಿಸಿದ್ದ ತರಬೇತಿಯಲ್ಲಿ ಭಾಗವಹಿಸಿದ್ದ ಅವರು ಸದಸ್ಯರ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ವಸತಿ ಯೋಜನೆ ಫಲಾನಭವಿಗಳಿಗೆ ಸಕಾಲಕ್ಕೆ ಅನುದಾನ ಬರುತ್ತಿಲ್ಲ ಎಂಬ ದೂರುಗಳು ಬರುತ್ತಿವೆ. ವಸತಿ ಯೋಜನೆ ವಿಭಾಗ ಅದನ್ನು ನಿಭಾಯಿಸಿಲಿದೆ ಎಂದು ಹೇಳಿದರು.

ಗಂಡಸರಿಗೆ ಅಧಿಕಾರ ಕೊಡಬೇಡಿ

ಮಹಿಳಾ ಜನಪ್ರತಿನಿಧಿಗಳು ಗಂಡಸರಿಗೆ ಅಧಿಕಾರ ಚಲಾಯಿಸಲು ಬಿಡಬಾರದು. ತಮ್ಮ ಅಧಿಕಾರ ವ್ಯಾಪ್ತಿ, ಗ್ರಾ.ಪಂ.ಗಳಿಗೆ ಸಿಗುವ ಸರ್ಕಾರದ ಸವಲತ್ತುಗಳ ಬಗ್ಗೆ ತಿಳಿದುಕೊಳ್ಳಬೇಕು. ಸರ್ಕಾರದ ಯೋಜನೆಗಳ ಅನುಷ್ಠಾನದಲ್ಲಿ ದಕ್ಷತೆಯಿಂದ ಕೆಲಸ ಮಾಡಬೇಕು. ಗಂಡಸರು ಮೂಗು ತೂರಿಸಲು ಅವಕಾಶ ನೀಡಬಾರದು ಎಂದು ಮಹಿಳಾ ಸದಸ್ಯರಿಗೆ ಅತೀಕ್‌ ತಿಳಿಸಿದರು.

ರಾಜ್ಯದ 285 ಕೇಂದ್ರಗಳಲ್ಲಿ ಗ್ರಾ.ಪಂ. ಸದಸ್ಯರಿಗೆ ಏಕ ಕಾಲದಲ್ಲಿ ತರಬೇತಿ ನಡೆಯುತ್ತಿದೆ. ಸ್ಥಳೀಯ ತಜ್ಞರ ಜತೆಗೆ ಎಸ್‌ಐಆರ್‌ಡಿ ವತಿಯಿಂದಲೂ ನೇರ ಪ್ರಸಾರದ ಮೂಲಕ ತರಬೇತಿ ಕೊಡಲಾಗುತ್ತಿದೆ. ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

‘ಕಳಪೆ ಕಾಮಗಾರಿ ನಡೆಸಿದರೂ ಪರಿಶೀಲನೆ ನಡೆಸದೆ ಅಧಿಕಾರಿಗಳು ಗುತ್ತಿಗೆದಾರರಿಗೆ ಬಿಲ್‌ ಮಾಡಿಕೊಡತ್ತಿದ್ದಾರೆ ಎಂದು ಸಬ್ಬನಕುಪ್ಪೆ ಗ್ರಾ.ಪಂ. ಸದಸ್ಯ ಚಿದಂಬರ ಹೇಳಿದರು. ವಸತಿ ಯೋಜನೆಯಡಿ ಸಾಮಾನ್ಯ ವರ್ಗದ ಜನರಿಗೆ ಬೇಡಿಕೆಯಷ್ಟು ಮನೆ ಕಟ್ಟಿಸಿಕೊಡಲು ಆಗುತ್ತಿಲ್ಲ. ಅನುಪಾತ ಹೆಚ್ಚಿಸಿ ಎಂದು ಕೆ.ಎಂ. ಮಲ್ಲೇಶ್‌ ಮನವಿ ಮಾಡಿದರು. ಸಅಂಬಂಧಿಸಿದವರ ಜತೆ ಚರ್ಚಿಸುತ್ತೇನೆ ಎಂದು ಅತೀಕ್‌ ಹೇಳಿದರು.

ಗ್ರಾ.ಪಂ. ಸದಸ್ಯರು ಹಾಗೂ ಉನ್ನತ ಅಧಿಕಾರಿಗಳ ನಡುವೆ ಅರ್ಧ ತಾಸು ಚರ್ಚೆ ನಡೆಯಿತು. ಜಿಲ್ಲಾ ಪಂಚಾಯಿತಿ ಸಿಇಒ ಜುಲ್ಫೀಕರ್‌ ಉಲ್ಲಾ ಮಾತನಾಡಿದರು. ತಾ.ಪಂ. ಇಒ ಭೈರಪ್ಪ, ಸಹಾಯಕ ನಿರ್ದೇಶಕ ಎಸ್‌.ಬಿ. ಶಿವಕುಮಾರ್‌ ಇತರರು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.