40ಕ್ಕೂ ಹೆಚ್ಚು ಕರುಗಳ ರಕ್ಷಣೆ

ಕೆ.ಆರ್.ಪೇಟೆ: ಬೆಂಗಳೂರಿನ ಕಡೆಗೆ ಕಸಾಯಿಖಾನೆಗೆ ಸಾಗಿಸುತ್ತಿದ್ದ ಸುಮಾರು 40ಕ್ಕೂ ಅಧಿಕ ಹಸುವಿನ ಕರುಗಳನ್ನು ತಾಲ್ಲೂಕಿನ ಅಕ್ಕಿಹೆಬ್ಬಾಳು ಗ್ರಾಮದಲ್ಲಿ ಗುರುವಾರ ರಕ್ಷಿಸಲಾಗಿದೆ.
ಮಾಹಿತಿಯಂತೆ ಅಕ್ಕಿಹೆಬ್ಬಾಳು ಗ್ರಾಮದ ಯುವಕರು ಕರುಗಳನ್ನು ಕೊಂಡೊಯ್ಯುತ್ತಿದ್ದ ವಾಹನವನ್ನು ಅಡ್ಡಗಟ್ಟಿದ್ದಾರೆ. ಆಗ ಚಾಲಕ ಪರಾರಿಯಾಗಿದ್ದಾನೆ. ನಂತರ ಪೊಲೀಸರಿಗೆ ವಿಷಯ ತಿಳಿಸಿ, ವಾಹನವನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಅಕ್ಕಿಹೆಬ್ಬಾಳು ಹೊರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ಮಾನವೀಯತೆ ಮೆರೆದ ಗ್ರಾಮಸ್ಥರು: ಸುಮಾರು 40ಕ್ಕೂ ಅಧಿಕ ಕರುಗಳನ್ನು ಪೊಲೀಸ್ ಠಾಣೆಯ ಆವರಣದಲ್ಲಿ ವಾಹನದಿಂದ ಇಳಿಸಿ ಅವುಗಳಿಗೆ ಹಾಲುಣಿಸುವ ಕೆಲಸ ಮಾಡಿದ ಗ್ರಾಮಸ್ಥರು ಮತ್ತು ಯುವಕರು ನಂತರ ಪಾಂಡವಪುರ ತಾಲ್ಲೂಕಿನ ಬ್ಯಾಡರಹಳ್ಳಿಯ ಗೋಶಾಲೆಗೆ ಅವುಗಳನ್ನು ಬಿಡಲು ಕ್ರಮ ಕೈಗೊಂಡು ಮಾನವೀಯತೆ ಮೆರೆದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.