ಸೌಲಭ್ಯಗಳಿಗೂ ಕತ್ತರಿ:
‘ಜಮೀನು ಮೃತರ ಹೆಸರಿನಲ್ಲಿದ್ದರೆ, ಕೃಷಿ ಸಾಲ ಸಿಗುವುದಿಲ್ಲ. ಬಿತ್ತನೆಬೀಜ, ರಸಗೊಬ್ಬರ, ಕೃಷಿ ಯಂತ್ರೋಪಕರಣಗಳಿಗೆ ಸಹಾಯಧನ ದೊರೆಯುವುದಿಲ್ಲ. ಬೆಳೆ ನಷ್ಟವಾದರೆ ಪರಿಹಾರ ಕೂಡ ಬರುವುದಿಲ್ಲ. ಇಲಾಖೆಯ ಸೌಲಭ್ಯಗಳೂ ಸಿಗುವುದಿಲ್ಲ. ಬೆಳೆ ವಿಮೆ ಮಾಡಿಸಬೇಕೆಂದರೂ ಜಮೀನಿನ ಖಾತೆ ಬದುಕಿರುವವರ ಹೆಸರಿನಲ್ಲಿರಬೇಕು’ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.