ಹಲಗೂರು: ಸಮೀಪದ ಕೊನ್ನಾಪುರ ದೊಡ್ಡಿ ಗೇಟ್ ಬಳಿ ಕಾಡಾನೆಗಳ ಹಾವಳಿ ತಡೆಯಲು ಅಳವಡಿಸಿದ್ದ 2 ಸೋಲಾರ್ ಬ್ಯಾಟರಿಗಳನ್ನು ಭಾನುವಾರ ರಾತ್ರಿ ಕಳ್ಳರು ಒತ್ತೊಯ್ದಿದ್ದಾರೆ.

ಕಾಡು ಪ್ರಾಣಿಗಳು ಅರಣ್ಯ ಪ್ರದೇಶದಿಂದ ಜನವಸತಿ ಪ್ರದೇಶಗಳತ್ತ ಬರುವುದನ್ನು ತಡೆಗಟ್ಟಲು ಕಾವೇರಿ ವನ್ಯಜೀವಿ ವಲಯದ ಶಿಂಷಾ ಶಾಖೆಯ ತಾಳವಾಡಿ ಗಸ್ತಿನಲ್ಲಿ ಸೋಲಾರ್ ಬೇಲಿಗಾಗಿ 2 ಬ್ಯಾಟರಿಗಳನ್ನು ಅಳವಡಿಸಲಾಗಿತ್ತು.

ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಕಾಡು ಪ್ರಾಣಿಗಳಿಂದ ಜನರು ಮತ್ತು ಬೆಳೆಗಳನ್ನು ರಕ್ಷಣೆ ಮಾಡಲು ಅರಣ್ಯ ವಲಯದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೋಲಾರ್ ಬೇಲಿ ಹಾಕಲಾಗಿದೆ. ಅಗತ್ಯವಿರುವ ಬ್ಯಾಟರಿಗಳನ್ನು ಕೆಲವು ನಿರ್ದಿಷ್ಟ ಸ್ಥಳದಲ್ಲಿ ಅಳವಡಿಸಲಾಗಿದೆ. ಜನರ ರಕ್ಷಣೆಗೆ ಅರಣ್ಯ ಇಲಾಖೆ ಸಿದ್ಧವಿದ್ದು, ಸಾರ್ವಜನಿಕರು ಸಹಕಾರ ನೀಡಬೇಕು’ ಎಂದು ವಲಯ ಅರಣ್ಯ ಅಧಿಕಾರಿ ಪ್ರಮೋದ್ ಕುಮಾರ್ ದೇವ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.