ಮಂಡ್ಯ: ಪ್ರಸಕ್ತ ಸಾಲಿನ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯದ ಕೊಕ್ಕೊ ಮಹಿಳೆಯರ ಪಂದ್ಯಾವಳಿಯಲ್ಲಿ ಮಂಡ್ಯ ವಿಶ್ವವಿದ್ಯಾಲಯದ ಮಹಿಳೆಯರ ತಂಡ ದ್ವಿತೀಯ ಸ್ಥಾನ ಗಳಿಸಿ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಪಂದ್ಯಾವಳಿಗೆ ಅರ್ಹತೆ ಪಡೆದಿದೆ.

ಕೇರಳದ ಕ್ಯಾಲಿಕಟ್ನಲ್ಲಿ ನಡೆದ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಕೊಕ್ಕೊ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನ ಪಡೆದ ತಂಡದ ಆಟಗಾರ್ತಿ ಕೆ.ಆರ್. ತೇಜಸ್ವಿನಿ ಅವರು ಉತ್ತಮ ಆಕ್ರಮಣಗಾರ್ತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕ್ರೀಡಾಪಟುಗಳಾದ ತೇಜಸ್ವಿನಿ ಕೆ.ಆರ್, ಚೈತ್ರಾ, ಅರ್ಪಿತಾ ಆರ್, ಮೇಘನಾ ಎಸ್, ಮೋನಿಕಾ ಎಲ್, ವಿನುತಾ ಎಸ್, ಅಕ್ಷತಾ ಕೆ, ವರಲಕ್ಷ್ಮಿ ಕೆ.ಪಿ, ಚಂದನ ಕೆ.ಆರ್, ಮಾನ್ಯಗೌಡ ಜಿ.ಎಸ್, ಪುನೀತಾ ಕೆ.ಎಸ್, ಅಂಕಿತಾ ಜಿ.ಟಿ ಅವರು ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ತಂಡ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಲು ಕಾರಣರಾಗಿದ್ದಾರೆ.

ವಿವಿ ಕುಲಪತಿ ಪ್ರೊ.ಕೆ. ಶಿವಚಿತ್ತಪ್ಪ, ಕುಲಸಚಿವರಾದ ಬಿ.ಎನ್. ವೀಣಾ, ಯೋಗಾನರಸಿಂಹಚಾರಿ, ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ನಿರ್ದೇಶಕ ವಿ. ಶ್ರೀನಿವಾಸ್, ವ್ಯವಸ್ಥಾಪಕ ಎನ್. ಶಿವಕುಮಾರ್ ಅವರು ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿರುವ ತಂಡದ ಆಟಗಾರರನ್ನು ಪ್ರಶಂಶಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.