ಮಂಡ್ಯ: ಪಿ.ರವಿಕುಮಾರ್ ಅವರು ಜನಬೆಂಬಲದೊಂದಿಗೆ ಶಾಸಕರಾಗಿರುವುದೇ ವಿನಃ ಯಾವುದೇ ಲಾಟರಿ ತರವಲ್ಲ, ಏಕೆಂದರೆ ನಿಖಿಲ್ ಕುಮಾರಸ್ವಾಮಿ ಅವರ ತಾತ ಎಚ್.ಡಿ.ದೇವೇಗೌಡ ಅವರು ಕಾಂಗ್ರೆಸ್ನ ಲಾಟರಿ ಎಂಬ ಬೆಂಬಲದೊಂದಿಗೆ ಆಶ್ಚರ್ಯಕರವಾಗಿ ಪ್ರಧಾನ ಮಂತ್ರಿ ಆಗಿದ್ದು ಎನ್ನುವುದನ್ನು ನಿಖಿಲ್ ಮತ್ತು ಅವರ ಅಭಿಮಾನಿಗಳು ಬೇರೆಯವರಿಗೆ ಲಾಟರಿ ಪದ ಬಳಸುವ ಮುನ್ನ ಯೋಚನೆ ಮಾಡಬೇಕು ಎಂದು ಕಾಂಗ್ರೆಸ್ ನಗರ ಘಕಟದ ಅಧ್ಯಕ್ಷ ಪಿ.ರುದ್ರಪ್ಪ ತಿರುಗೇಟು ನೀಡಿದರು.

ಕಾಂಗ್ರೆಸ್ ಬೆಂಬಲದೊಂದಿಗೆ ಎಚ್.ಡಿ.ದೇವೇಗೌಡರು ಸೇರಿದಂತೆ ಎಚ್.ಡಿ.ಕುಮಾರಸ್ವಾಮಿ ಲಾಟರಿ ತರಹನೇ ಸಿಎಂ ಆಗಿದ್ದರು, ಇದು ಜಗತ್ತಗೆ ಗೊತ್ತಿದೆ. ದೇವೇಗೌಡರು ಪಕ್ಷದ ಸ್ವಂತ ಬಲದಿಂದ ಗೆದ್ದು ಪ್ರಧಾನಿಯಾದವರಲ್ಲ. ಹಾಗೆಯೇ, ಎಚ್.ಡಿ.ಕುಮಾರಸ್ವಾಮಿ ಅವರೂ ಜೆಡಿಎಸ್ ಬಹುಮತ ಸಾಧಿಸಿ ಮುಖ್ಯಮಂತ್ರಿ ಗದ್ದುಗೆ ಏರಲಿಲ್ಲ. ತಂದೆ-ಮಗ ಇಬ್ಬರೂ ಕಾಂಗ್ರೆಸ್ ಬೆಂಬಲದೊಂದಿಗೆ ದೊಡ್ಡ ಹುದ್ದೆಗಳನ್ನು ಅಲಂಕರಿಸಿದವರು ಎಂದು ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ಪಕ್ಷದ ಯಾರೊಬ್ಬರ ಬಗ್ಗೆಯೂ ಲಘುವಾಗಿ ಮಾತನಾಡುವ ನೈತಿಕತೆ ಜೆಡಿಎಸ್ನವರಿಗೆ ಇಲ್ಲ. ಜನಪ್ರತಿನಿಧಿಯೊಬ್ಬರ ಬಗ್ಗೆ ಮಾತನಾಡುವಾಗ ನಿಖಿಲ್ ಕುಮಾರಸ್ವಾಮಿ ಅವರು ಎಚ್ಚರಿಕೆಯಿಂದ ಮಾತನಾಡಬೇಕು. ಪಿ.ರವಿಕುಮಾರ್ ಯಾವುದೇ ರಾಜಕೀಯ ಕುಟುಂಬದ ಹಿನ್ನೆಲೆಯಿಂದ ಬಂದವರಲ್ಲ. ಮತ್ತೊಮ್ಮೆ ಹೀಗೆ ಮಾತನಾಡಿದರೆ ಕಾರ್ಯಕರ್ತರ ಜೊತೆ ಸೇರಿಕೊಂಡು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ನಗರಸಭಾ ಸದಸ್ಯ ಶ್ರೀಧರ್ ಮಾತನಾಡಿದರು. ಮುಖಂಡರಾದ ಜಾಕೀರ್ಪಾಷ, ಪೂರ್ಣಿಮಾ, ನಯೀಮ್, ಶಿವಪ್ರಕಾಶ್, ಸಿ.ಎಂ.ದ್ಯಾವಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.