ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಗಲಲ್ಲೂ ಉರಿಯುತ್ತಿವೆ ಬೀದಿ ದೀಪ

ನಿರ್ವಹಣೆ ಕೊರತೆ; ಸಮಸ್ಯೆಗೆ ಕಾರಣ
Last Updated 9 ನವೆಂಬರ್ 2021, 4:46 IST
ಅಕ್ಷರ ಗಾತ್ರ

ಬೆಳಕವಾಡಿ: ಮಳವಳ್ಳಿ ತಾಲ್ಲೂಕಿನ ಬೆಳಕವಾಡಿ ಗ್ರಾಮ ಪಂಚಾಯಿತಿಯ ವಾಪ್ತಿಯ ಪ್ರಮುಖ ರಸ್ತೆಗಳ ಬೀದಿ ದೀಪಗಳು ನಿರ್ವಹಣೆ ಕೊರತೆಯಿಂದ ಹಗಲುಹೊತ್ತಿನಲ್ಲೂ ಉರಿಯುತ್ತಿವೆ.

ವಿದ್ಯುತ್ ಪೋಲು ತಡೆಗೆ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಆದರೆ, ನಿರ್ವಹಣೆ ಕೊರತೆಯಿಂದಾಗಿ ದೀಪಗಳು ಹಗಲು ಹೊತ್ತಿನಲ್ಲೂ ಉರಿಯುತ್ತಿವೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎನ್ನುವುದು ಸಾರ್ವಜನಿಕರ ಆರೋಪ.

ಒಂದು ತಿಂಗಳಿನಿಂದ ನಿರಂತರವಾಗಿ ಹಗಲಲ್ಲಿ ಬೀದಿ ದೀಪಗಳು ಉರಿಯುತ್ತಿವೆ. ಇವುಗಳನ್ನು ನೋಡಿ ಹಲವು ಬಾರಿ ಸ್ಥಳೀಯರು ಅಧಿಕಾರಿಗಳಿಗೆ ತಿಳಿಸಿದ್ದಾರೆ. ಗ್ರಾಮದಲ್ಲಿ ಸುಮಾರು 600 ವಿದ್ಯುತ್ ದೀಪಗಳಿದ್ದು, ಶೇ 70ರಷ್ಟು ದೀಪಗಳು 24 ಗಂಟೆಯೂ ಉರಿಯುತ್ತವೆ. ಗ್ರಾ.ಪಂ.ಅಧ್ಯಕ್ಷೆ ಮತ್ತು ಉಪಾಧ್ಯಕ್ಷರು ಇರುವ 3ನೇ ವಾರ್ಡ್‌ನಲ್ಲೇ ನಿರ್ವಹಣೆ ಕೊರತೆ ಇದೆ.

ಸ್ವೀಚ್ ಬೋರ್ಡ್‌ಗಳೇ ಇಲ್ಲ: ಗ್ರಾಮದ ಹಲವು ಕಡೆ ಬೀದಿ ದೀಪಗಳನ್ನು ಆರಿಸಲು ಸ್ವಿಚ್ ಬೋರ್ಡ್‌ಗಳೇ ಇಲ್ಲ. ಇನ್ನೂ ಕೆಲವು ಕಡೆ ಸ್ವಿಚ್ ಬೋರ್ಡ್‌ಗಳು ಕಿತ್ತು ಹೋಗಿವೆ. ಅವುಗಳ ತಂತಿ ನೇತಾಡುತ್ತಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಬೀದಿ ದೀಪಗಳ ನಿರ್ವಹಣೆಗೆ ಅಧಿಕಾರಿಗಳು ಕ್ರಮ ಕೈಗೊಂಡು ವಿದ್ಯುತ್ ಉಳಿತಾಯಕ್ಕೆ ಮುಂದಾಗಬೇಕು ಎಂದು ಗ್ರಾಮದ ಬಿ.ಎಸ್.ಸುಧಾಕರ್ ಆಗ್ರಹಿಸಿದ್ದಾರೆ.

ಹಗಲಿನಲ್ಲಿ ಬೀದಿ ದೀಪಗಳು ಉರಿಯುತ್ತಿರುವುದು ಗಮನಕ್ಕೆ ಬಂದಿದೆ. ವಿದ್ಯುತ್ ಬಿಲ್ ಪಾವತಿಸಲು ಜನರ ತೆರಿಗೆ ಹಣ ಅನವಶ್ಯಕವಾಗಿ ವ್ಯಯವಾಗುತ್ತಿದೆ. ಕೂಡಲೇ ನಿರ್ವಹಣೆಗೆ ಸೂಚನೆ ನೀಡಲಾಗುವುದು. ಮುಂದಿನ ಸಾಮಾನ್ಯ ಸಭೆಯಲ್ಲಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಬೆಳಕವಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೆ.ಟಿ.ಉಮಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT