ಮಳವಳ್ಳಿ (ಮಂಡ್ಯ ಜಿಲ್ಲೆ): ತಾಲ್ಲೂಕಿನ ಕಸಬಾ, ಹಲಗೂರು ಹೋಬಳಿಯ ವಿವಿಧೆಡೆ ಗುರುವಾರ ರಾತ್ರಿ ಅಕಾಲಿಕ ಧಾರಾಕಾರ ಮಳೆಯಾಗಿದ್ದು, ನೂರಾರು ಎಕರೆಯಲ್ಲಿ ಭತ್ತದ ಬೆಳೆ ಮುಳುಗಿದೆ.

ತಾಲ್ಲೂಕಿನ ನೆಲಮಾಕನಹಳ್ಳಿ, ತಳಗವಾದಿ, ಮಾದಹಳ್ಳಿ, ಗುಳಘಟ್ಟ, ಕಂದೇಗಾಲ, ನೆಲ್ಲೂರು, ದುಗ್ಗನಹಳ್ಳಿ ತಾಲ್ಲೂಕಿನ ಬಹುತೇಕ ಕಡೆ ಮಧ್ಯರಾತ್ರಿ 2 ಗಂಟೆ ಕಾಲ ಮಳೆಯಾಯಿತು.

‘ರೈತರಿಗೆ ಪ್ರತಿ ಎಕರೆಗೆ ಕನಿಷ್ಠ ₹ 30 ಸಾವಿರ ಪರಿಹಾರ ನೀಡಬೇಕು’ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಲ್.ಎನ್.ಭರತ್ ರಾಜ್ ಆಗ್ರಹಿಸಿದ್ದಾರೆ.

ಚಾಮರಾಜನಗರ; ಬಿರುಸು ಮಳೆ : ಜಿಲ್ಲೆಯ ಹಲವೆಡೆ ಶುಕ್ರವಾರ ಬೆಳಿಗ್ಗೆ ಬಿರುಸಿನ ಮಳೆಯಾಯಿತು. ನಗರದಲ್ಲಿ ಜೋರು ಮಳೆಯಾದರೆ, ಯಳಂದೂರು, ಸಂತೇಮರಹಳ್ಳಿ ಹಾಗೂ ಗುಂಡ್ಲುಪೇಟೆಯಲ್ಲಿ ಸಾಧಾರಣ ಮಳೆ ಬಿತ್ತು. ಮಳೆಯಿಂದಾಗಿ ಕೆಲಹೊತ್ತು ಮೋಡಕವಿದಿದ್ದರೆ ಕೆಲಹೊತ್ತು ಬಿಸಿಲಿನ ವಾತಾವರಣ ಇತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.