ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀಚ ರಾಜಕಾರಣಿಗಳಿಗೆ ಬುದ್ಧಿ ಕಲಿಸಿ

ಡಾ.ಯತೀಂದ್ರ ಸಿದ್ದರಾಮಯ್ಯ ಮನವಿ, ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ
Last Updated 30 ನವೆಂಬರ್ 2019, 10:15 IST
ಅಕ್ಷರ ಗಾತ್ರ

ಸಂತೇಬಾಚಹಳ್ಳಿ: ಬಿಜೆಪಿಯ ಕುತಂತ್ರದಿಂದಾಗಿ ಈ ಉಪಚುನಾವಣೆ ಬಂದಿದೆ. ಇದಕ್ಕೆ ಕಾರಣರಾದ ಕೆ.ಸಿ.ನಾರಾಯಣಗೌಡರನ್ನು ತಿರಸ್ಕರಿಸಿ, ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್‌ ಅವರಿಗೆ ಮತ ನೀಡಬೇಕು ಎಂದು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಮನವಿ ಮಾಡಿದರು.

ಹೋಬಳಿಯ ಆದಿಹಳ್ಳಿ, ಕೊಟಗಹಳ್ಳಿ, ಚಿಕ್ಕತಾರಹಳ್ಳಿ, ದೊಡ್ಡಹಾರನಹಳ್ಳಿ ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚನೆ ಮಾಡಿ ಮಾತನಾಡಿದರು.

ನಾರಾಯಣಗೌಡ ಅವರು ಜನರು ನೀಡಿದ್ದ ಅಧಿಕಾರನ್ನು ಹಣದ ಆಸೆಗಾಗಿ ಮಾರಾಟ ಮಾಡಿಕೊಂಡಿದ್ದಾರೆ. ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಂಡ ಇವರ ನಡೆ ಖಂಡನೀಯ. ಅನರ್ಹರಿಗೆ ಚುನಾವಣೆಯಲ್ಲಿ ಸ್ಪರ್ಧೆ ಮಾಡದಂತೆ ಸುಪ್ರೀಂಕೋರ್ಟ್‌ ಆದೇಶ ನೀಡಿದ್ದರೆ ಮುಂದೆ ಯಾರೂ ಕೂಡ ಅನಗತ್ಯವಾಗಿ ರಾಜೀನಾಮೆ ನೀಡುತ್ತಿರಲಿಲ್ಲ. ಅನೈತಿಕವಾದ ರಾಜಕಾರಣ ಮಾಡುವ ಇಂತಹ ನೀಚ ರಾಜಕಾರಣಿಗಳಿಗೆ ಮತದಾರರು ಬುದ್ಧಿ ಕಲಿಸಬೇಕು. ರಾಜಕಾರಣದಲ್ಲಿ ಮುಂದುವರೆಯಲು ಬಿಡಬಾರದು. ಇಲ್ಲದಿದ್ದರೆ ರಾಜಕೀಯ ವ್ಯವಸ್ಥೆ ಸುಧಾರಣೆಯಾಗಲ್ಲ ಎಂದು ಹೇಳಿದರು.

ಕೆ.ಬಿ.ಚಂದ್ರಶೇಖರ್ ಒಳ್ಳೆಯ ಅಭ್ಯರ್ಥಿ. ಅವರಿಗೆ ತಾಲ್ಲೂಕಿನ ಜನರ ಸಮಸ್ಯೆಗಳ ಬಗ್ಗೆ ಅರಿವಿದೆ. ಅವರು ಉತ್ತಮ ಆಡಳಿತಗಾರರಾಗಿದ್ದಾರೆ. ಎರಡು ಬಾರಿ ಶಾಸಕರಾಗಿ ಜನಪರವಾದ ಕಾರ್ಯಗಳನ್ನು ಮಾಡಿದ್ದಾರೆ. ಎರಡು ಬಾರಿ ಸೋಲು ಅನುಭವಿಸಿದ್ದಾರೆ. ಇಂತಹ ವ್ಯಕ್ತಿಗೆ ಅಧಿಕಾರ ಕೊಡಬೇಕು ಎಂದು ಮನವಿ ಮಾಡಿದರು.

ಯಾವುದೇ ಕಾರಣಕ್ಕೂ ತಾಲ್ಲೂಕಿನ ಪ್ರಬುದ್ಧ ಮತದಾರರು ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಅಭ್ಯರ್ಥಿಗಳನ್ನು ಸಾರಾಸಗಟಾಗಿ ತಿರಸ್ಕರಿಸಿ, ಸಜ್ಜನ ರಾಜಕಾರಣಿ ಚಂದ್ರಶೇಖರ್ ಅವರನ್ನು ಆಯ್ಕೆ ಮಾಡಬೇಕು ಎಂದು ಕೋರಿದರು.

ಕೆ.ಆರ್.ನಗರ ಕಾಂಗ್ರೆಸ್ ಮುಖಂಡ ರವಿಶಂಕರ್, ಜಿಲ್ಲಾ ಪಂಚಾಯಿತಿ ಸದಸ್ಯ ಕೋಡಿಮಾರನಹಳ್ಳಿ ದೇವರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಆರ್.ರವಿಂದ್ರಬಾಬು, ಮಹಿಳಾ ಅಧ್ಯಕ್ಷ ಆದಿಹಳ್ಳಿ ಮೀನಾಕ್ಷಿ ರಮೇಶ್, ಜಿ.ಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ವಿ.ಮಂಜೇಗೌಡ, ತಾ.ಪಂ ಸದಸ್ಯ ಶ್ಯಾಮಣ್ಣ, ಪುರಸಭೆ ಸದಸ್ಯ ಕೆ.ಸಿ.ಮಂಜುನಾಥ್, ಗ್ರಾ.ಪಂ ಸದಸ್ಯ ಬೆಡದಹಳ್ಳಿ ಸುನಿಲ್, ಮುಖಂಡರಾದ ಕೆ.ಪುರುಷೋತ್ತಮ್, ರುಕ್ಮಾಂಗದ, ರಮೇಶ್, ಸಣ್ಣನಿಂಗೇಗೌಡ, ಗಂಜೀಗೆರೆ ಮಹೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT