ಮಂಡ್ಯ: ಸ್ಪರ್ಧಾತ್ಮಕ ಯುಗದಲ್ಲಿ ಗೆಲವು ಸಾಧಿಸಲು ಪೂರ್ವ ತಯಾರಿ ಬಹಳ ಮುಖ್ಯ. ನಿರಂತರ ಪರಿಶ್ರಮ ದಿಂದ ಮಾತ್ರ ಸಾಧನೆ ಸಾಧ್ಯ ಎಂದು ಶಂಕರಗೌಡ ಶಿಕ್ಷಣ ಕಾಲೇಜಿನ ಪ್ರಾಚಾರ್ಯ ಡಾ.ವಿ.ಕೆ. ಕೃಷ್ಣಪ್ಪ ಅಭಿ ಪ್ರಾಯಪಟ್ಟರು.

ನಗರದ ಮಹಿಳಾ ಕಾಲೇಜಿನಲ್ಲಿ ಭಾನುವಾರ ಏರ್ಪಡಿಸಿದ್ದ ಪ್ರೌಢಶಾಲಾ ಶಿಕ್ಷಕರ ನೇಮಕಾತಿಯ ಉಚಿತ ತರ ಬೇತಿಯ ಸಮಾರೋಪ ಹಾಗೂ ಉ ನ್ಯಾಸಕ ನಾಗರಾಜು ಅವರ ಮಾನಸಿಕ ಸಾಮರ್ಥ್ಯ ಪುಸ್ತಕ ಬಿಡುಗಡೆ ಸಮಾ ರಂಭದಲ್ಲಿ ಅವರು ಮಾತನಾಡಿದರು.

ಮಾನಸಿಕ ಸಾಮರ್ಥ್ಯ ವಿಷಯಕ್ಕೆ ಸಂಬಂಧಿಸಿದಂತೆ ಇಂಗ್ಲಿಷ್‌ನಲ್ಲಿ ಬಹಳಷ್ಟು ಪುಸ್ತಕಗಳಿದ್ದವು. ಆದರೆ ಕನ್ನಡದಲ್ಲಿ ಇರಲಿಲ್ಲ. ಆ ಕೊರತೆಯನ್ನು ನಾಗರಾಜು ಅವರು ನೀಗಿಸಿದ್ದಾರೆ. ಸರಳವಾಗಿ ತಿಳಿಸಿಕೊಟ್ಟಿದ್ದಾರೆ ಎಂದರು.

ಪಾಂಡವಪುರ ತಹಶೀಲ್ದಾರ್ ಶಿವಾ ನಂದಮೂರ್ತಿ ಮಾತನಾಡಿ, ಸಾಧನೆ ಮಾಡಲು ಸಮಸ್ಯೆಗಳೇ ಬೆನ್ನುಲುಬು ಆಗುತ್ತವೆ. ಸಾಧನೆ ಮಾಡಿದ ಶೇ.90 ರಷ್ಟು ಜನರು ಸಮಸ್ಯೆಗಳನ್ನು ಎದುರಿ ಸಿಕೊಂಡೇ ಸಾಧನೆ ಮಾಡಿದ್ದಾರೆ ಎಂದು ಹೇಳಿದರು.

ವಿದ್ಯಾರ್ಥಿಗಳು ನಕರಾತ್ಮಕ ಭಾವನೆ ಬೆಳೆಸಿಕೊಳ್ಳಬಾರದು. ಸಕಾರಾತ್ಮಕ ಚಿಂತನೆ ಬೆಳೆಸಿಕೊಳ್ಳಬೇಕು. ಆಗಲೇ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಅವಕಾಶಗಳ ಸದುಪಯೋಗ ಮಾಡಿ ಕೊಳ್ಳ ಬೇಕು ಎಂದರು.
ವಿಶ್ರಾಂತ ಪ್ರಾಚಾರ್ಯ ಪ್ರೊ. ಕುಮಾರ್ ಮಾತನಾಡಿ, ಉಚಿತವಾಗಿ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿರು ವುದು ಶ್ಲಾಘನೀಯ. ಕನ್ನಡದಲ್ಲಿ ಮಾನಸಿಕ ಸಾಮರ್ಥ್ಯ ಪುಸ್ತಕ ಬರೆದಿ ರುವುದು ಉತ್ತಮ ಪ್ರಯತ್ನ ವಾಗಿದೆ ಎಂದು ಹೇಳಿದರು.

ಅರ್ಥಶಾಸ್ತ್ರ ಉಪನ್ಯಾಸಕ ಎ.ಬಿ. ಶಂಕರ್, ಕೃತಿಕಾರ ಹಾಗೂ ಉಪನ್ಯಾಸಕ ನಾಗರಾಜು ಪಾಲ್ಗೊಂಡಿದ್ದರು.

ಕಣ್ಣಿನ ತಪಾಸಣೆ
ಮಂಡ್ಯ ತಾಲ್ಲೂಕಿನ ಗೋಪಾಲಪುರ ಗ್ರಾಮದಲ್ಲಿ ಶನಿವಾರ ಜರುಗಿದ ಕಣ್ಣಿನ ಉಚಿತ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ ಯಶಸ್ವಿಯಾಗಿ ಜರುಗಿತು.

ಎಸ್‌ಡಿ ಜಯರಾಮ್ ಸಮಗ್ರ ಗ್ರಾಮೀಣಾಭಿವೃದ್ಧಿ ಫೌಂಡೇಷನ್, ಬೆಂಗಳೂರಿನ ಬೆಳಕು ಐ ಫೌಂಡೇಷನ್‌ನ ಸಹಭಾಗಿತ್ವದಲ್ಲಿ ನಡೆದ ಶಿಬಿರದಲ್ಲಿ ಸುಮಾರು 250ಕ್ಕೂ ಹೆಚ್ಚು ಮಂದಿ ತಪಾಸಣೆಗೆ ಒಳಪಟ್ಟರು.

ಶಿಬಿರ ಉದ್ಘಾಟಿಸಿದ ಎಸ್‌ಡಿ ಜಯರಾಮ್ ಫೌಂಡೇಷನ್ ಕಾರ್ಯ ದರ್ಶಿ ಅಶೋಕ್ ಎಸ್.ಡಿ. ಜಯರಾಮ್ ಮಾತನಾಡಿ, ಮಂಡ್ಯ ವಿಧಾನಸಭಾ ಕ್ಷೇತ್ರದ 30 ಗ್ರಾಮದಲ್ಲಿ, ಸಂಸ್ಥೆಯ ವತಿಯಿಂದ ಶಿಬಿರ ಏರ್ಪಡಿಸಲಾಗಿತ್ತು. ಇದಕ್ಕೆ ಸಾರ್ವ ಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಮುಂದಿನ ದಿನಗಳಲ್ಲಿ ಕ್ಷೇತ್ರದ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲೂ ಶಿಬಿರವನ್ನು ಆಯೋ ಜಿಸುವುದಾಗಿ ಭರವಸೆ ನೀಡಿದರು.

ಸಂಸ್ಥೆ ವತಿಯಿಂದ ಈಗ ಕಣ್ಣಿನ ತಪಾಸಣೆ, ಶಸ್ತ್ರ ಚಿಕಿತ್ಸೆ ನಡೆಸ ಲಾಗುತ್ತಿದೆ. ಇದೇ ರೀತಿಯ ಸಹಕಾರ ಜನರಿಂದ ದೊರೆತಲ್ಲಿ ಮುಂದಿನ ದಿನಗಳಲ್ಲಿ ಹೃದ್ರೋಗ, ಮಧುಮೇಹ ಸೇರಿದಂತೆ ಇತರ ಕಾಯಿಲೆಗಳಿಗೂ ತಜ್ಞ ವೈದ್ಯರನ್ನು ಕರೆಸಿ ಚಿಕಿತ್ಸೆ ನೀಡಲಾಗುವುದು ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಜವರೇಗೌಡ, ಸದಸ್ಯ ರವಿ, ಪ್ರಶಾಂತ್, ಮುಖಂಡರಾದ ಕೆ. ಬೋರಯ್ಯ, ವೆಂಕಟೇಶ್, ಕಾಳೇಗೌಡ, ಕೆಂಪೇಗೌಡ, ಶಂಕರೇಗೌಡ, ಜಿ.ವಿ. ಬೋರಯ್ಯ, ವಿಜಯ್‌ಕುಮಾರ್, ವೆಂಕಟಪ್ಪ, ಮುಖ್ಯ ಶಿಕ್ಷಕ ಬಡಗೇರ್, ಸೂಗೇಗೌಡ, ಶ್ರೀನಿ ವಾಸ್, ಕಮಲಮ್ಮ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.