ಶ್ರೀರಂಗಪಟ್ಟಣ: ಕೃಷಿ ಇಲಾಖೆಯ ಮೂಲಕ ಭತ್ತ ಒಕ್ಕಣೆ ಯಂತ್ರ ಪಡೆಯುವ ವಿಶೇಷ ಘಟಕ ಯೋಜನೆ (ಪರಿಶಿಷ್ಟ ಜಾತಿ/ ಪಂಗಡದ) ಫಲಾನುಭವಿಗಳಿಗೆ ರೂ1 ಲಕ್ಷ ರಿಯಾಯಿತಿ ಸೌಲಭ್ಯ ಸಿಗಲಿದೆ ಎಂದು ಕೃಷಿ ಇಲಾಖೆ ತಾಂತ್ರಿಕ ಸಹಾಯಕ ಸುರೇಶ್ ತಿಳಿಸಿದರು.

ಇಲ್ಲಿನ ಕೃಷಿ ಇಲಾಖೆ ಕಚೇರಿಯಲ್ಲಿ ಗುರುವಾರ ತಾಲ್ಲೂಕಿನ ಚಿಕ್ಕಅಂಕನಹಳ್ಳಿ ರೈತ ನಾಗರಾಜು ಎಂಬವರಿಗೆ ಭತ್ತ ಒಕ್ಕಣೆ ಯಂತ್ರ ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಭತ್ತ ಒಕ್ಕಣೆ ಯಂತ್ರದ ಮಾರುಕಟ್ಟೆ ಬೆಲೆ ಸದ್ಯ ರೂ1.60 ಲಕ್ಷ ಇದೆ. ಎಸ್‌ಸಿಪಿ ಯೋಜನೆ ವ್ಯಾಪ್ತಿಗೆ ಬರುವ ರೈತ ರೂ 60 ಸಾವಿರ ಹಣ ಪಾವತಿಸಿದರೆ ಸಾಕು. ಉಳಿದ ರೂ.1 ಲಕ್ಷ ರಿಯಾಯಿತಿ ಹಣವನ್ನು ಸರ್ಕಾರ ತುಂಬಿಕೊಡಲಿದೆ. ಸಾಮಾನ್ಯ ವರ್ಗದ ರೈತರಿಗೆ ರೂ 9 ಸಾವಿರ ರಿಯಾಯಿತಿ ಸಿಗಲಿದೆ. ಭತ್ತದ ಬೆಳೆ ಕಟಾವು ಮಾಡುವ ಯಂತ್ರವನ್ನು ಈ ಬಾರಿ ರೈತರಿಗೆ ವಿತರಿಸಲಾಗುತ್ತಿದೆ. ರೂ.1 ಲಕ್ಷ ಬೆಲೆಯ ಈ ಯಂತ್ರ ಪಡೆಯುವವರಿಗೆ ರೂ 40,650 ರಿಯಾಯಿತಿ ಸಿಗಲಿದ್ದು, ರೂ 59,350 ಹಣ ಪಾವತಿಸಬೇಕು ಎಂದು ಹೇಳಿದರು.

ಕೃಷಿ ಯಾಂತ್ರೀಕರಣ ಯೋಜನೆಯಡಿ ಪವರ್ ಟಿಲ್ಲರ್, ರೋಟೋವೇಟರ್, ಬಲರಾಮ ನೇಗಿಲು, ಕಲ್ಟಿವೇಟರ್ ಯಂತ್ರಗಳು ಕೂಡ ರಿಯಾಯಿತಿ ದರದಲ್ಲಿ ಲಭ್ಯ ಇವೆ. ಆಸಕ್ತ ರೈತರು ಪಹಣಿ ಪತ್ರದ ಜತೆ ಅರ್ಜಿ ಸಲ್ಲಿಸಿ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ತಾಲ್ಲೂಕು ಪಂಚಾಯಿತಿ ಚಿಕ್ಕಅಂಕನಹಳ್ಳಿ ಕ್ಷೇತ್ರದ ಸದಸ್ಯ ಪುಟ್ಟಸ್ವಾಮಿ, ರೈತರಾದ ನಾಗರಾಜು, ಉಮೇಶ್, ಚೇತನ, ರಾಮಕುಮಾರ್, ರಮೇಶ್ ಸೇರಿದಂತೆ ಊರಿನ ಮುಖಂಡರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.