ಪಾಂಡವಪುರ: ಬರಗಾಲದ ಜಾನುವಾರುಗಳಿಗೆ ಸಂಗ್ರಹಿಸಿದ್ದ ಮೇವು ತಾಲ್ಲೂಕು ಆಡಳಿತ ವಿತರಣೆ ಮಾಡದಿರುವುದರಿಂದ ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಕೊಳೆಯುತ್ತಿದೆ.

6 ತಿಂಗಳ ಹಿಂದೆ ತಾಲ್ಲೂಕಿನಲ್ಲಿ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿತ್ತು. ಬರಗಾಲವನ್ನು ಸಲುವಾಗಿ ಜಾನುವಾರುಗಳಿಗೆ ಮೇವು ಒದಗಿಸಲು ತಾಲ್ಲೂಕು ಆಡಳಿತ ಕೆಲವಾರು ರೈತರ ಮನವೊಲಿಸಿ ಪ್ರವಾಸಿ ಮಂದಿರದಲ್ಲಿ ಸಂಗ್ರಹಿಸಿಡಲಾಗಿತ್ತು. ಅಗತ್ಯವಿದ್ದ ರೈತರಿಗೆ ವಿತರಣೆ ಮಾಡಲೇ ಇಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಶೇಖರಿಸಿಟ್ಟಿರುವ ಮೇವು ವಿತರಣೆಯಾಗದ ಪರಿಣಾಮ ಮೇವು ಬಿಸಿಲು, ಮಳೆ, ಗಾಳಿಗೆ ಸಿಲುಕಿ ಕೊಳೆಯಲಾರಂಭಿಸಿದೆ. ಈ ಬಗ್ಗೆ ಗಮನ ಹರಿಸದೆ ಅಧಿಕಾರಿಗಳ ಕಾರ್ಯ ನಿರ್ವಹಣೆಗೆ ಉದಾರವಾಗಿ ಮೇವು ನೀಡಿದ ದಾನಿಗಳು ಹಾಗು ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.

`ಕೆಲವು ಸಾಂದರ್ಭಿಕ ಕಾರಣಗಳಿಂದಾಗಿ ಸಂಗ್ರಹಿಸಿದ್ದ ಮೇವನ್ನು ವಿತರಣೆ ಮಾಡಲು ಸಾಧ್ಯವಾಗಲಿಲ್ಲ. ಈ ಮೇವನ್ನು ಅಗತ್ಯವುಳ್ಳ ಮೇಲುಕೋಟೆ ಹಾಗೂ ಚಿನಕುರಳಿ ಹೋಬಳಿಯ ರೈತರ ಜಾನುವಾರುಗಳಿಗೆ ವಿತರಿಸುವ ಕ್ರಮಕೈಗೊಳ್ಳಲಾಗುವುದು' ಎಂದು ತಹಶೀಲ್ದಾರ್ ಶಿವಕುಮಾರಸ್ವಾಮಿ ಪ್ರಜಾವಾಣಿಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.