ಮಂಡ್ಯ: ಗುತ್ತಿಗೆ ಪೌರಕಾರ್ಮಿಕರಿಗೆ ಪ್ರತಿ ತಿಂಗಳು ನಿಗದಿತ ವೇಳೆಗೆ ವೇತನ ಪಾವತಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಪಡಿಸಿ ನಡೆಸುತ್ತಿದ್ದ ಮುಷ್ಕರವನ್ನು ಪೌರಕಾರ್ಮಿಕರು ಶುಕ್ರವಾರ ಸಂಜೆ ಹಿಂದೆ ಪಡೆದಿದ್ದು, ಶನಿವಾರದಿಂದ ಕಸ ವಿಲೇವಾರಿ ಕಾರ್ಯದಲ್ಲಿ ಪ್ರಗತಿ ಕಂಡಬರುವ ನಿರೀಕ್ಷೆಯಿದೆ.

ಆಯುಕ್ತರು ನೀಡಿದ ಭರವಸೆ ಆಧರಿಸಿ ಮುಷ್ಕರ ವಾಪಸು ಪಡೆದಿದ್ದೇವೆ. ಗುತ್ತಿಗೆ ಪೌರಕಾರ್ಮಿಕರ ಕಾಯಂಗೆ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲು ಸಮ್ಮತಿ, ಪ್ರತಿ ತಿಂಗಳು 10ನೇ ತಾರೀಖಿನ ಒಳಗೆ ವೇತನ ಪಾವತಿ ಆಗುವಂತೆ ಕ್ರಮ ಕೈಗೊಳ್ಳಲು ಭರವಸೆ ನೀಡಿದರ ಎಂದ ಸಂಘದ ಆಧ್ಯಕ್ಷ ಎನ್.ನಾಗರಾಜು ತಿಳಿಸಿದ್ದಾರೆ.

ಈ ಸಂಬಂಧ ಶಾಸಕ ಎಂ.ಶ್ರೀನಿವಾಸ್, ಆಯುಕ್ತ ಪ್ರಕಾಶ್ ನಗರಸಭೆ ಸದಸ್ಯ ನಂಜುಂಡಯ್ಯ ಸಮ್ಮುಖದಲ್ಲಿ ಮಾತುಕತೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಸಂಘದ ಪದಾಧಿಕಾರಿಗಳು, ಮುಷ್ಕರ ನಿರತ ಪೌರಕಾರ್ಮಿಕರ ಅಹವಾಲು ಆಲಿಸದ ಆಯುಕ್ತರ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

ಕಸದ ರಾಶಿ: ನಗರಸಭೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರ ಸಂಖ್ಯೆ ಹೆಚ್ಚಿದೆ. ನಗರಸಭೆ ವ್ಯಾಪ್ತಿಯಲ್ಲಿ ಮೊದಲೇ ಸಮರ್ಪಕವಾಗಿಲ್ಲದ ಕಸ, ತ್ಯಾಜ್ಯ ವಿಲೇವಾರಿ ಸಮಸ್ಯೆ ಪೌರಕಾರ್ಮಿಕರ ಮುಷ್ಕರದಿಂದಾಗಿ ಮೂರು ದಿನಗಳಿಂದ ಇನ್ನಷ್ಟು ಹದಗೆಟ್ಟಿತ್ತು.

ಗುತ್ತಿಗೆ ಆಧಾರದಲ್ಲಿ ಇರವ ಪೌರ ಕಾರ್ಮಿಕರು ಸಕಾಲದಲ್ಲಿ ವೇತನ ಪಾವತಿಗೆ ಆಗ್ರಹಪಡಿಸಿ ಮುಷ್ಕರ ನಡೆಸುತ್ತಿದು, ಇದರ ಪರಿಣಾಮ ತ್ಯಾಜ್ಯ ವಿಲೇವಾರಿ ಮೇಲು ಬೀರಿದೆ. ನಗರಸಭೆಗೆ ಸಮೀಪವೇ ಇರುವ ಕ್ರೀಡಾಂಗಣದ ರಸ್ತೆ, ಅಶೋಕನಗರ, ನೂರು ಅಡಿ ರಸ್ತೆ ಸೇರಿ ಪ್ರಮುಖ ಸ್ಥಳಗಳಲ್ಲಿ ಕಸದ ರಾಶಿ ಕಂಡುಬಂದಿತ್ತು.

ವೇತನ ವಿಳಂಬ ಪಾವತಿ ವಿಷಯ ಕಳೆದ ಮಂಗಳವಾರ ನಡೆದ ಬಜೆಟ್ ಸಭೆಯಲ್ಲಿಯೂ ಪ್ರಸ್ತಾಪವಾಗಿತ್ತು. ತ್ಯಾಜ್ಯ ವಿಲೇವಾರಿ ಗುತ್ತಿಗೆ ಪಡೆದಿರುವವರು ವೇತನ ಪಾವತಿಯಲ್ಲಿ ವಿಳಂಬ ಮಾಡುತ್ತಿದ್ದರೆ ಕ್ರಮ ಜರುಗಿಸಬೇಕು ಎಂದು ಸದಸ್ಯರು ಒತ್ತಾಯಿಸಿದ್ದಾರೆ

ಸದಸ್ಯರ ಆಗ್ರಹ: ಈ ನಡುವೆ ಗುತ್ತಿಗೆ ಪೌರಕಾರ್ಮಿಕರ ಮುಷ್ಕರದ ಹಿನ್ನೆಲೆಯಲ್ಲಿ ಸಮಸ್ಯೆಗೆ ಕಾಯಂ ಪರಿಹಾರ ಕಲ್ಪಿಸಲು ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಬೇಕು ಎಂದು ನಗರಸಭೆಯ ನಾಲ್ವರು ಸದಸ್ಯರು ಮನವಿ ಮಾಡಿದ್ದಾರೆ.

ಗುತ್ತಿಗೆ ಪೌರ ಕಾರ್ಮಿಕರ ಮುಷ್ಕರದಿಂದಾಗಿ ನಗರದಲ್ಲಿ ಕಸದ ರಾಶಿ ಹೆಚ್ಚಿದ್ದು, ಸಾಂಕ್ರಾಮಿಕ ರೋಗಗಳ ಭೀತಿ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ನಾಗರಿಕರ ಹಿತದೃಷ್ಟಿಯಿಂದ ಮಧ್ಯೆ ಪ್ರವೇಶಿಸಬೇಕು ಎಂದು ಕೋರಿದ್ದರು. ಸದಸ್ಯರಾದ ಎಚ್.ಸಿ.ಬೋರೇಗೌಡ, ಎಂ.ಎಲ್.ಮಂಜುನಾಥ್, ಅಫ್ರೋಜ್, ಎಸ್.ಪುಟ್ಟಂಕಯ್ಯ ಹೇಳಿಕೆ ನೀಡಿದ್ದಾರೆ.

ಸಂಘದ ಆಗ್ರಹ: ವಿಫಲವಾಗಿರುವ ಹಿನ್ನೆಲೆಯಲ್ಲಿ ಸಮಸ್ಯೆ ಬಗೆಹರಿಸಲು ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಬೇಕು ಎಂದು ಗುತ್ತಿಗೆ ಪೌರಕಾರ್ಮಿಕರು ಮತ್ತು ಪೌರ ಸೇವಾ ನೌಕರರ ಸಂಘ ಮನವಿ ಮಾಡಿದೆ. ನಗರಸಭೆ ಆಯುಕ್ತರು ಗಮನಹರಿಸುತ್ತಿಲ್ಲ ಎಂದ ಸಂಘದ ಎನ್.ನಾಗರಾಜು ಪ್ರತ್ಯೇಕ ಹೇಳಿಕೆ ನೀಡಿದ್ದರು.

ಕಸಾಪ ಚುನಾವಣೆ: ಚಂಪಾ, ಮೀರಾಗೆ ಬೆಂಬಲ
ಮಂಡ್ಯ: ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ ರಾಜ್ಯ ಘಟಕಕ್ಕೆ ಚಂದ್ರಶೇಖರ ಪಾಟೀಲ ಮತ್ತು ಜಿಲ್ಲಾ ಘಟಕಕ್ಕೆ ಮೀರಾ ಶಿವಲಿಂಗಯ್ಯ ಅವರನ್ನು ಬೆಂಬಲಿಸಲು ಕನ್ನಡ ಸೇನೆ ಕರ್ನಾಟಕ ಸಂಘಟನೆ ನಿರ್ಧರಿಸಿದೆ. ಈಚೆಗೆ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿ ಚರ್ಚಿಸಿದ್ದು, ಮಹಿಳಾ ಅಭ್ಯರ್ಥಿಯಾಗಿ ಮೀರಾ ಅವರಿಗೆ ಜಿಲ್ಲಾ ಘಟಕ ಬೆಂಬಲ ನೀಡಲು ನಿರ್ಧರಿಸಲಾಯಿತು ಎಂದು ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಸಿ.ಮಂಜುನಾಥ್ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಜಿಲ್ಲಾ ಆರೋಗ್ಯ ಇಲಾಖೆ ಲಿಪಿಕ ನೌಕರರ ಸಂಘ ಪ್ರತ್ಯೇಕ ಹೇಳಿಕೆ ನೀಡಿದ್ದು, ಕಸಾಪ ಚುನಾವಣೆಯಲ್ಲಿ ಚಿಕ್ಕಸ್ವಾಮಿ ಅವರನ್ನು ಬೆಂಬಲಿಸಲಾಗುವುದು ಎಂದು ಹೇಳಿಕೆ ನೀಡಿದೆ.

ಹಾಪ್ಕಾಮ್ಸ ನೌಕರರ ಸಂಘಕ್ಕೆ ಸಿಐಟಿಯು ಮಾನ್ಯತೆ
ಮಂಡ್ಯ: ಜಿಲ್ಲಾ ಹಾಪ್ಕಾಮ್ಸ ನೌಕರರ ಸಂಘವು ಸಿಐಟಿಯುನಿಂದ ಮಾನ್ಯತೆಯನ್ನು ಪಡೆದಿದ್ದು, ಇನ್ನು ಮುಂದೆ ಎಲ್ಲ ಸಿಐಟಿಯು ಜೊತೆಗೂಡಿ ಕಾರ್ಯ ನಿರ್ವಹಿಸಲಿದೆ ಎಂದು ಅಧ್ಯಕ್ಷ ಕೆ.ಕೃಷ್ಣ ತಿಳಿಸಿದ್ದಾರೆ.
ಶಾಲೆಗಳಿಗೆ ಸೂಚನೆ: ಭಾನುವಾರ ಜಿಲ್ಲೆಯಲ್ಲಿ ಪೋಲಿಯೊ ಲಸಿಕೆ ಹಾಕುವ ಕಾರ್ಯಕ್ರಮ ನಡೆಯುವ ಹಿನ್ನೆಲೆಯಲ್ಲಿ ಪಲ್ಸ್ ಪೋಲಿಯೋ ಬೂತ್ ಇರುವ ಕೇಂದ್ರಗಳಲ್ಲಿ ಶಾಲೆಯನ್ನು ತೆರೆದಿದ್ದು, ಮುಖ್ಯ ಶಿಕ್ಷಕರು ಸಹಕರಿಸಬೇಕು ಎಂದು ಶಿಕ್ಷಣ ಇಲಾಖೆಯು ಹೇಳಿಕೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.