ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಗ್ಗಾನ್ ಸಮಸ್ಯೆಗಳಿಗೆ ಒಂದು ತಿಂಗಳ ಒಳಗೆ ಚಿಕಿತ್ಸೆ: ಸಚಿವ ಕೆ.ಎಸ್. ಈಶ್ವರಪ್ಪ

ಸಿಮ್ಸ್‌ ನಿರ್ದೇಶಕರಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಸೂಚನೆ
Last Updated 21 ಜನವರಿ 2020, 16:40 IST
ಅಕ್ಷರ ಗಾತ್ರ

ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆಯಎಲ್ಲ ಸಮಸ್ಯೆಗಳಿಗೂಒಂದು ತಿಂಗಳ ಒಳಗೆ ಪರಿಹಾರ ಕಂಡುಕೊಳ್ಳಬೇಕು. ನಾಗರಿಕರಿಗೆ ಸಮರ್ಪಕ ಸೇವೆ ದೊರಕಿಸಲು ತಕ್ಷಣ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಸೂಚಿಸಿದರು.

ಮೆಗ್ಗಾನ್ ಆಸ್ಪತ್ರೆಸಭಾಂಗಣದಲ್ಲಿ ಮಂಗಳವಾರನಡೆದ ಕುಂದುಕೊರತೆ ಸಭೆಯಲ್ಲಿ ಅವರು ಮಾತನಾಡಿದರು.

ಆಸ್ಪತ್ರೆ ವಿರುದ್ಧ ಹಲವು ಆರೋಪಗಳು ಕೇಳಿಬರುತ್ತಿವೆ. ಇಡೀ ಆಸ್ಪತ್ರೆ ಅವ್ಯವಸ್ಥೆಯ ಆಗರವಾಗಿದೆ. ತಕ್ಷಣ ಸರಿಪಡಿಸಬೇಕು ಎಂದು ವೈದ್ಯಕೀಯ ನಿರ್ದೇಶಕರಿಗೆ ತಾಕೀತು ಮಾಡಿದರು.

ಆರೋಪಗಳ ಸುರಿಮಳೆ:

ಬಹುತೇಕ ಔಷಧಗಳಿಗೆ ಚೀಟಿ ಬರೆದುಕೊಡುತ್ತಾರೆ.ಸಿರಿಂಜ್, ಬ್ಯಾಂಡೇಜ್ ಸೇರಿದಂತೆ ಸಣ್ಣಪುಟ್ಟ ಸಾಮಗ್ರಿಗಳನ್ನೂ ಖಾಸಗಿ ಔಷಧಾಲಯಗಳಿಂದಖರೀದಿಸಿ ತರುವಂತೆ ರೋಗಿಗಳಿಗೆ ಸೂಚಿಸಲಾಗುತ್ತಿದೆ. ಬಹುತೇಕ ಹೊರರೋಗಿಗಳನ್ನೂ ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸಲಾಗುತ್ತಿದೆ. ₨ 10 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಸ್ಕ್ಯಾನಿಂಗ್ ಘಟಕವಿದ್ದರೂ ಬಳಕೆ ಮಾಡುತ್ತಿಲ್ಲ. ಕರ್ತವ್ಯದ ಅವಧಿಯಲ್ಲಿ ವೈದ್ಯರು, ಸಿಬ್ಬಂದಿ ಸಿಗುವುದಿಲ್ಲ. ಎಲ್ಲಾಏಳುರೇಡಿಯಾಲಜಿಸ್ಟ್ ಹುದ್ದೆಗಳು ಖಾಲಿಇವೆ. ಯಾವುದೇ ವಾರ್ಡ್‍ನಲ್ಲಿ ವೈದ್ಯರು ಇಲ್ಲ. ಆಸ್ಪತ್ರೆಯಲ್ಲಿ ಪರ್ಯಾಯ ಔಷಧಗಳು ಲಭ್ಯವಿದ್ದರೂನೀಡುತ್ತಿಲ್ಲಎಂದು ಶಾಸಕರಾದ ಆರಗ ಜ್ಞಾನೇಂದ್ರ, ಕೆ.ಬಿ. ಅಶೋಕ ನಾಯ್ಕ, ವಿಧಾನ ಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್, ಉಪ ಮೇಯರ್ ಚನ್ನಬಸಪ್ಪ ಸಚಿವರ ಗಮನಕ್ಕೆ ತಂದರು.

ಮೆಗ್ಗಾನ್ ಆಸ್ಪತ್ರೆಯ ಎಲ್ಲಾ ಲೋಪಗಳನ್ನೂಎರಡು ತಿಂಗಳ ಒಳಗಾಗಿ ಸರಿಪಡಿಸಬೇಕು. ಹೋರಗಿನಿಂದಔಷಧತರಲು ಚೀಟಿ ಬರೆದುಕೊಡ ಬರಬಾರದು. ದೂರುಗಳು ಬಂದರೆ ಅಂತಹ ವೈದ್ಯರ ಮೇಲೆ ಕ್ರಮ ಕೈಗೊಳ್ಳಬೇಕು. ರೇಡಿಯಾಲಜಿಸ್ಟ್‌ಗಳ ಹುದ್ದೆ ಭರ್ತಿಯಾಗುವವರೆಗೆ ಹೊರಗುತ್ತಿಗೆ ಆಧಾರದಲ್ಲಿ ಸೇವೆ ಪಡೆದುಕೊಳ್ಳಬೇಕು. ಕರ್ತವ್ಯದಲ್ಲಿರುವ ವೈದ್ಯರು ಮತ್ತು ಸಿಬ್ಬಂದಿ ವಿವರದ ಪಟ್ಟಿಗಳನ್ನು ಎಲ್ಲಾ ಕಡೆ ಹಾಕಬೇಕು ಎಂದು ಸಚಿವರು ತಾಕೀತು ಮಾಡಿದರು.

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರಾಗಿ 10 ವರ್ಷಗಳಾದರೂ ಲೋಕಾರ್ಪಣೆ ಮಾಡಿಲ್ಲ. ಕಟ್ಟಡ ಕಾಮಗಾರಿ ನಾಲ್ಕು ತಿಂಗಳ ಒಳಗೆಪೂರ್ಣಗೊಳ್ಳಬೇಕು. ಹೃದಯ ಕಾಯಿಲೆಗಳ ಅತ್ಯಾಧುನಿಕ ಪ್ರಯೋಗಾಲಯ ಕಟ್ಟಡದಕಾಮಗಾರಿ ಎರಡು ತಿಂಗಳ ಒಳಗಾಗಿಪೂರ್ಣಗೊಳಿಸಬೇಕು.ಸಮಯಕ್ಕೆ ಸರಿಯಾಗಿ ಔಷಧ ಪೂರೈಸದ ಗುತ್ತಿಗೆದಾರನನ್ನು ಕಪ್ಪುಪಟ್ಟಿಗೆ ಸೇರಿಸಬೇಕು.ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಸೂಚಿಸಿದರು.

ಹೆಚ್ಚುವರಿಜಿಲ್ಲಾಧಿಕಾರಿ ಜೆ.ಅನುರಾಧ, ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನಿರ್ದೇಶಕ ಡಾ.ಬಿ.ಜಿ.ಲೇಫಾಕ್ಷಿ, ಆಡಳಿತಾಧಿಕಾರಿ ಎಚ್‌.ಬಿ.ಶಿವಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT