ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಸುಲಿಗೆ ಮಾಡಿದ್ದ ನಾಲ್ವರ ಬಂಧನ

ರಾತ್ರಿ ವೇಳೆ ಸಂಚರಿಸುತ್ತಿದ್ದವರನ್ನು ಅಡ್ಡಗಟ್ಟಿ ಹಣ, ಮೊಬೈಲ್ ಕಿತ್ತುಕೊಳ್ಳುತ್ತಿದ್ದ ಆರೋಪಿಗಳು
Last Updated 11 ಮಾರ್ಚ್ 2021, 14:20 IST
ಅಕ್ಷರ ಗಾತ್ರ

ಮೈಸೂರು: ಸುಲಿಗೆ ಮಾಡುತ್ತಿದ್ದ ನಾಲ್ವರ ತಂಡವನ್ನು ಇಲ್ಲಿನ ಮೇಟಗಳ್ಳಿ ಠಾಣೆ ಪೊಲೀಸರು ಬಂಧಿಸಿದ್ದು, ಸುಲಿಗೆ ಮಾಡಿದ್ದ ₹ 14 ಸಾವಿರ ನಗದು, 1 ಮೊಬೈಲ್‌ ಹಾಗೂ ಕೃತ್ಯಕ್ಕೆ ಬಳಸಿದ 2 ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಇಲ್ಲಿನ ಬಿಎಂಶ್ರೀ ನಗರದ ನಿವಾಸಿಗಳಾದ ವಿಷ್ಣು (19), ಗಿರೀಶ್ (19), ಮೈಸೂರು ತಾಲ್ಲೂಕಿನ ಶ್ಯಾದನಹಳ್ಳಿ ಗ್ರಾಮದ ಪಿ.ಜಿ.ಅಜಿತ್ ಕುಮಾರ್ (19) ಹಾಗೂ ಹೆಬ್ಬಾಳದ ಬೈರವೇಶ್ವರ ನಗರದ ನಿವಾಸಿ ಎಂ.ಯಶವಂತ (22) ಬಂಧಿತ ಆರೋಪಿಗಳು.

ಇವರು ಮಾರ್ಚ್ 4ರಂದು ರಾತ್ರಿ 10.30ರಲ್ಲಿ ಮೇಟಗಳ್ಳಿ ಕೈಗಾರಿಕಾ ಪ್ರದೇಶದ ಮಹೇಶ್‌ ಪಿ.ಯು ಕಾಲೇಜು ರಸ್ತೆಯಲ್ಲಿ ವ್ಯಕ್ತಿಯೊಬ್ಬರು ಹೋಗುವಾಗ ಅಡ್ಡಗಟ್ಟಿ ಅವರಿಂದ ₹ 28 ಸಾವಿರ ನಗದು, 25 ಗ್ರಾಂ ತೂಕದ ಚಿನ್ನದ ಸರ ಮತ್ತು 1 ಮೊಬೈಲ್‌ ಅನ್ನು ಕಿತ್ತುಕೊಂಡು ಪರಾರಿಯಾಗಿದ್ದರು.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಶಾದನಹಳ್ಳಿಯಲ್ಲಿರುವ ತೋಟದ ಮನೆಯೊಂದರ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಡಿಸಿಪಿ ಗೀತಾ ಪ್ರಸನ್ನ, ನರಸಿಂಹರಾಜ ಎಸಿಪಿ ಶಿವಶಂಕರ್ ಅವರ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಎ.ಮಲ್ಲೇಶ್, ಪಿಎಸ್‌ಐ ವಿಶ್ವನಾಥ್, ನಾಗರಾಜನಾಯಕ, ಎಎಸ್‌ಐ ಪೊನ್ನಪ್ಪ, ಅನಿಲ್‌ ಶಂಕಪಾಲ್, ಸಿಬ್ಬಂದಿಯಾದ ಕೆ.ಜೆ.ದಿವಾಕರ್, ಪ್ರಶಾಂತಕುಮಾರ್, ಕೃಷ್ಣ, ಲಿಖಿತ್, ಆಶಾ, ಚೇತನ್, ಲಿಂಗರಾಜಪ್ಪ, ಎಂ.ಕಾಂತ, ರಮೇಶ, ಸುರೇಶ್, ಜೀವನ್, ಗೌರಿಶಂಕರ್, ಹನುಮಂತ ಕಲ್ಲೇದ್ ಕಾರ್ಯಾಚರಣೆ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT