ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲ್ಲೆ ಪ್ರಕರಣ: ನಾಲ್ವರ ಬಂಧನ

Last Updated 30 ಜೂನ್ 2020, 9:26 IST
ಅಕ್ಷರ ಗಾತ್ರ

ಮೈಸೂರು: ಪಾಲಿಕೆ ಸದಸ್ಯ ಅಯಾಜ್‌ ಪಾಷಾ (ಪಂಡು) ಅವರ ಅಳಿಯ ಶಹಬಾಜ್‌ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಬಂಧಿತರ ಸಂಖ್ಯೆ 7ಕ್ಕೆ ಏರಿದೆ.

ಆರ್‌.ಟಿ.ನಗರದ ಸಾಹಿಲ್, ಗೌಸಿಯಾನಗರದ ಸುಹೇಲ್, ಬೆಂಗಳೂರಿನ ಗೋರಿಪಾಳ್ಯದ ಲಡ್ಡಾ ಕಲೀಂ ಮತ್ತು ಆವಳಹಳ್ಳಿಯ ಹಬೀಬ್ ಸುಖ್ಖಾ ಬಂಧಿತ ಆರೋಪಿಗಳು. ಈ ಹಿಂದೆ ಅಫ್ನೈನ್, ಫರಾಜ್ ಹಾಗೂ ಜೀಶಾನ್ ಎಂಬುವವರನ್ನು ಪೊಲೀಸರು ಬಂಧಿಸಿದ್ದರು.

ಇವರು ಹಾಗೂ ತಂಡದ ಇತರ ಸದಸ್ಯರು ಮೇ 12ರಂದು ಶಹಬಾಜ್ ಮೇಲೆ ತೀವ್ರತರವಾಗಿ ಹಲ್ಲೆ ನಡೆಸಿದ್ದರು. ತುಂಡಾದ ಕೈಯನ್ನು ಸ್ವತಃ ಶಹಬಾಜ್ ಅವರೇ ಆಸ್ಪತ್ರೆಗೆ ತೆಗೆದುಕೊಂಡು ಬಂದಿದ್ದರು.

ಈ ಹಿಂದೆ ತಮ್ಮ ಗುಂಪಿನ ಮೇಲೆ ಶಹಬಾಜ್ ಅವರು ಹಲ್ಲೆ ನಡೆಸಿದ್ದರು ಎಂಬ ಕಾರಣಕ್ಕೆ ಕೈ ತುಂಡರಿಸಿರುವುದಾಗಿ ಆರೋಪಿಗಳು ತಿಳಿಸಿದ್ದಾಗಿ ಪೊಲೀಸರು ಹೇಳಿದ್ದಾರೆ.

ಡಿಸಿಪಿ ಪ್ರಕಾಶ್‌ಗೌಡ ಹಾಗೂ ಎಸಿಪಿ ಶಿವಶಂಕರ್ ಅವರ ಮಾರ್ಗದರ್ಶನದಲ್ಲಿ ಉದಯಗಿರಿ ಇನ್‌ಸ್ಪೆಕ್ಟರ್ ಪೂಣಚ್ಚ, ಸಬ್‌ಇನ್‌ಸ್ಪೆಕ್ಟರ್ ಜಯಕೀರ್ತಿ ಕಾರ್ಯಾಚರಣೆ ಕೈಗೊಂಡಿದ್ದರು.

ವ್ಯಕ್ತಿ ಆತ್ಮಹತ್ಯೆ

ಮೈಸೂರು: ಇಲ್ಲಿನ ಚಾಮುಂಡಿಪುರಂ ಮೊದಲನೇ ಮೇನ್‌ನಲ್ಲಿ ವಾಸವಿದ್ದ ಕೃಷ್ಣ (43) ಎಂಬುವವರು ನೇಣು ಹಾಕಿಕೊಂಡು ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇವರು ನಂಜನಗೂಡು ತಾಲ್ಲೂಕಿನ ದಾಸನೂರು ಗ್ರಾಮದವರು.

ಅವಿವಾಹಿತರಾಗಿದ್ದ ಇವರು, ಇಲ್ಲಿ ಟೈಲರ್ ಕೆಲಸ ಮಾಡಿಕೊಂಡು ಒಬ್ಬರೇ ಬಾಡಿಗೆ ಕೋಣೆಯೊಂದರಲ್ಲಿ ವಾಸವಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ಗೊತ್ತಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಕೆ.ಆರ್.ಠಾಣೆಯಲ್ಲಿ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT