ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದಿವಾಸಿ ಮಹಿಳೆಯ ಅರೆಬೆತ್ತಲೆ; ಧರ್ಮಸ್ಥಳದ ಧರ್ಮಾಧಿಕಾರಿ ದನಿ ಎತ್ತಲಿ: ಲಲಿತಾನಾಯಕ

Last Updated 24 ಏಪ್ರಿಲ್ 2022, 8:33 IST
ಅಕ್ಷರ ಗಾತ್ರ

ಮೈಸೂರು: ಧರ್ಮಸ್ಥಳದ ಸಮೀಪ ಆದಿವಾಸಿ ಮಹಿಳೆಯೊಬ್ಬರನ್ನು ಅರೆಬೆತ್ತಲೆಗೊಳಿಸಿ ದೌರ್ಜನ್ಯ ಎಸಗಿದ್ದರೂ ಧರ್ಮಾಧಿಕಾರಿಯವರು ದನಿ ಎತ್ತದೆ ಸುಮ್ಮನಿರುವುದಾದರೂ ಏಕೆ ಎಂದು ಜನತಾ ಪಕ್ಷದ ಅಧ್ಯಕ್ಷೆ ಬಿ.ಟಿ‌.ಲಲಿತಾನಾಯಕ ಪ್ರಶ್ನಿಸಿದರು.

ಧರ್ಮಸ್ಥಳ, ತಿರುಪತಿಗಳು ತಲೆ ಬೋಳಿಸಿ ಕಾಣಿಕೆ ಪಡೆಯುವುದಕ್ಕಾಗಿ ಮಾತ್ರವೇ ಇವೆಯೆ ಎಂದೂ ಪ್ರಶ್ನಿಸಿದ ಅವರು ಇಂತಹ ಘಟನೆಗಳು ನಡೆದಾಗ ನೊಂದವರಿಗೆ ಸಾಂತ್ವನ ಹೇಳುವ ಮೂಲಕವಾದರೂ ಕನಿಷ್ಠ ಜನರ ಋಣ ತೀರಿಸಬೇಕು ಎಂದು ಇಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು‌.

ಇಂತಹ ಘಟನೆ ನಡೆಯದಂತೆ ಧರ್ಮಾಧಿಕಾರಿಗಳು ಬುದ್ಧಿ ಹೇಳಬೇಕು. ದೇವರು ಹಾಗೂ ಧರ್ಮ ಇರುವುದೇ ಮನುಷ್ಯರನ್ನು ನೋಡುವುದರಲ್ಲಿ ಎಂದು ಪ್ರತಿಪಾದಿಸಿದರು.

ದೇವರು ಹಾಗೂ ಧರ್ಮದ ಮೂಲಾರ್ಥವನ್ನೇ ಕುಲಗೆಡಿಸಲಾಗಿದೆ. ಧರ್ಮದ್ರೋಹ, ರಾಜದ್ರೋಹ, ಜನದ್ರೋಹದ ಕೆಲಸಗಳು ನಿರಂತರವಾಗಿ ನಡೆಯುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಶ್ರೀರಾಮಸೇನೆ, ಬಜರಂಗದಳದಂತಹ ಸಂಘಟನೆಗಳು ಸರ್ಕಾರವನ್ನು ಆಳುತ್ತಿವೆ. ಒಂದು ಕೋಮಿಗಾಗಿ ಜನರಲ್ಲಿ ಭೀತಿ ಸೃಷ್ಟಿಸಲಾಗುತ್ತಿದೆ. ಸೋದರತ್ವದ ದೇಶವನ್ನು ಒಡೆಯಲಾಗುತ್ತಿದೆ ಎಂದು ಕಿಡಿಕಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT