ಗುರುವಾರ , ಜೂಲೈ 9, 2020
28 °C

ಮೈಸೂರು | ಕಿರುಕುಳ ತಪ್ಪಿಸಿ: ಮೊರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ಸಮರ್ಪಕ ದಾಖಲೆ ಇರುವ ಜಮೀನು ಖರೀದಿಸಿದ್ದರೂ, ಕೆಲವರು ಅನಗತ್ಯವಾಗಿ ಕಿರುಕುಳ ನೀಡುತ್ತಿದ್ದಾರೆ’ ಎಂದು ಎಚ್‌.ಎಸ್.ಶೋಭಾ, ವಿ.ಸುಚಿತ್ರಾ ದೂರಿದರು.

‘ಮೈಸೂರು ತಾಲ್ಲೂಕಿನ ವರುಣಾ ಹೋಬಳಿಯ ಭುಗತಹಳ್ಳಿ ಗ್ರಾಮದಲ್ಲಿ ನಾವು ಜಮೀನು ಖರೀದಿಸಿದ್ದೇವೆ. ಈ ಜಮೀನಿಗೆ ಸಂಬಂಧಿಸಿದ ಯಾವೊಂದು ತಕರಾರು ಇಲ್ಲ. ಆದರೂ ಕೆಲವರು ದುರುದ್ದೇಶದಿಂದ ನಮಗೆ ಕಿರುಕುಳ ನೀಡುತ್ತಿದ್ದಾರೆ’ ಎಂದು ಇಬ್ಬರೂ ನಗರದಲ್ಲಿ ಮಂಗಳವಾರ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

‘ಒಂದು ವರ್ಷದಿಂದಲೂ ಕ್ರಯದಾರರಾದ ನಮಗೆ ಮಾನಸಿಕ ಕಿರುಕುಳ ನೀಡುವ ಜೊತೆಗೆ, ಜಮೀನಿನ ಅಭಿವೃದ್ಧಿಗೂ ಆಸ್ಪದ ಕೊಡುತ್ತಿಲ್ಲ. ಕಿಡಿಗೇಡಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ನಮಗೆ ನ್ಯಾಯ ಒದಗಿಸಿಕೊಡಿ’ ಎಂದು ಮನವಿ ಮಾಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.