ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೀರ್ಪು ಸ್ವಾಗತಿಸಿ ನಗರದಲ್ಲಿ ಸಂಭ್ರಮ

ಸಿಹಿ ಹಂಚಿದ ಬಿಜೆಪಿ, ಸಂಘ ಪರಿವಾರದ ಕಾರ್ಯಕರ್ತರು: ಪೊಲೀಸರಿಂದ ಬಿಗಿ ಬಂದೋಬಸ್ತ್‌
Last Updated 1 ಅಕ್ಟೋಬರ್ 2020, 8:07 IST
ಅಕ್ಷರ ಗಾತ್ರ

ಮೈಸೂರು: ಬಾಬರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು ಸ್ವಾಗತಿಸಿ ಬಿಜೆಪಿ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಬುಧವಾರ ನಗರದಲ್ಲಿ ಸಂಭ್ರಮಿಸಿದರು.

ಪ್ರಕರಣದಲ್ಲಿ ಬಿಜೆಪಿ ಮುಖಂಡ ರಾದ ಎಲ್‌.ಕೆ.ಅಡ್ವಾಣಿ, ಮುರಳಿ ಮನೋಹರ ಜೋಶಿ ಸೇರಿದಂತೆ 32 ಮಂದಿ ದೋಷಮುಕ್ತರಾದ ಹಿನ್ನೆಲೆಯಲ್ಲಿ ಕಾರ್ಯಕರ್ತರು ಅಗ್ರಹಾರ ವೃತ್ತದಲ್ಲಿ ಪಟಾಕಿ ಸಿಡಿಸಿ ಸಾರ್ವಜನಿಕರಿಗೆ ಸಿಹಿ ವಿತರಿಸಿದರು.

ಬಿಜೆಪಿ ನಗರ ಘಟಕದ ಅಧ್ಯಕ್ಷ ಶ್ರೀವತ್ಸ ಮಾತನಾಡಿ, ‘ಇದೊಂದು ಐತಿಹಾಸಿಕ ತೀರ್ಪು. 28 ವರ್ಷಗಳಿಂದ ಬಿಜೆಪಿ ಹಾಗೂ ಸಂಘ ಪರಿವಾರದ ಮುಖಂಡರ ಮೇಲಿದ್ದ ಆರೋಪ ಈಗ ಸುಳ್ಳಾಗಿದೆ. ಈ ತೀರ್ಪನ್ನು ನಾನು ಸ್ವಾಗತಿಸುತ್ತೇನೆ’ ಎಂದರು.

ಬಿಜೆಪಿ ಮಾಧ್ಯಮ ಪ್ರಮುಖ ಪ್ರದೀಪ್‌ ಕುಮಾರ್‌, ‘ತನ್ನನ್ನು ನಂಬಿ ದವರನ್ನು ಶ್ರೀರಾಮ ಎಂದಿಗೂ ಕೈಬಿ ಡುವುದಿಲ್ಲ. ಮಂದಿರಕ್ಕೆ ಹೋರಾಡಿದ ಎಲ್ಲರೂ ದೋಷಮುಕ್ತರಾಗಿರುವುದು ನ್ಯಾಯಕ್ಕೆ ಸಂದ ಜಯ. ರಾಮ ಮಂದಿ ರಕ್ಕೆ ಹೋರಾಡಿದ ಎಲ್ಲರ ಜೀವನ ಚರಿತ್ರೆಯನ್ನು ಪುಸ್ತಕದಲ್ಲಿ ಬಿತ್ತರಿಸುವ ಮೂಲಕ ಜಗತ್ತಿಗೆ ಪರಿಚಯಿಸಬೇಕು. ಈ ವಿಚಾರವಾಗಿ ದೇಶವೇ ಸಂಭ್ರಮಿಸುತ್ತಿದೆ’ ಎಂದರು.

ಪಾಲಿಕೆ ಮಾಜಿ ಸದಸ್ಯ ಎಂ.ಡಿ.ಪಾರ್ಥ ಸಾರಥಿ, ಯುವ ಮುಖಂಡರಾದ ಎನ್.ಮಧು, ಬಿಜೆಪಿ ಯುವಮೋರ್ಚಾ ನಗರ ಘಟಕ ಉಪಾಧ್ಯಕ್ಷ ಕಾರ್ತಿಕ್‌ ಕುಮಾರ್, ಮಹದೇವಪ್ರಸಾದ್, ಪ್ರಶಾಂತ್‌ ಭಾರ ದ್ವಾಜ್‌, ಹರೀಶ್ ನಾಯ್ಡು, ದೀಪಕ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT