ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾಧಿಕಾರಿ ಮೊಬೈಲ್‌ ಸಂಖ್ಯೆ ಕೊಟ್ಟ ಸಂಪರ್ಕಿತ!‌

Last Updated 25 ಜುಲೈ 2020, 16:45 IST
ಅಕ್ಷರ ಗಾತ್ರ

ಮೈಸೂರು: ಹೋಂ ಕ್ವಾರಂಟೈನ್‌ನಲ್ಲಿದ್ದ ಪ್ರಾಥಮಿಕ ಸಂಪರ್ಕಿತನೊಬ್ಬ ತನ್ನ ಮೊಬೈಲ್‌ ಸಂಖ್ಯೆ ಬದಲು, ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್‌ ಅವರ ಸಂಖ್ಯೆ ನೀಡಿ ನಿಯಂತ್ರಣ ಕೊಠಡಿ ಸಿಬ್ಬಂದಿಯ ದಿಕ್ಕು ತಪ್ಪಿಸಿರುವ ಪ್ರಸಂಗ ನಗರದಲ್ಲಿ ನಡೆದಿದೆ.

ಕ್ವಾರಂಟೈನ್‌ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡಲಾಗುತ್ತಿದೆಯೇ ಎಂಬ ಮಾಹಿತಿ ಪಡೆಯಲು ಆ ವ್ಯಕ್ತಿ ನೀಡಿದ್ದ ಸಂಖ್ಯೆಗೆ ಸಿಬ್ಬಂದಿ ಕರೆ ಮಾಡಿದ್ದಾರೆ. ಆದರೆ, ಅದು ಜಿಲ್ಲಾಧಿಕಾರಿಗೆ ಹೋಗಿದೆ. ಈ ವಿಚಾರ ಗೊತ್ತಾಗುತ್ತಿದ್ದಂತೆ ಸಿಬ್ಬಂದಿ ಕಕ್ಕಾಬಿಕ್ಕಿಯಾಗಿದ್ದಾರೆ. ಆ ವ್ಯಕ್ತಿಯು ತನ್ನ ಮೊಬೈಲ್‌ ಸಂಖ್ಯೆ ಬದಲು ಜಿಲ್ಲಾಧಿಕಾರಿ ಸಂಖ್ಯೆ ನೀಡಿರುವುದು ಅವರಿಗೆ ಗೊತ್ತಾಗಿದೆ. ಆ ವ್ಯಕ್ತಿಯ ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದಾರೆ.

ಈ ವಿಚಾರವನ್ನು ಜಿಲ್ಲಾಧಿಕಾರಿ ಕೂಡ ಖಚಿತಪಡಿಸಿದ್ದು, ‘ಏಕೆ ಈ ರೀತಿ ಮಾಡಿರಬಹುದು ಎಂಬುದನ್ನು ಪರಿಶೀಲಿಸುತ್ತಿದ್ದೇವೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT