ಭಾನುವಾರ, ಸೆಪ್ಟೆಂಬರ್ 20, 2020
21 °C
ಕೋವಿಡ್‌ ನಿಯಂತ್ರಣ–ಚಾಮರಾಜ ಕ್ಷೇತ್ರದ ಟಾಸ್ಕ್‌ ಫೋರ್ಸ್‌ ಸಭೆ

ಕೋವಿಡ್‌: ಹೆಚ್ಚು ಪ‍ರೀಕ್ಷೆ ನಡೆಸಲು ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಒಂದೊಂದು ಕ್ಷೇತ್ರಕ್ಕೆ ಒಂದು ರೀತಿ ಮಾಡುತ್ತಿದ್ದೀರಿ. ನಾನು ಒಂದು ವಲಯಕ್ಕೆ ಒಂದು ಆಂಬುಲೆನ್ಸ್‌ ನೀಡಿ ಎಂದು ಹೇಳಿದ್ದೆ. ಆದರೆ, ನೀವು ಅದನ್ನು ಮಾಡಿದ್ದೀರಾ’ ಎಂದು ಶಾಸಕ ಎಲ್‌.ನಾಗೇಂದ್ರ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಜಿಲ್ಲಾ ಪಂಚಾಯಿತಿಯಲ್ಲಿ ಬುಧವಾರ ನಡೆದ ಚಾಮರಾಜ ವಿಧಾನಸಭಾ ಕ್ಷೇತ್ರದ ಕೋವಿಡ್-19 ಟಾಸ್ಕ್‌ ಫೋರ್ಸ್‌ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

‌ಕೋವಿಡ್‌ ನಿಯಂತ್ರಣಕ್ಕಾಗಿ ವಾರ್ಡ್‌ವಾರು ಕೈಗೊಂಡಿರುವ ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾಹಿತಿ ಪಡೆದರು. ಆಂಟಿಜೆನ್ ಪರೀಕ್ಷಾ ಕೇಂದ್ರಗಳನ್ನು ವಲಯವಾರು ಪ್ರತಿ ನಿತ್ಯ ನಡೆಸಲು
ಮೂರು ಸ್ಥಳಗಳನ್ನು ಗುರುತಿಸಲಾಯಿತು. ಒಂದು ಮೊಬೈಲ್‌ ಪರೀಕ್ಷಾ ಕೇಂದ್ರವನ್ನು ಪ್ರಾರಂಭಿಸಲು ತೀರ್ಮಾನಿಸ
ಲಾಯಿತು.

‘ಹೋಂ ಐಸೊಲೇಷನ್‌ನಲ್ಲಿರುವ ಸೋಂಕಿತರಿಗೆ ಪರೀಕ್ಷಾ ಫಲಿತಾಂಶ ಬಂದ 3 ಗಂಟೆಗಳ ಒಳಗಾಗಿ ಅಗತ್ಯ ಔಷದಿ, ಸಲಹೆ, ಸೂಚನೆ ನೀಡಬೇಕು. ಅದಕ್ಕಾಗಿ ಅವರ ಮನೆಗೆ ವೈದ್ಯರು ತೆರಳಬೇಕು. ರಾಜ್ಯ ಸರ್ಕಾರದಿಂದ ಈಗಾಗಲೇ ಸಾಕಷ್ಟು ಔಷಧ ಬಂದಿದೆ’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

‘ಸಿಐಟಿಬಿ ಚೌಲ್ಟ್ರಿಯಲ್ಲಿ ಮೂರು ದಿನಗಳಿಂದ ಕೋವಿಡ್‌ ಪರೀಕ್ಷೆ ಮಾಡಲಾಗಿದೆ. ವಿಕ್ರಾಂತ್‌ ಕಾರ್ಖಾನೆ ನೌಕರರು ಬಂದು ಇಲ್ಲಿ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಆದ್ದರಿಂದ ಹೆಚ್ಚಿಗೆ ಪಾಸಿಟಿವ್ ಪ್ರಕರಣಗಳು ಬಂದಿವೆ. ಬೇರೆ ಕಡೆ ಸಹ ಪರೀಕ್ಷೆ ಮಾಡಲು ವ್ಯವಸ್ಥೆ ಮಾಡಬೇಕು. ಮುಂದಿನ ದಿನಗಳಲ್ಲಿ ನಿತ್ಯ ಹೆಚ್ಚು ಕೋವಿಡ್ ಪರೀಕ್ಷೆಗಳನ್ನು ನಡೆಸಿ, ಸೋಂಕಿತರನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡಬೇಕು’ ಎಂದು ಹೇಳಿದರು.

ಶೀಘ್ರದಲ್ಲಿಯೇ ಕೆಆರ್‌ಎಸ್‌ ರಸ್ತೆಯಲ್ಲಿರುವ ಟ್ರಾಮಾ ಸೆಂಟರ್‌ನಲ್ಲಿ ಲಭ್ಯವಿರುವ ಸುಮಾರು 280 ಬೆಡ್‌ಗಳನ್ನು ಮುಂದಿನ ನಾಲ್ಕೈದು ದಿನಗಳಲ್ಲಿ ಸಜ್ಜುಗೊಳಿಸಲಾಗುವುದು. ಸುಮಾರು 40 ವೆಂಟಿಲೇಟರ್‌ ಹಾಗೂ ಆಕ್ಷಿಜನ್‌ ಸೌಲಭ್ಯವಿದೆ. ಕೆ.ಆರ್‌.ಆಸ್ಪತ್ರೆಯಲ್ಲಿರುವ ಕೊರೊನಾ ಸೋಂಕಿತರನ್ನು ಅಲ್ಲಿಗೆ ಸ್ಥಳಾಂತರ ಮಾಡಲಾಗುವುದು ಎಂದು ಹೇಳಿದರು.

ಬಯಲು ರಂಗಮಂದಿರ ಸಹ ಖಾಲಿ ಇದೆ‌. ಅದನ್ನು ಸಹ ಇದಕ್ಕೆ ಉಪಯೋಗಿಸಬಹುದು. ಯಾರಿಗೂ ತೊಂದರೆ ಆಗದಂತೆ ಹೊರಗಡೆ ಪರೀಕ್ಷೆ ಮಾಡಬಹುದು ಎಂಬ ಸಲಹೆಯೂ ಕೇಳಿಬಂತು.

ಸಭೆಯಲ್ಲಿ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್, ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ, ಪಾಲಿಕೆ ಸದಸ್ಯರಾದ ಎಂ.ಎಸ್.ಸುಬ್ಬಯ್ಯ, ರವೀಂದ್ರ, ರಂಗಸ್ವಾಮಿ, ವೇದಾವತಿ ಹಾಗೂ ಟಾಸ್ಕ್ ಫೋರ್ಸ್‌ ಸಮಿತಿ ಸದಸ್ಯ ಕಾರ್ಯದರ್ಶಿ ಬಿಳಿಗಿರಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.